ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ನಂಬಿದವರಿಂದಲೇ ಮೋಸ

nity
Published on

ಮೇಷ: ಪ್ರಯತ್ನಕ್ಕೆ ತಕ್ಕ ಪ್ರತಿಫಲ. ಗೆಳೆಯರಿಂದ ಮೋಸ. ನಿಮ್ಮ ಆತ್ಮಬಲ ದೈವ ಬಲದಿಂದ ನಿಮ್ಮ ಕೆಲಸಕ್ಕೆ ಯಶಸ್ಸು ಸಿಗಲಿದೆ. ಶುಭಸಂಖ್ಯೆ: 4

ವೃಷಭ: ಹಣದ ವಿಪರೀತ ಖರ್ಚು. ಮಾನಸಿಕವಾಗಿ ಅಶಾಂತಿ ಉಂಟಾಗಬಹುದು. ದಿನಾಂತ್ಯದಲ್ಲಿ ಆತ್ಮೀಯರ ಭೇಟಿ. ಶುಭಸಂಖ್ಯೆ: 2

ಮಿಥುನ: ನಿಮ್ಮ ವಾಗ್ಝರಿಯಿಂದ ಸಮಸ್ಯೆ ಪರಿಹಾರ ಮಾಡಿದ ಸಮಾಧಾನ. ವ್ಯಾಪಾರದಲ್ಲಿ ಅಧಿಕ ಲಾಭ. ಮನೆಯಲ್ಲಿ ಸಡಗರ. ಶುಭಸಂಖ್ಯೆ: 2

ಕಟಕ: ಮಕ್ಕಳ ಅವಿಧೇಯತೆ ಮನಸ್ಸಿಗೆ ನೋವುಂಟು ಮಾಡುವುದು. ಸಂಗಾತಿಯಿಂದ ಸಮಾಧಾನ. ದೃಢ ನಿರ್ಧಾರದಲ್ಲಿ ಗೊಂದಲ. ಶುಭಸಂಖ್ಯೆ: 3

ಸಿಂಹ: ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಪ್ರಯತ್ನವನ್ನು ಮುಂದುವರಿಸಿ. ಹಿತಶತ್ರುಗಳಿಂದ ತೊಂದರೆ. ಅಸಮಾಧಾನ. ಶುಭಸಂಖ್ಯೆ:1

ಕನ್ಯಾ: ಆತ್ಮೀಯ ಮಿತ್ರರು ಶತ್ರುವಾಗಿ ಪರಿವರ್ತನೆ. ನಂಬಿದವರಿಂದಲೇ ಮೋಸ. ವಿದ್ಯಾರ್ಥಿಗಳಿಗೆ ಶುಭದಿನ. ಸಂಜೆ ಶುಭವಾರ್ತೆ. ಶುಭಸಂಖ್ಯೆ: 3

ತುಲಾ: ಅನಗತ್ಯವಸ್ತುಗಳಿಗಾಗಿ ದುಂದುವೆಚ್ಚ. ಬರಬೇಕಾಗಿದ್ದ ಹಣದ ವಿಷಯದಲ್ಲಿ ನಿರಾಸೆ. ಪರ್ಯಾಯ ವ್ಯವಸ್ಥೆಗೆ ಚಿಂತನೆ. ಶುಭಸಂಖ್ಯೆ: 7

ವೃಶ್ಚಿಕ: ಸಮಯ ಸಾಧಕರಿಂದ ಅಂತರ ಕಾಯ್ದುಕೊಳ್ಳಿ. ನಂಬಿದವರಿಂದಲೇ ಮೋಸ. ಸಂಗೀತಗಾರರಿಗೆ ವಿಶೇಷ ವೇದಿಕೆ. ಆಯಾಸ. ಶುಭಸಂಖ್ಯೆ: 6

ಧನಸ್ಸು: ಕಷ್ಟಪಟ್ಟರೆ ಸುಖ ಎನ್ನುವುದಕ್ಕೆ ಬದ್ಧರಾಗಿ. ನಟರಿಗೆ ವಿಶೇಷ ಬೆಂಬಲ. ಸಾಮಾಜಿಕ ಕಿರಿಕಿರಿ. ಉನ್ನತ ವಿದ್ಯಾಭ್ಯಾಸದಲ್ಲಿ ಸಾಧನೆ. ಶುಭಸಂಖ್ಯೆ: 5

ಮಕರ: ಯಾಂತ್ರಿಕ ಜೀವನದಿಂದ ವಿಮುಖ. ದೂರದ ಊರಿಗೆ ಪ್ರಯಾಣ. ಹಳೆಯ ಗೆಳೆಯರು ಸಿಗು ವರು. ಧಾರ್ವಿುಕ ಕ್ಷೇತ್ರಕ್ಕೆ ಭೇಟಿ. ಶುಭಸಂಖ್ಯೆ: 3

ಕುಂಭ: ವೈದ್ಯರ ಸಲಹೆಯನ್ನು ಶಿಸ್ತಿನಿಂದ ಪಾಲಿಸಿ. ನಿಮಗೆ ಸಂಬಂಧವಿರದ ವಿಷಯದಿಂದ ಅಂತರವಿರಲಿ. ಮಕ್ಕಳಿಂದ ಹೆಮ್ಮೆ. ಶುಭಸಂಖ್ಯೆ: 7

ಮೀನ : ನಿಮ್ಮ ಬಗ್ಗೆ ಟೀಕೆ ಮಾಡುವವರ ಬಗ್ಗೆ ನಿರ್ಲಕ್ಷಿಸಿ. ವಿಶೇಷ ಉದ್ದಿಮೆ ಪ್ರಾರಂಭ ನಿರ್ಧಾರ. ಮಗನ ಮದುವೆಗೆ ಮುಹೂರ್ತ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net