

ಮೇಷ: ಓದಲು ಅವಕಾಶ ಲಭಿಸಲಿದೆ. ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತೀರಿ ಎಂಬುದೂ ಮುಖ್ಯ ವಿಷಯ. ಅದೃಷ್ಟಸಂಖ್ಯೆ: 1
ವೃಷಭ: ನೀವು ಆರಂಭ ಮಾಡಿದರೂ ಅಥವಾ ಸ್ವಲ್ಪ ಕೆಲಸ ಮಾಡಿದರೂ ಸ್ನೇಹಿತರು ಅದನ್ನು ಪೂರ್ಣಗೊಳಿಸುತ್ತಾರೆ. ಅದೃಷ್ಟಸಂಖ್ಯೆ: 7
ಮಿಥುನ: ಅತೃಪ್ತರನ್ನು ತೃಪ್ತಿಪಡಿಸುವ ಹೊಣೆಗಾರಿಕೆ ನಿಮ್ಮ ಹೆಗಲೇರಬಹುದು. ಆದರೆ ಅದು ಸುಲಭದ ಕೆಲಸವಲ್ಲ. ಅದೃಷ್ಟಸಂಖ್ಯೆ: 4
ಕಟಕ: ಸುಳ್ಳನ್ನೇ ಸತ್ಯ ಎಂದು ನಿಮ್ಮನ್ನು ನಂಬಿಸಿ ನಿಮ್ಮ ಸ್ನೇಹಿತರಿಗೂ ಮೋಸ ಮಾಡುವ ಜಾಲ ಇದೆ. ಎಚ್ಚರ ಇರಲಿ. ಅದೃಷ್ಟಸಂಖ್ಯೆ: 9
ಸಿಂಹ: ಬಾಳಸಂಗಾತಿ ಇಂದು ನಿಮ್ಮ ಜೊತೆ ಬಹಳ ಆಸಕ್ತಿಕರ ವಿಚಾರವನ್ನು ಹಂಚಿಕೊಳ್ಳುವಂತಹ ಸಾಧ್ಯತೆ ಇದೆ. ಅದೃಷ್ಟಸಂಖ್ಯೆ: 5
ಕನ್ಯಾ: ಭಾರವಾದ ವಸ್ತು ಎತ್ತಲು ಹೋಗಿ ಕೈ ನೋವು ಬರುವ ಸಾಧ್ಯತೆ ಇದೆ. ಆದುದರಿಂದ ಬಹಳ ಎಚ್ಚರ ಅವಶ್ಯ. ಅದೃಷ್ಟಸಂಖ್ಯೆ: 7
ತುಲಾ: ನಿಮ್ಮ ಜೊತೆಗೇ ವ್ಯಾಪಾರ ಮಾಡಿ ಲಾಭ ಮಾಡುವವರಿದ್ದಾರೆ. ಅಂಥವರನ್ನು ಇಂದು ಭೇಟಿ ಮಾಡಲಿದ್ದೀರಿ. ಅದೃಷ್ಟಸಂಖ್ಯೆ: 6
ವೃಶ್ಚಿಕ: ಯಾವುದು ಬೇಡ ಎನ್ನುತ್ತಾರೋ ಅದೇ ಬೇಕು ಎನ್ನುತ್ತೀರಿ. ಕಾರಣ ಇವತ್ತು ನಿಮಗೆ ಹಠ ಜಾಸ್ತಿ ಆಗುತ್ತದೆ. ಅದೃಷ್ಟಸಂಖ್ಯೆ: 3
ಧನುಸ್ಸು: ಸುಲಭವಾಗಿ ಮಾಡಿ ಮುಗಿಸಬಹುದು ಎಂದುಕೊಂಡಿದ್ದ ಕೆಲಸಕ್ಕೆ ನಿಮ್ಮ ಪೂರ್ತಿ ಸಮಯ ವ್ಯಯ ಆಗಲಿದೆ. ಅದೃಷ್ಟಸಂಖ್ಯೆ: 1
ಮಕರ: ಕಳೆದುಕೊಂಡಿದ್ದ ವಸ್ತು ಕಣ್ಣಿಗೆ ಬೀಳಲಿದೆ. ಆದರೆ ಅದು ಮರಳಿ ನಿಮ್ಮ ಕೈ ಸೇರುವುದು ಅನುಮಾನವೇ ಸರಿ. ಅದೃಷ್ಟಸಂಖ್ಯೆ: 2
ಕುಂಭ: ಆಲಸ್ಯದ ಕಾರಣದಿಂದಾಗಿ ನಿಮ್ಮ ಮನಸ್ಸು ನಿತ್ಯ ನೈಮಿತ್ತಿಕ ಕೆಲಸಗಳನ್ನು ಮಾಡಿ ಮುಗಿಸಲು ಒಪ್ಪುವುದಿಲ್ಲ. ಅದೃಷ್ಟಸಂಖ್ಯೆ: 6
ಮೀನ: ನಿಮ್ಮ ಬಳಿ ಕೆಲಸ ಮಾಡುವವರನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ. ಸಿಟ್ಟಿನ ಕಾರಣ ಸಂಜೆ ತಿಳಿಯಲಿದೆ. ಅದೃಷ್ಟಸಂಖ್ಯೆ: 1