ನಿತ್ಯಭವಿಷ್ಯ| ಮಾಯಾಮೃಗದ ಹಿಂದೆ ಬಿದ್ದಿರುವ ಈ ರಾಶಿಯವರಿಗೆ ನಿರಾಸೆಯಾಗೋದು ಗ್ಯಾರಂಟಿ

Nitya-Bhavishya-vvani-1-2-1
Published on

ಮೇಷ: ಬಹಳ ಆತ್ಮೀಯರಾದ ಮಿತ್ರರ ಜತೆಯಲ್ಲಿಯೇ ಮನಸ್ತಾಪಗಳು ಬರಬಹುದು. ಆದರೆ ಜಗಳ ಮಾಡಬೇಡಿ. ತಾಳ್ಮೆಯಿಂದ ಸಿದ್ಧಿ. ಶುಭಸಂಖ್ಯೆ: 2

ವೃಷಭ: ಚಿತ್ರರಂಗದಲ್ಲಿ ಮಿಂಚಬೇಕೆಂಬ ಆಸೆಯು ತಪ್ಪೇನಲ್ಲ. ಆದರೆ ವಿನೂತನವಾದ ರೀತಿಯಲ್ಲಿ ಅದನ್ನು ಗಮನಿಸಿದರೆ ಸೂಕ್ತ. ಶುಭಸಂಖ್ಯೆ: 4

ಮಿಥುನ: ಯಾರನ್ನೂ ನಂಬದೆ ಇರುವುದು ಸರಿಯಲ್ಲ. ನಂಬಿ ಕೆಟ್ಟವರಿಲ್ಲ ಎಂಬ ಮಾತಿದೆ. ನಂಬುವುದಕ್ಕೆ ಮಾತ್ರ ಅವಸರ ಮಾಡದಿರಿ. ಶುಭಸಂಖ್ಯೆ: 8

ಕಟಕ: ಸ್ನಾನದ ಬಳಿಕ ಗರಿಕೆಗಳಿಂದ ಗಣಪತಿಯನ್ನು ಆರಾಧಿಸಿ. ಮನಸ್ಸಿನಲ್ಲಿರುವ ನಾನಾ ರೀತಿಯ ಚಿಂತೆಗಳು ದೂರವಾಗಲಿವೆ. ಶುಭಸಂಖ್ಯೆ: 3

ಸಿಂಹ: ಮತ್ಸ್ಯೊತ್ಪನ್ನ ವ್ಯಾಪಾರಸ್ಥರಿಗೆ ಅನೇಕ ಥರದ ಲಾಭಕ್ಕೆ ಅವಕಾಶಗಳು ತೆರೆಯಲಿವೆ. ಜಲದುರ್ಗಾ ಆರಾಧನೆ ಮಾಡಿದರೆ ಉತ್ತಮ. ಶುಭಸಂಖ್ಯೆ: 5

ಕನ್ಯಾ: ಮಕ್ಕಳ ವಿದ್ಯಾಭ್ಯಾಸದ ವಿಚಾರವಾಗಿ ಸ್ವಲ್ಪ ತಲ್ಲಣಗಳನ್ನು ಅನುಭವಿಸುತ್ತೀರಿ. ಭಕ್ತಿಯಿಂದ ಕುಲದೇವರನ್ನು ಧ್ಯಾನಿಸಿ. ಶುಭಸಂಖ್ಯೆ: 9

ತುಲಾ: ಮಾಯಾಮೃಗದ ಹಿಂದೆ ಬಿದ್ದಿದ್ದೀರಿ. ಹೀಗಾಗಿ ತರ್ಕವಿರದೆಯೇ ಮುನ್ನುಗ್ಗಲು ಹೊರಟರೆ ನಿರಾಶೆಯನ್ನೇ ಅನುಭವಿಸುವಿರಿ. ಶುಭಸಂಖ್ಯೆ: 7

ವೃಶ್ಚಿಕ: ಆಯಾಸವಷ್ಟೇ ಆಗಿದೆ, ಪರಿಶ್ರಮಕ್ಕೆ ತಕ್ಕಂತಹ ಫಲವಿಲ್ಲ ಎಂಬ ಮಾತುಗಳನ್ನು ಬಿಡಿ. ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯಲಿದೆ. ಶುಭಸಂಖ್ಯೆ: 1

ಧನುಸ್ಸು: ಹೊಸಬರೊಬ್ಬರ ಬೆಂಬಲ ಸಿಗಲಿದೆ. ಆದರೆ ಯಾವುದೇ ಕಾರಣಗಳೂ ಇಲ್ಲದೆ ಯಾರನ್ನೂ ವಿರೋಧಿಸಲು ಮುಂದಾಗದಿರಿ. ಶುಭಸಂಖ್ಯೆ: 6

ಮಕರ : ಎಲ್ಲೋ ಇರುವ ಗೆಳೆಯರನ್ನು ಆಕಸ್ಮಿಕವಾಗಿ ಭೇಟಿಯಾಗಲಿದ್ದೀರಿ. ನಿಮ್ಮ ಯೋಜನೆಗಳಿಗೆ ಹೊಸದೇ ಆದ ತಿರುವು ಸಿಗಲಿದೆ. ಶುಭಸಂಖ್ಯೆ: 4

ಕುಂಭ : ಪರಿಣತರಾದ ತಜ್ಞರನ್ನು ಭೇಟಿ ಮಾಡಿ ವಿನೂತನ ಯೋಜನೆಗಳ ಬಗ್ಗೆ ರ್ಚಚಿಸುವ ಅವಕಾಶವಿದೆ. ಆರೋಗ್ಯದಲ್ಲೂ ಚೇತರಿಕೆಯಿದೆ. ಶುಭಸಂಖ್ಯೆ: 8

ಮೀನ : ವೃತ್ತಿಜೀವನದ ಬಗ್ಗೆ ಬಾಳಸಂಗಾತಿಯಿಂದ ವಿಶಿಷ್ಟ ಸಲಹೆ ಸ್ವೀಕರಿಸುವಿರಿ. ಮನೆಯಲ್ಲಿ ಸಂತಸದ ವಾತಾವರಣವೇ ತುಂಬಿರಲಿದೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net