

ಮೇಷ: ಹಳೆಯ ಸಮಸ್ಯೆ ನಿವಾರಣೆ. ಮಧ್ಯಾಹ್ನದ ನಂತರ ಶುಭ. ಆತ್ಮೀಯರೊಂದಿಗೆ ದಿನ ಕಳೆಯುವಿರಿ. ಶುಭಸಂಖ್ಯೆ: 6
ವೃಷಭ: ವೃತ್ತಿಯಲ್ಲಿ ಮೇಲೇರಲು ಆಪ್ತರಿಂದ ಸಹಾಯ. ಆಸ್ತಿ ವಿವಾದದಲ್ಲಿ ಅನವಶ್ಯಕ ತೊಂದರೆ. ಮಕ್ಕಳ ವಿಷಯದಲ್ಲಿ ಸಮಸ್ಯೆ. ಶುಭಸಂಖ್ಯೆ:1
ಮಿಥುನ: ಸಹಜವಾಗಿ ತಾಳ್ಮೆ ಸ್ವಭಾವದವರಾದ ನೀವು ಇಂದು ಕೋಪದಿಂದ ಸಿಡಿಯಬಹುದು. ಗುರು ಹಿರಿಯರ ಸಲಹೆ ಪಾಲಿಸಿ. ಶುಭಸಂಖ್ಯೆ: 2
ಕಟಕ: ನಿಮಗಿಂದು ಯಶಸ್ವೀ ದಿನ. ವೃತ್ತಿಯಲ್ಲಿ ಮತ್ತು ವ್ಯಾಪಾರದಲ್ಲಿ ವಿಶೇಷ ಲಾಭ ನಿಮ್ಮ ಪಾಲಾಗಲಿದೆ. ಆರ್ಥಿಕ ಚೇತರಿಕೆ. ಶುಭಸಂಖ್ಯೆ: 3
ಸಿಂಹ: ಎಲ್ಲ ಕ್ಷೇತ್ರಗಳಲ್ಲಿಯೂ ಜಯ ನಿಮ್ಮದೇ. ಸದುಪಯೋಗಪಡಿಸಿಕೊಳ್ಳಿ. ಆಸ್ತಿ ವಿವಾದ ಬಗೆಹರಿಸಿಕೊಳ್ಳಲು ಸಕಾಲ. ಶುಭಸಂಖ್ಯೆ: 6
ಕನ್ಯಾ: ವಿವಾಹದ ವಿಚಾರದಲ್ಲಿ ಪೂರಕ ಬೆಳವಣಿಗೆ. ಹಣಕಾಸಿನ ಪರಿಸ್ಥಿತಿ ಹದಗೆಟ್ಟು ತುಸು ಸಂಕಷ್ಟಕ್ಕೆ ಕಾರಣ ಆಗಬಹುದು. ಶುಭಸಂಖ್ಯೆ: 7
ತುಲಾ: ಹಿನ್ನಡೆಗಳಿಗೆ ಧೃತಿಗೆಡದೇ ಮುನ್ನಡೆಯಿರಿ. ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿ. ಕುಟುಂಬದಲ್ಲಿ ಸಮಾಧಾನ. ಶುಭಸಂಖ್ಯೆ: 6
ವೃಶ್ಚಿಕ: ಹಿತಶತ್ರುಗಳು ನಿಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಾರೆ. ಕಚೇರಿಯಲ್ಲಿ ಎಚ್ಚರಿಕೆಯಿಂದ ಇರಿ. ಆರ್ಥಿಕ ಒತ್ತಡ. ಶುಭಸಂಖ್ಯೆ:3
ಧನುಸ್ಸು: ಪರಿಸ್ಥಿತಿ ನಿಭಾಯಿಸಲಾಗದೆ ಕೈಚೆಲ್ಲುವಿರಿ. ಕುಟುಂಬದಲ್ಲಿ ಭಿನ್ನಮತ ಕಿರಿಕಿರಿ. ಹಿರಿಯರ ಸಲಹೆ ಪಡೆಯಿರಿ. ಶುಭಸಂಖ್ಯೆ: 4
ಮಕರ: ದೈನಂದಿನ ಒತ್ತಡದಿಂದ ಪಾರಾಗಲು ಇಷ್ಟ ದೇವರನ್ನು ಪ್ರಾರ್ಥಿಸಿ. ಕಾರ್ಯದ ಜಂಜಾಟದಲ್ಲಿ ಕುಟುಂಬವನ್ನು ನಿರ್ಲಕ್ಷಿಸಬೇಡಿ. ಶುಭಸಂಖ್ಯೆ: 4
ಕುಂಭ: ನಿಮ್ಮ ಕಾರ್ಯವೈಖರಿಯಿಂದ ಗಮನ ಸೆಳೆಯುವಿರಿ. ಆತ್ಮೀಯರ ಶ್ಲಾಘನೆ ಮುದ ನೀಡುವುದು. ದಿನಾಂತ್ಯಕ್ಕೆ ಶುಭ. ಶುಭಸಂಖ್ಯೆ: 4
ಮೀನ: ಆಪ್ತರೊಂದಿಗೆ ರ್ಚಚಿಸಿ. ಸಮಯೋಚಿತ ನಿರ್ಧಾರದಿಂದ ಆರ್ಥಿಕ ಮುಗ್ಗಟ್ಟು ಪರಿಹಾರ. ಆರೋಗ್ಯದಲ್ಲಿ ವ್ಯತ್ಯಯ. ಶುಭಸಂಖ್ಯೆ: 9