

ಮೇಷ: ಆತ್ಮಗೌರವ, ರಕ್ಷಣೆ ದೃಷ್ಟಿಯಿಂದ ಸಂದರ್ಭ ಗಳೊಡನೆ ರಾಜಿಮಾಡಿಕೊಳ್ಳುವುದು ಉತ್ತಮ. ವಿವಿಧ ಮೂಲಗಳಿಂದ ಲಾಭ. ಶುಭಸಂಖ್ಯೆ: 6
ವೃಷಭ: ಖರ್ಚುಗಳು ಅಧಿಕವೆನಿಸಿದರೂ ಆದಾಯ ಸಮನಾಗಿರುವುದು. ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಕೆಲಸವಿದೆ. ಶುಭಸಂಖ್ಯೆ: 8
ಮಿಥುನ: ಮುನ್ನಡೆಗೆ ಸಹೋದ್ಯೋಗಿಗಳ ಸಮಸ್ಯೆ ಇರುತ್ತದೆ. ಆದ್ದರಿಂದ ಯೋಚಿಸಿ ಸ್ವಂತ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಶುಭಸಂಖ್ಯೆ:2
ಕಟಕ: ಉದ್ಯೋಗದಲ್ಲಿನ ಬದಲಾವಣೆಯು ಉತ್ಸಾಹವನ್ನು ಹೆಚ್ಚಿಸುವುದು. ನೂತನ ಮನೆ ಅಥವಾ ನಿವೇಶನ ಖರೀದಿ ಯೋಚನೆ. ಶುಭಸಂಖ್ಯೆ: 6
ಸಿಂಹ: ಮಾತೃವರ್ಗದವರ ನೆರವಿನಿಂದ ಆರ್ಥಿಕ ಚೇತರಿಕೆ. ಅದೃಷ್ಟ ಚೆನ್ನಾಗಿದೆ, ಬಂದ ಅವಕಾಶ ಸದುಪಯೋಗ ಮಾಡಿಕೊಳ್ಳಿ. ಶುಭಸಂಖ್ಯೆ: 8
ಕನ್ಯಾ: ಉದ್ಯೋಗದಲ್ಲಿ ಉತ್ತಮ ಅಭಿವೃದ್ಧಿ. ಮನೆಯಲ್ಲಿ ಮಂಗಳಕಾರ್ಯಗಳು ನೆರವೇರುತ್ತವೆ. ಉದ್ಯೋಗಕ್ಕಾಗಿ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 9
ತುಲಾ: ಎಲ್ಲ ಕೆಲಸಗಳಲ್ಲಿಯೂ ಯಶಸ್ಸು. ಲಾಭ. ಅಭಿವೃದ್ಧಿಗಳಿಂದ ಮನಸ್ಸಿಗೆ ಸಂತಸ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ. ಶುಭಸಂಖ್ಯೆ: 2
ವೃಶ್ಚಿಕ: ವ್ಯಾಪಾರ ವ್ಯವಹಾರಗಳಲ್ಲಿ ನೆಡೆಯುತ್ತಿದ್ದ ಅವ್ಯವಹಾರಗಳು ಹಿಡಿತಕ್ಕೆ ಬರಲಿದೆ. ಕೊಡು-ಕೊಳ್ಳುವಿಕೆಗಳಿಂದ ಅಧಿಕ ಲಾಭ. ಶುಭಸಂಖ್ಯೆ:1
ಧನುಸ್ಸು: ಕಾರ್ಯಸಾಧನೆ ಆಗದು. ಉತ್ಪಾದಿತ ವಸ್ತುಗಳಿಗೆ ಬೇಡಿಕೆ ದೊರೆತು ಸಂತಸ. ಮಹಿಳೆಯರಿಗೆ ಉದ್ಯೋಗ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ: 8.
ಮಕರ: ಹಿಡಿತಕ್ಕೆ ಸಿಕ್ಕದೆ ಇರುವ ಕೆಲಸಗಳನ್ನು ಸಮರ್ಥವಾಗಿ ಅರ್ಥೈಸಿಕೊಂಡು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗುವಿರಿ. ಶುಭಸಂಖ್ಯೆ:3
ಕುಂಭ: ಪಾಲುದಾರರೊಂದಿಗೆ ತುರ್ತು ಚರ್ಚೆ ನಡೆಸಬೇಕಾದ ಪರಿಸ್ಥಿತಿ. ಮನೆಯಲ್ಲಿ ದೇವತಾ ಕಾರ್ಯ ನಡೆಸುವ ಯೋಚನೆ ಬರಲಿದೆ. ಶುಭಸಂಖ್ಯೆ: 9
ಮೀನ: ಆಸ್ತಿ ವಿಚಾರದಲ್ಲಿ ಉತ್ತಮ ನಡೆ. ಸ್ನೇಹಿತನೊಂದಿಗೆ ಭೋಜನ. ಕೃಷಿ ಉದ್ಯಮದಲ್ಲಿ ಲಾಭ. ಮಹಿಳೆಯರಿಗೆ ವಸ್ತ್ರಲಾಭ. ಶುಭಸಂಖ್ಯೆ: 5