ಈ ರಾಶಿಯವರಿಗಿಂದು ಆರ್ಥಿಕ ಪರಿಸ್ಥಿತಿ ಚೇತರಿಕೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕೆಲಸಗಳಲ್ಲಿ ವಿಳಂಬ. ಆತ್ಮೀಯ ಸ್ನೇಹಿತನ ಜೊತೆ ಭೋಜನ. ಗೌರವ ಪ್ರಾಪ್ತಿ. ಮನಸ್ಸಿಗೆ ಶಾಂತಿ. ವ್ಯಾಪಾರದಲ್ಲಿ ಅಲ್ಪ ಲಾಭ. ಶುಭಸಂಖ್ಯೆ: 5

ವೃಷಭ: ಸ್ಥಳ ಬದಲಾವಣೆ ಮಾಡಬೇಕಾದೀತು. ಸರಕಾರಿ ಕೆಲಸಗಳಲ್ಲಿ ಯಶಸ್ಸು. ಮಿತ್ರರಿಂದ ತೊಂದರೆ. ವಾಹನ ಲಾಭ. ವೃಥಾ ತಿರುಗಾಟ. ಶುಭಸಂಖ್ಯೆ: 9

ಮಿಥುನ: ಸ್ಥಿರಾಸ್ತಿ ಸಂಪಾದನೆ ಮಾಡುವಿರಿ. ವಿದೇಶ ಪ್ರಯಾಣ, ಉದ್ಯೋಗದಲ್ಲಿ ಪ್ರಗತಿ. ಕಾರ್ಯದಲ್ಲಿ ಅನುಕೂಲ. ಅಧಿಕ ಹಣ ಖರ್ಚು. ಶುಭಸಂಖ್ಯೆ: 1

ಕಟಕ: ಭೂ ಲಾಭ. ಸಲ್ಲದ ಅಪವಾದ ಬಂದೀತು. ಶ್ರಮಕ್ಕೆ ತಕ್ಕ ಫಲ ದೊರೆಯುವುದು. ಆರೋಗ್ಯ ಸಮಸ್ಯೆ. ಶುಭ ಕಾರ್ಯಕ್ಕೆ ನಿರ್ಧಾರ. ಶುಭಸಂಖ್ಯೆ: 2

ಸಿಂಹ: ಕುಟುಂಬ ಸೌಖ್ಯ. ಮಾನಸಿಕ ನೆಮ್ಮದಿ. ಆದಾಯಕ್ಕಿಂದ ಖರ್ಚು ಹೆಚ್ಚು. ಕಾರ್ಯ ಸಾಧನೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಶುಭಸಂಖ್ಯೆ: 8

ಕನ್ಯಾ: ಹಿತ ಶತ್ರುಗಳಿಂದ ತೊಂದರೆ. ವ್ಯಾಪಾರ- ವ್ಯವಹಾರದಲ್ಲಿ ಪ್ರಗತಿ. ಮಾನಸಿಕ ನೆಮ್ಮದಿ. ಬಂಧು-ಮಿತ್ರರಿಂದ ಸಹಾಯ ಸಿಗುವುದು. ಶುಭಸಂಖ್ಯೆ: 4

ತುಲಾ: ಸ್ಥಳ ಬದಲಾವಣೆ. ಕೃಷಿಯಲ್ಲಿ ಪ್ರಗತಿ. ಕೋರ್ಟ್ ಕೇಸ್​ಗಳಲ್ಲಿ ಜಯ ಸಿಗಲಿದೆ. ದುಷ್ಟರಿಂದ ಕಿರುಕುಳ ಸಾಧ್ಯತೆ. ಕೆಲಸದಲ್ಲಿ ಎಚ್ಚರ. ಶುಭಸಂಖ್ಯೆ: 7

ವೃಶ್ಚಿಕ: ತೀರ್ಥಕ್ಷೇತ್ರ ಭೇಟಿ, ದೇವರ ದರ್ಶನ. ಅಧಿಕ ಖರ್ಚು. ಅಲ್ಪ ಧನ ಲಾಭ. ಇಲ್ಲ ಸಲ್ಲದ ಅಪವಾದ ಬಂದೀತು. ಚಂಚಲ ಮನಸ್ಸು. ಶುಭಸಂಖ್ಯೆ: 7

ಧನುಸ್ಸು: ಮಂಗಳ ಕಾರ್ಯದಲ್ಲಿ ಭಾಗಿಯಾಗುವಿರಿ. ಆರ್ಥಿಕ ಪರಿಸ್ಥಿತಿ ಚೇತರಿಕೆ ಕಾಣಲಿದೆ. ವೃಥಾ ಧನವ್ಯಯ. ಮನಸ್ಸಿನಲ್ಲಿ ನಾನಾ ಚಿಂತೆ. ಶುಭಸಂಖ್ಯೆ: 3

ಮಕರ: ವ್ಯವಹಾರಗಳಲ್ಲಿ ಸಾಧಾರಣ ಲಾಭ. ಚೋರಾಗ್ನಿ ಭೀತಿ. ವಿಪರೀತ ಹಣವ್ಯಯ. ಅತಿಯಾದ ನಿದ್ರೆ. ಕಾರ್ಯಗಳಲ್ಲಿ ವಿಳಂಬ. ಶುಭಸಂಖ್ಯೆ:1

ಕುಂಭ: ವಿವಾಹ ಯೋಗವಿದೆ. ಸಗಟು ವ್ಯಾಪಾರಿಗಳಿಗೆ ಅಧಿಕ ಲಾಭ. ಶತ್ರುಗಳ ಭಯ. ಕೆಲಸಗಳಲ್ಲಿ ಅಪಜಯ. ಋಣ ವಿಮೋಚನೆ. ಶುಭಸಂಖ್ಯೆ: 9

ಮೀನ: ಧರ್ಮ ಕಾರ್ಯದಲ್ಲಿ ಆಸಕ್ತಿ. ರಿಯಲ್ ಎಸ್ಟೇಟ್​ನವರಿಗೆ ಲಾಭವಿದೆ. ಅಕಾಲ ಭೋಜನ ಸಾಧ್ಯತೆ. ಅನ್ಯರಲ್ಲಿ ವೈಮನಸ್ಸು. ಶುಭಸಂಖ್ಯೆ:5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net