ನಿತ್ಯ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗಸ್ಥಳದಲ್ಲಿ ಅನಗತ್ಯ ಮಾತಿನ ಚಕಮಕಿಗಳು ಆಗುವ ಸಾಧ್ಯತೆಗಳು ಹೆಚ್ಚಾಗಿವೆ

Nitya-Bhavishya-vvani-1-2-1
Published on

ಮೇಷ: ಹಣದ ವಿಚಾರದಲ್ಲಿ ಹೆಚ್ಚಿನ ಚಿಂತೆಗಳು ಕಾಡುತ್ತವೆ. ನಿಮ್ಮ ಪಾಲಿಗೆ ಈ ದಿನ ದಕ್ಷಿಣ ದಿಕ್ಕು ಉತ್ತಮವಾಗಿದೆ. ಅದೃಷ್ಟ ಸಂಖ್ಯೆ: 3

ವೃಷಭ: ಉದ್ಯೋಗಸ್ಥಳದಲ್ಲಿ ಅನಗತ್ಯ ಮಾತಿನ ಚಕಮಕಿಗಳು ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಮೌನ ವಹಿಸಿ. ಅದೃಷ್ಟ ಸಂಖ್ಯೆ: 6

ಮಿಥುನ: ಅರ್ಧ ಮುಗಿಸಿದ ನಂತರ ನೀವು ಇಷ್ಟು ಹೊತ್ತು ಮಾಡಿದ ಕೆಲಸ ವ್ಯರ್ಥ ಎಂದು ಅರಿವಿಗೆ ಬರುತ್ತದೆ. ಅದೃಷ್ಟ ಸಂಖ್ಯೆ: 7

ಕಟಕ: ಎಲ್ಲೋ ಏನೋ ಎಡವಟ್ಟಾಗಿದೆ ಎಂದು ತಿಳಿಯುತ್ತದೆ. ಆದರೆ ಏನೆಂದು ಅರ್ಥವೇ ಆಗದು. ತಾಳ್ಮೆಯಿರಲಿ. ಅದೃಷ್ಟ ಸಂಖ್ಯೆ: 2

ಸಿಂಹ: ಸಾಲ ಕೊಡಿಸು, ಇಲ್ಲವೇ ಸಾಲ ತೀರಿಸು ಎಂದು ನಿಮ್ಮ ದಿನ ಸಾಲಮಯವಾಗುವ ಸಾಧ್ಯತೆಗಳೇ ಹೆಚ್ಚಾಗಿದೆ. ಅದೃಷ್ಟ ಸಂಖ್ಯೆ: 1

ಕನ್ಯಾ: ಬಹಳ ತಡವಾಗಿ ತಪ್ಪೊಂದನ್ನು ಮಾಡಿದ್ದು ಅರಿವಿಗೆ ಬರುತ್ತದೆ. ಹೆಚ್ಚು ನಷ್ಟ ಆಗುವ ಮುನ್ನ ಎಚ್ಚರ ವಹಿಸಿ. ಅದೃಷ್ಟ ಸಂಖ್ಯೆ: 7

ತುಲಾ: ಹಗಲುಗನಸಿಗೆ ಕೊರತೆ ಇಲ್ಲ. ಕೈಯಲ್ಲಿ ಹಣದ ಕೊರತೆ. ಕನಸಿನ ಪಯಣದಲ್ಲಿ ಹೇಗೋ ದಿನ ದೂಡುವಿರಿ. ಅದೃಷ್ಟ ಸಂಖ್ಯೆ: 8

ವೃಶ್ಚಿಕ: ನೆನಪಿನ ಶಕ್ತಿ ನಿಮಗೆ ಉತ್ತಮವಾಗಿ ಸಹಾಯ ಮಾಡಿ ಆಗಬಹುದುದಾದ ಅವಮಾನ ಹಾಗೂ ನಷ್ಟಗಳನ್ನು ತಪ್ಪಿಸುತ್ತದೆ. ಅದೃಷ್ಟ ಸಂಖ್ಯೆ: 1

ಧನಸ್ಸು: ವ್ಯಾಪಾರ ಮಾಡುವವರಿಗೆ ನಷ್ಟ ಸಂಭವ. ಇತರರಿಗೆ ವೃಥಾ ಖರ್ಚು. ಸಾಲ ಕೊಟ್ಟರೆ ಮೋಸ ಹೋಗುತ್ತೀರಿ. ಅದೃಷ್ಟ ಸಂಖ್ಯೆ: 5

ಮಕರ: ಅನಿವಾರ್ಯವಾಗಿ ಸುಳ್ಳು ಹೇಳಿ ಅಸ್ತಿತ್ವವನ್ನು ಉಳಿಸಿಕೊಳ್ಳುವಿರಿ. ಭಾವನಾತ್ಮಕವಾಗಿ ಹೆಚ್ಚು ಸ್ಪಂದಿಸುತ್ತೀರಿ. ಅದೃಷ್ಟ ಸಂಖ್ಯೆ: 6

ಕುಂಭ: ನಿಮಗೆ ಆಗದವರು ನಿಮ್ಮಿಷ್ಟದ ಸ್ಥಳದಲ್ಲಿ ಕೂರಬಹುದು. ಇದರಿಂದ ನಿಮ್ಮ ಮನಸ್ಸು ತಳಮಳಗೊಂಡೀತು. ಅದೃಷ್ಟ ಸಂಖ್ಯೆ: 2

ಮೀನ: ಅನ್ಯರಿಗೆ ನೆರವು ನೀಡಲು ಹೋಗಿ ಬಿಡಿಸಿಕೊಳ್ಳಲಾರದ ಸ್ಥಿತಿಗೆ ಸಿಲುಕಬಹುದು. ಹೀಗಾಗಿ ಎಚ್ಚರ ಇರಲಿ. ಅದೃಷ್ಟ ಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net