

ಮೇಷ: ಮಂಗಳ ಕಾರ್ಯದಲ್ಲಿ ಭಾಗಿಯಾಗುವಿರಿ. ಮಕ್ಕಳಿಂದ ಶುಭವಾರ್ತೆ ಕೇಳಿಬರಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗುವುದು. ಶುಭಸಂಖ್ಯೆ: 5
ವೃಷಭ: ಬ್ಯಾಂಕಿಂಗ್ ವ್ಯವಹಾರಸ್ಥರಿಗೆ ಆದಾಯ. ಬಂಧುಗಳಿಂದ ಸಕಾಲಕ್ಕೆ ಸಹಕಾರ ಸಿಗಲಿದೆ. ದೈಹಿಕ ಬಳಲಿಕೆ ಕಾಡಬಹುದು. ಶುಭಸಂಖ್ಯೆ: 6
ಮಿಥುನ: ಬಹುದಿನಗಳಿಂದ ತೊಂದರೆ ಕೊಡುತ್ತಿದ್ದ ಶತ್ರುನಾಶವಾಗಿ ಮನಶಾಂತಿ. ತೀರ್ಥಕ್ಷೇತ್ರ ದರ್ಶನ ಮಾಡುವಿರಿ. ಒಳ್ಳೆಯ ದಿನ. ಶುಭಸಂಖ್ಯೆ: 5
ಕಟಕ: ಉದ್ಯೋಗದಲ್ಲಿ ಬಡ್ತಿ ದೊರೆಯುವುದು. ಬಾಕಿ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಆರೋಗ್ಯದಲ್ಲಿ ಚೇತರಿಕೆ ಕಾಣುವುದು. ಶುಭಸಂಖ್ಯೆ: 9
ಸಿಂಹ: ಆರೋಗ್ಯದಲ್ಲಿ ಸುಧಾರಣೆಯಾಗಿ ಕಿರಿಕಿರಿ ತಪ್ಪುವುದು. ವಿದ್ಯಾಭ್ಯಾಸದಲ್ಲಿ ಪ್ರಗತಿ ಇದೆ. ಮಿತ್ರರಲ್ಲಿ ದ್ವೇಷ ಸಾಧನೆ ಒಳ್ಳೆಯದಲ್ಲ. ಶುಭಸಂಖ್ಯೆ: 6
ಕನ್ಯಾ: ಚುರುಕುತನದ ಕೆಲಸಗಳಲ್ಲಿ ಜಯ. ಅಗ್ನಿಯಿಂದ ತೊಂದರೆ ಆಗಬಹುದು, ಎಚ್ಚರವಿರಲಿ. ಹಣಕಾಸಿನ ಸಂಸ್ಥೆಯವರಿಗೆ ನಷ್ಟ. ಶುಭಸಂಖ್ಯೆ: 3
ತುಲಾ: ಹಣದ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಅಧಿಕ ತಿರುಗಾಟ ಮಾಡಬೇಕಾಗುವುದು. ಸಲ್ಲದ ಅಪವಾದ ಬರುವುದು. ಶುಭಸಂಖ್ಯೆ: 9
ವೃಶ್ಚಿಕ: ಭೂಮಿ ಕಳೆದುಕೊಳ್ಳುವ ಸಂಭವ. ಎಚ್ಚರದಿಂದ ವ್ಯವಹರಿಸಿ. ಸರ್ಕಾರಿ ನೌಕರರಿಗೆ ಬಡ್ತಿ ಸಾಧ್ಯತೆ.ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 2
ಧನುಸ್ಸು: ದೂರ ಪ್ರಯಾಣ ಮಾಡಬೇಕಾಗುವುದು. ಅಧಿಕಾರಿಗಳಲ್ಲಿ ಕಲಹ ಉಂಟಾಗಬಹುದು. ಸಾಲ ಮರುಪಾವತಿ ಮಾಡುವಿರಿ. ಶುಭಸಂಖ್ಯೆ:3
ಮಕರ: ಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ, ಎಚ್ಚರದಿಂದಿರಿ. ಚಂಚಲ ಮನಸ್ಸು, ಉತ್ತಮ ಬುದ್ಧಿಶಕ್ತಿ ಪ್ರದರ್ಶಿಸುವಿರಿ. ಶುಭಸಂಖ್ಯೆ: 4
ಕುಂಭ: ವಾಹನ ರಿಪೇರಿ ಮಾಡಿಸಬೇಕಾಗುವುದು. ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ ಆಗಲಿದೆ. ಅಧಿಕಾರ ಪ್ರಾಪ್ತಿಯಾಗುವ ಯೋಗವಿದೆ. ಶುಭಸಂಖ್ಯೆ: 1
ಮೀನ: ಸಮಾಜದಲ್ಲಿ ಗೌರವ ಲಭಿಸುವುದು. ಸಾಹಿತ್ಯ ಕ್ಷೇತ್ರ ದಲ್ಲಿ ಪ್ರಗತಿಯಾಗುವುದು. ವೈಯಕ್ತಿಕ ಸಂಬಂಧಗಳಲ್ಲಿ ಸಂತಸ ಮೂಡುವುದು. ಶುಭಸಂಖ್ಯೆ: 6