

ಮೇಷ: ನಂಬಿ ಕೆಟ್ಟವರಿಲ್ಲವೋ ಎಂಬುದು ತಿಳಿದವರ ಮಾತು. ಆದರೆ ಹೊಯ್ದಾಟದಿಂದ ನಷ್ಟವಾಗುವ ಸಾಧ್ಯತೆ ಇದೆ. ಶುಭಸಂಖ್ಯೆ: 6
ವೃಷಭ: ಹೂಂಕರಿಸುವ ಎತ್ತಿನ ಹಾಗೆ ಕೂಗಾಡಿದರೆ ಬಲವನ್ನು ಕಳೆದುಕೊಂಡು ತೀರ ಹಾಸ್ಯಾಸ್ಪದರಾಗಿಬಿಡುತ್ತೀರಿ. ಶುಭಸಂಖ್ಯೆ: 5
ಮಿಥುನ: ನಿಶ್ಚಿತವಾದುದನ್ನು ತಲುಪಲು ಅಸಾಧ್ಯವಾದರೂ ಗುರಿಯನ್ನು ಬಿಡದಿರಿ. ನಿಮ್ಮ ಆದರ್ಶ ಒಳಿತನ್ನೇ ತರುತ್ತದೆ. ಶುಭಸಂಖ್ಯೆ: 9
ಕಟಕ: ದುಃಸ್ವಪ್ನಗಳ ಭಯ, ಅಸ್ಥಿರತೆಯನ್ನು ತಪ್ಪಿಸಿಕೊಳ್ಳಲು ಷಡಾನನನಾದ ಸುಬ್ರಹ್ಮಣ್ಯನನ್ನು ಸ್ತುತಿಸಿ. ಕ್ಷೇಮವಿದೆ. ಶುಭಸಂಖ್ಯೆ: 4
ಸಿಂಹ: ನೀರಿನ ಬಗೆಗೆ ಖಂಡಿತವಾಗಿಯೂ ನಿರ್ಲಕ್ಷ್ಯ ತೋರದಿರಿ. ಅದರಲ್ಲೂ ಕಡಲು, ನದಿ, ಬಾವಿಯ ಬಳಿ ಎಚ್ಚರ. ಶುಭಸಂಖ್ಯೆ: 2
ಕನ್ಯಾ: ನಿಮ್ಮ ಅಂತರಂಗದ ಸಜ್ಜನಿಕೆ ಹಾಗೂ ಅಂತಿಮವಾದ ಧೈರ್ಯ ಎರಡನ್ನೂ ಬೆರೆಸಿ ದಿವ್ಯವಾದುದನ್ನು ಗೆಲ್ಲಿರಿ. ಶುಭಸಂಖ್ಯೆ: 7
ತುಲಾ: ಅಂತಃಕರಣದ ಆರ್ದ್ರತೆಯಿಂದ ಮಾತನಾಡುವ ಗೆಳೆಯರ ಬಳಿ ಮನದ ದುಗುಡವನ್ನು ತಿಳಿಸಿ. ಬೆಂಬಲ ಲಭ್ಯ. ಶುಭಸಂಖ್ಯೆ: 3
ವೃಶ್ಚಿಕ: ದೊಡ್ಡ ಯೋಜನೆಯೊಂದನ್ನು ರೂಪಿಸಿ ಅಸ್ತಿತ್ವಕ್ಕೆ ತರುವ ಆಲೋಚನೆಗೆ ತೀರ ಗಡಿಬಿಡಿ ಮಾಡಲು ಹೋಗದಿರಿ. ಶುಭಸಂಖ್ಯೆ: 5
ಧನಸ್ಸು: ಪರಿಶ್ರಮದ ಮೂಲಕವೇ ಧನಲಾಭದ ಬಗೆಗಿನ ನಿಮ್ಮ ಯೋಜನೆ ಹಾಗೂ ಗುರಿಯನ್ನು ತಲುಪಲು ಸಾಧ್ಯ. ಶುಭಸಂಖ್ಯೆ: 1
ಮಕರ: ಯಾವುದೋ ಶಕ್ತಿಯೊಂದು ಜಗ್ಗುತ್ತಿದೆ ಎಂಬ ಅನುಭವವಾದೀತು. ಹಿರಿಯರ ಬಳಿ ಮಾತಾಡಿ. ಒಳಿತಾಗಲಿದೆ. ಶುಭಸಂಖ್ಯೆ: 6
ಕುಂಭ: ಕೊಲ್ಲೂರು ಮೂಕಾಂಬಿಕೆಯನ್ನು ಆರಾಧಿಸಿ. ಮನದ ಇಚ್ಛೆಯನ್ನು ನೆರವೇರಿಸುವ ಅನುಗ್ರಹ ಒದಗಲಿದೆ. ಶುಭಸಂಖ್ಯೆ: 2
ಮೀನ: ನಿಮ್ಮ ನಿಲುವುಗಳನ್ನು ಆಗಾಗ ಬದಲಾಯಿಸುತ್ತಿದ್ದರೆ ಬೆಂಬಲಿಗರು ದೂರ ಮಾಡಬಹುದು. ಸ್ಥಿರತೆ ಇರಲಿ. ಶುಭಸಂಖ್ಯೆ: 8