ಈ ರಾಶಿಯವರಿಗೆ ಇಂದು ನಿಮ್ಮವರಿಂದಲೇ ಪ್ರತಿರೋಧ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಾನಸಿಕ ಖಿನ್ನತೆಯಿಂದ ಹೊರಬನ್ನಿ ಮನೆಯಲ್ಲಿ ತಾಳ್ಮೆಯಿಂದ ವರ್ತಿಸಿ. ವ್ಯಾಪಾರಸ್ಥರಿಗೆ ಕೆಲಸಗಾರರಿಂದ ಕಿರಿಕಿರಿ. ಶುಭಸಂಖ್ಯೆ: 7

ವೃಷಭ: ಸ್ನೇಹಿತರಿಂದ ತೊಂದರೆಯಾಗಬಹುದು. ಕಾರ್ಯಸಿದ್ಧಿಯಲ್ಲಿ ನಿಮ್ಮವರಿಂದಲೇ ಪ್ರತಿರೋಧ. ಮನೋವ್ಯಥೆ. ಧನಹಾನಿ. ಶುಭಸಂಖ್ಯೆ: 2

ಮಿಥುನ: ಬಿಗುವಿನ ವಾತಾವರಣ ಮುಂದುವರಿಕೆ. ಸರ್ಕಾರಿ ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಕಿರುಕುಳ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 5

ಕಟಕ: ಉದ್ದಿಮೆ, ವ್ಯಾಪಾರ ಪ್ರಗತಿಯಲ್ಲಿ ಮುಂದುವರಿಯುವುದು. ಹಲವು ವರ್ಷಗಳ ಪರಿಶ್ರಮದ ಸಫಲತೆ ಈಗ ಕಾಣುವುದು. ಶುಭಸಂಖ್ಯೆ: 7

ಸಿಂಹ: ಬಂಧುಗಳೊಂದಿಗೆ ಮನಸ್ತಾಪ. ದುರ್ಬಲರಿಗೆ ಸಹಾಯಮಾಡಿ. ಭೂಮಿ ಖರೀದಿ ನಿರ್ಧಾರ. ಉದ್ಯೋಗಿಗಳಿಗೆ ಬಡ್ತಿ. ಶುಭಸಂಖ್ಯೆ: 7

ಕನ್ಯಾ: ಆಸ್ತಿವಿಚಾರಕ್ಕಾಗಿ ಸಹೋದರಿಯರೊಂದಿಗೆ ಮನಸ್ತಾಪ. ದಿನಸಿ ವ್ಯಾಪಾರಿಗಳಿಗೆ ಧನ ನಷ್ಟ. ಮಗಳ ವಿವಾಹದ ಪ್ರಸ್ತಾಪ. ಶುಭಸಂಖ್ಯೆ: 3

ತುಲಾ: ನಿರೀಕ್ಷಿಸಿದಂತೆ ಲಾಭ ದೊರೆತು ಸಂತಸ. ಮಕ್ಕಳಿಂದ ಧನಹಾನಿ ಸಾಧ್ಯತೆ. ಸಾರ್ವಜನಿಕ ಜೀವನದಲ್ಲಿ ಪ್ರಗತಿ ಕಾಣುವುದು. ಶುಭಸಂಖ್ಯೆ: 6

ವೃಶ್ಚಿಕ: ಆರೋಗ್ಯ ಸಮಸ್ಯೆ ಬಿಗಡಾಯಿಸಬಹುದು. ಹುಷಾರಾಗಿರಿ. ಆಸ್ತಿ ಖರೀದಿಗೆ ನಿರ್ಧಾರ. ಮಂಗಳಕಾರ್ಯದ ಸಂಭ್ರಮ. ಶುಭಸಂಖ್ಯೆ: 6

ಧನುಸ್ಸು: ಹಿರಿಯರ ಸಹಾಯದಿಂದ ಜಟಿಲ ಸಮಸ್ಯೆ ಇತ್ಯರ್ಥ. ಅನಿರೀಕ್ಷಿತವಾಗಿ ಆರೋಗ್ಯ ಕೈ ಕೊಡಬಹುದು. ಉದ್ಯೋಗದಲ್ಲಿ ಸಮಸ್ಯೆ. ಶುಭಸಂಖ್ಯೆ: 3

ಮಕರ: ಹಣಕಾಸಿನ ವಿಚಾರದಲ್ಲಿ ವಾಗ್ವಾದ. ಪ್ರತಿಭಾನ್ವಿತರಿಗೆ ವಿಶೇಷ ವೇದಿಕೆ. ಆರೋಗ್ಯದಲ್ಲಿ ಏರುಪೇರು. ಮಕ್ಕಳಿಂದ ಸಮಾಧಾನ. ಶುಭಸಂಖ್ಯೆ: 7

ಕುಂಭ: ತಂದೆ ತಾಯಿ ಆರೋಗ್ಯದಲ್ಲಿ ಏರುಪೇರು. ಕುಟುಂಬದೊಂದಿಗೆ ಸಮಯ ಕಳೆಯಿರಿ. ವಿವಾಹ ಅಪೇಕ್ಷಿತರಿಗೆ ವಿವಾಹ ನಿಶ್ಚಯ. ಶುಭಸಂಖ್ಯೆ: 6

ಮೀನ: ಸಂಗಾತಿಯಿಂದ ಸೂಕ್ತಸಲಹೆ. ಕಾರ್ಯಸಿದ್ದಿ. ಸಹೋದರರೊಂದಿಗೆ ವಿರಸ. ಕುಟುಂಬದಲ್ಲಿ ಹೊಂದಾಣಿಕೆಯ ಸಮಸ್ಯೆ ಒತ್ತಡ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net