ಈ ರಾಶಿಯವರಿಗಿಂದು ಗುರಿ ತಲುಪಲು ಇದು ಉತ್ತಮ ಸಮಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕೌಟುಂಬಿಕ ವ್ಯವಹಾರ ಮಹತ್ವದ ತಿರುವು ಪಡೆದುಕೊಳ್ಳಲಿದೆ. ಕಠಿಣ ಪರಿಶ್ರಮದ ಮೂಲಕ ವೃತ್ತಿಪರ ವಿಚಾರಗಳಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 8

ವೃಷಭ: ಹಣಕಾಸಿನ ಸುದ್ದಿಗಳು ಆಶಾದಾಯಕ. ದೀರ್ಘ- ಯೋಜಿತ ಉದ್ಯಮದಲ್ಲಿ ಪಾಲುದಾರರೊಂದಿಗೆ ಸೇರಿಕೊಳ್ಳಲು ಇದು ಸಕಾಲ. ಶುಭಸಂಖ್ಯೆ: 5

ಮಿಥುನ: ವ್ಯಾಪಾರ-ವ್ಯವಹಾರ ಉತ್ತಮವಾಗಿರಲಿದೆ. ಪ್ರೀತಿಪಾತ್ರರ ಮೇಲೆ ಅನುಮಾನ. ಆಲೋಚನೆಗಳನ್ನು ಸೂಕ್ತವಾಗಿ ಬಳಸಿಕೊಳ್ಳಿ. ಶುಭಸಂಖ್ಯೆ: 7

ಕಟಕ: ಹೊಸ ವ್ಯವಹಾರ, ವ್ಯಾಪಾರಕ್ಕಿದು ಉತ್ತಮ ಸಮಯವಾಗಿದೆ. ಕೌಟುಂಬಿಕ ಸಮಸ್ಯೆ ಶೀಘ್ರದಲ್ಲೇ ದೂರಾಗಲಿದೆ. ಆತುರ ಬೇಡ. ಶುಭಸಂಖ್ಯೆ: 8

ಸಿಂಹ: ಗುರಿ ತಲುಪಲು ಇದು ಉತ್ತಮ ಸಮಯ. ಮಾಡಬೇಕು ಎಂದುಕೊಂಡಿದ್ದ ಕೆಲಸ ಯಶಸ್ವಿಯಾಗಿ ಮುಗಿದ ಸಂಭ್ರಮ ನಿಮ್ಮಲ್ಲಿದೆ. ಶುಭಸಂಖ್ಯೆ: 3

ಕನ್ಯಾ: ವಿಶ್ರಾಂತಿ ಇಲ್ಲ ಎಂಬ ಭಾವನೆ. ನಿರ್ಲಕ್ಷಿಸುವ ಸಹೋದ್ಯೋಗಿಗಳೊಂದಿಗೆ ಬೆರೆಯಿರಿ. ಜೊತೆಗಿದ್ದೇ ವಿರೋಧಿಗಳನ್ನು ಎದುರಿಸಿ. ಶುಭಸಂಖ್ಯೆ: 6

ತುಲಾ: ಸಮಯ ವ್ಯರ್ಥ ಮಾಡುವ ವ್ಯಕ್ತಿ ನೀವಲ್ಲ. ಗೊಂದಲ ಬೇಡ. ಯಾವುದೇ ಕೆಲಸಕ್ಕೂ ಮುನ್ನ ನಿಮ್ಮದೇ ವೇಳಾಪಟ್ಟಿ ರೂಪಿಸಿಕೊಳ್ಳಿ. ಶುಭಸಂಖ್ಯೆ: 1

ವೃಶ್ಚಿಕ: ತೆಗೆದುಕೊಂಡ ನಿರ್ಧಾರಗಳು ಯೋಜಿಸಿದಂತೆ ಕಾರ್ಯಗತಗೊಳ್ಳುವ ಎಲ್ಲಾ ಲಕ್ಷಣಗಳಿವೆ. ಮಾತಿನ ಮೇಲೆ ಹಿಡಿತವಿರಲಿ. ಶುಭಸಂಖ್ಯೆ: 9

ಧನುಸ್ಸು: ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸಕಾಲವಲ್ಲ. ಕುಟುಂಬ ಸದಸ್ಯರಿಗೆ ನಿಮ್ಮ ಸಮಯ ನೀಡಿ. ಪ್ರಯಾಣದ ಸಾಧ್ಯತೆ. ಶುಭಸಂಖ್ಯೆ: 5

ಮಕರ: ಪರಿಸ್ಥಿತಿಗಳು ಒತ್ತಡವನ್ನು ಉಂಟುಮಾಡಿರಬಹುದು. ಹೊಸ ಜವಾಬ್ದಾರಿಗಳು ಮತ್ತು ಕರ್ತವ್ಯಗಳ ಹೊಣೆ ನೆನಪಿನಲ್ಲಿಟ್ಟುಕೊಳ್ಳಿ. ಶುಭಸಂಖ್ಯೆ: 2

ಕುಂಭ: ಮುಂದಿನ ವಾರದ ಆರಂಭದ ವೇಳೆಗೆ ವೃತ್ತಿಪರವಾಗಿ ನೀವು ಅಗತ್ಯವಿರುವ ಎಲ್ಲಾ ಬದಲಾವಣೆಗಳನ್ನು ನೋಡಲಿದ್ದೀರಿ. ಯಶಸ್ಸು. ಶುಭಸಂಖ್ಯೆ: 7

ಮೀನ: ಉತ್ಸಾಹಭರಿತವಾಗಿರುವಿರಿ. ಭಿನ್ನಾಭಿಪ್ರಾಯಗಳು ಎದುರಾಗಬಹುದು. ಹಣದಿಂದ ಕೆಲ ಸಮಸ್ಯೆ ದೂರವಾಗಬಹುದು. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net