

ಮೇಷ: ನೀವು ಜಯವನ್ನು ಸಾಧಿಸಲು ಅಗತ್ಯವಾದ ಪೋಷಕ ಶಕ್ತಿಗಳು ನೆರವಿಗೆ ಬರುವಂತಹ ಮಂಗಳಮಯ ಸಾಧ್ಯತೆ ಇದೆ. ಶುಭಸಂಖ್ಯೆ: 1
ವೃಷಭ: ಆಹಾರದ ಬಗ್ಗೆ ಎಚ್ಚರವಿರಲಿ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಕೂಡಲೇ ವೈದ್ಯರನ್ನು ಸಂರ್ಪಸಿ. ಶುಭಸಂಖ್ಯೆ: 3
ಮಿಥುನ: ಅತಿಯಾದ ಆತ್ಮವಿಶ್ವಾಸದಿಂದ ನಿಮ್ಮ ಮನಸ್ಸು ಭ್ರಮೆಯಲ್ಲಿ ಮುಳುಗದಂತೆ ನೋಡಿಕೊಂಡರೆ ಒಳಿತಾಗಲಿದೆ. ಶುಭಸಂಖ್ಯೆ: 2
ಕಟಕ: ಚತುರತೆಯಿಂದ ಕೂಡಿರುವ ನಿಮ್ಮ ವಿಶಿಷ್ಟವಾದ ಪ್ರತಿಭೆಗೆ ಸುಯೋಗ್ಯವಾದ ಮನ್ನಣೆ ಲಭ್ಯವಾಗಲಿದೆ. ಶುಭಸಂಖ್ಯೆ: 4
ಸಿಂಹ: ಸ್ನೇಹಿತರು, ಬಂಧುಗಳು, ಸಹೋದ್ಯೋಗಿಗಳ ಕುರಿತಾಗಿ ಹೆಚ್ಚಿನ ಎಚ್ಚರದಿಂದಿರಿ. ಅನಗತ್ಯ ಪ್ರತಿÅಯೆ ನೀಡದೆ ಸುಮ್ಮನಿರಿ. ಶುಭಸಂಖ್ಯೆ: 6
ಕನ್ಯಾ: ನಿಮ್ಮ ದುಬಾರಿಯಾದ ವಸ್ತುಗಳ ಪ್ರದರ್ಶನ ಮಾಡಲು ಹೋಗದಿರಿ. ಅಜಾಗ್ರತೆಯಿಂದ ನಾಪತ್ತೆಯಾಗಿಬಿಟ್ಟೀತು. ಶುಭಸಂಖ್ಯೆ: 5
ತುಲಾ: ಆಡುವ ಮಾತಿನಲ್ಲಿ ನಿಯಂತ್ರಣವನ್ನು ತಪ್ಪಿದರೆ ಗ್ರಹಚಾರ ದೋಷವು ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ. ಶುಭಸಂಖ್ಯೆ: 8
ವೃಶ್ಚಿಕ: ಯಾವುದನ್ನೂ ಯಾರನ್ನೂ ಅತಿಯಾಗಿ ನಂಬದಿರಿ. ನಂಬಿಯೂ ನಂಬದಂತಿರಿ. ಸಮತೋಲನದಿಂದ ಜಯ. ಶುಭಸಂಖ್ಯೆ: 7
ಧನಸ್ಸು: ಪ್ರತಿ ಬಾರಿಯೂ ನಿಮ್ಮದೇ ಗೆಲುವು ನಿಶ್ಚಿತ ಎಂದು ಭ್ರಮೆಯಲ್ಲಿ ಇರಬೇಡಿ. ಇಂದಂತೂ ಸಾಕಷ್ಟು ಎಚ್ಚರ ಇದ್ದೇ ಇರಲಿ. ಶುಭಸಂಖ್ಯೆ: 9
ಮಕರ: ದಿನವು ನೀರಸವಾಗಿದೆ ಎಂದು ಖಿನ್ನತೆಯನ್ನು ಹೊಂದಬೇಡಿ. ಆಪ್ತರೊಬ್ಬರ ನೆರವಿನಿಂದ ಕಾರ್ಯಗಳಲ್ಲಿ ಸಿದ್ಧಿ ಸಿಗಲಿದೆ. ಶುಭಸಂಖ್ಯೆ: 1
ಕುಂಭ: ಎಂದೋ ಮೂಲೆಗೆ ಹಾಕಿದ್ದ ಹಳೆಯ ಕಾಗದಪತ್ರದ ಅಗತ್ಯ ಇಂದು ಬರಬಹುದು. ಅದಕ್ಕೆ ಸಜ್ಜಾಗಿದ್ದರೆ ಉತ್ತಮ. ಶುಭಸಂಖ್ಯೆ: 2
ಮೀನ: ಜಗತ್ತಿನಲ್ಲಿ ಯಾರೂ ಕೂಡ ಪರಿಪೂರ್ಣ ವ್ಯಕ್ತಿಗಳಲ್ಲ. ನೀವು ಆ ನಿಟ್ಟಿನಲ್ಲಿ ಶ್ರಮಿಸಿದರೆ ನಿಶ್ಚಿತವಾಗಿ ಲಾಭವಾಗಲಿದೆ. ಶುಭಸಂಖ್ಯೆ: 3