ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಲಾಭವಾಗಿ ಸಂತಸ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಾರ್ವಜನಿಕ ಜೀವನದಲ್ಲಿ ಮನ್ನಣೆ. ಬಂಧು- ಮಿತ್ರರಿಂದ ಸಹಾಯ. ಹಣಕಾಸಿನ ಪ್ರಗತಿ ಕಾಣಲಿದ್ದೀರಿ. ಶುಭಸಂಖ್ಯೆ: 6

ವೃಷಭ: ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ ನೀಡುವಿರಿ. ಮೇಲಧಿಕಾರಿಗಳಿಂದ ಕಿರಿಕಿರಿ. ಕುಟುಂಬದಲ್ಲಿ ಅನಾರೋಗ್ಯ. ಶುಭಸಂಖ್ಯೆ: 8

ಮಿಥುನ: ಬಹಳ ದಿನಗಳಿಂದ ಆಗದೇ ಇದ್ದ ಕೆಲಸ ಸಫಲ. ಸಾರ್ವಜನಿಕವಾಗಿ ವಿಶೇಷ ಪುರಸ್ಕಾರ. ಸಜ್ಜನರ ಸಹವಾಸ. ಶುಭಸಂಖ್ಯೆ: 2

ಕಟಕ: ಯತ್ನ ಕಾರ್ಯಗಳಲ್ಲಿ ಪ್ರಗತಿ. ಹಣಕಾಸಿನ ಚಟುವಟಿಕೆಗಳಲ್ಲಿ ಮೋಸ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಒತ್ತಡ. ಶುಭಸಂಖ್ಯೆ: 5

ಸಿಂಹ: ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ. ಸರ್ಕಾರಿ ಕ್ಷೇತ್ರದಲ್ಲಿ ವಿಶೇಷ ಲಾಭ. ಧರ್ಮಕಾರ್ಯದಲ್ಲಿ ಆಸಕ್ತಿ ವಹಿಸುವಿರಿ. ಶುಭಸಂಖ್ಯೆ:3

ಕನ್ಯಾ: ಅವ್ಯಕ್ತ ಭೀತಿ. ಕೂಡಿಟ್ಟ ಹಣ ಹೂಡಿಕೆಗೆ ನಿರ್ಧಾರ. ಆತ್ಮವಿಶ್ವಾಸಕ್ಕೆ ಧಕ್ಕೆ ತರುವ ಘಟನೆಗಳು. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 7

ತುಲಾ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಸಾರ್ವಜನಿಕವಾಗಿ ಗೌರವ ಪ್ರಾಪ್ತಿ. ಅನಿರೀಕ್ಷಿತವಾಗಿ ಧನಲಾಭವಾಗಿ ಸಂತಸ. ಶುಭಸಂಖ್ಯೆ: 4

ವೃಶ್ಚಿಕ: ಕೆಲಸಗಳಲ್ಲಿ ವಿಘ್ನ. ವೃಥಾ ತಿರುಗಾಟ. ಸಹೋದ್ಯೋಗಿಗಳಿಂದ ಕಿರಿಕಿರಿ. ಆರೋಗ್ಯದಲ್ಲಿ ವ್ಯತ್ಯಾಸ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 6

ಧನುಸ್ಸು: ಕುಟುಂಬ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಇಲ್ಲ. ಮಗಳ ವಿವಾಹದ ನಿಶ್ಚಯ ಸಾಧ್ಯತೆ. ಹಿರಿಯರಿಂದ ಮಾರ್ಗದರ್ಶನ. ಶುಭಸಂಖ್ಯೆ: 1

ಮಕರ: ಕುಟುಂಬದಲ್ಲಿ ಸಡಗರದ ವಾತಾವರಣ. ಸಂಗಾತಿಯೊಂದಿಗೆ ವಿರಸ ಉಂಟಾದೀತು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 9

ಕುಂಭ: ಉದ್ಯೋಗ ಕಳೆದುಕೊಳ್ಳುವ ಭೀತಿ. ಆತ್ಮೀಯ ಸ್ನೇಹಿತನಿಂದ ಸಲಹೆಗಳು. ಕುಟುಂಬದಲ್ಲಿ ಅನಾರೋಗ್ಯ ಕಾಡೀತು. ಶುಭಸಂಖ್ಯೆ: 7

ಮೀನ: ಕೆಲವು ಕಹಿ ಘಟನೆ ನಡೆಯಬಹುದು. ಧಾರ್ವಿುಕ ಮುಖಂಡರ ಭೇಟಿ. ಸಾರ್ವಜನಿಕವಾಗಿ ಅವಮಾನ ಸಾಧ್ಯತೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net