ಈ ರಾಶಿಯವರಿಗೆ ಇಂದು ಸ್ನೇಹಿತೆಯಿಂದ ತೊಂದರೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವೃತ್ತಿಜೀವನದಲ್ಲಿ ಸ್ಪರ್ಧೆ ಏರ್ಪಡಬಹುದು. ಕರ್ತೃತ್ವ ಕ್ಕೆ ಭಾಗ್ಯದ ಸಹಾಯವಾಗಲಿದೆ. ಕುಟುಂಬದಲ್ಲಿ ಸಡಗರದ ವಾತಾವರಣ. ಶುಭಸಂಖ್ಯೆ: 5

ವೃಷಭ: ನಿರೀಕ್ಷಿಸಿದ್ದಕ್ಕಿಂತ ಅಧಿಕ ಲಾಭ ಬರಲಿದೆ. ಉದ್ಯೋಗದಲ್ಲಿ ಸ್ಪರ್ಧೆಯ ಭೀತಿ. ಭಾಗ್ಯೋದಯದ ಅನುಭವ ನಿಮ್ಮದಾಗಲಿದೆ. ಶುಭಸಂಖ್ಯೆ: 9

ಮಿಥುನ: ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಿ. ಆರೋಗ್ಯದ ವಿಚಾರದಲ್ಲಿ ದೊಡ್ಡ ಖರ್ಚು ಎದುರಾಗಲಿದೆ. ಮಿತ್ರರಿಂದ ಸಮಸ್ಯೆ. ಶುಭಸಂಖ್ಯೆ: 7

ಕಟಕ: ನಿಮ್ಮ ಪ್ರಗತಿ ಮತ್ತು ಉತ್ಕರ್ಷಕ್ಕೆ ಈದಿನ ಸಾಕ್ಷಿಯಾಗಲಿದೆ. ಆರೋಗ್ಯದತ್ತ ನಿರ್ಲಕ್ಷ್ಯ ಬೇಡ. ಶ್ರದ್ಧೆಯಿಂದ ಕೆಲಸ ನಿರ್ವಹಿಸಿ. ಶುಭಸಂಖ್ಯೆ: 5

ಸಿಂಹ: ಆರ್ಥಿಕ ಸಮಸ್ಯೆ ಕಾಡುತ್ತದೆ. ಆರೋಗ್ಯ ತೊಂದರೆ ಕಾಡಬಹುದು. ಹುಷಾರಾಗಿರಿ. ಅದೃಷ್ಟದಿಂದ ಅವಕಾಶ ಸಿದ್ದಿ. ಶುಭಸಂಖ್ಯೆ: 3

ಕನ್ಯಾ: ಕಾರ್ಯನಿಮಿತ್ತ ಪ್ರಯಾಣ ಸಾಧ್ಯತೆ. ಲಾಭದ ಪ್ರಯೋಜನ ತಕ್ಷಣ ಸಿಗುವುದಿಲ್ಲ. ಅಧ್ಯಯನ ಮಾಡಿದ ಪ್ರಯೋಜನ. ಶುಭಸಂಖ್ಯೆ: 2

ತುಲಾ: ಕಡಿಮೆ ಪರಿಶ್ರಮದಲ್ಲಿ ಅಧಿಕ ಲಾಭ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 8

ವೃಶ್ಚಿಕ: ಪಡೆದ ಶಿಕ್ಷಣ ನೆರವಿಗೆ ಬರಲಿದೆ.ಅರ್ಹತೆ ಇಲ್ಲದಿದ್ದರೂ ಅವಕಾಶಗಳ ಪ್ರಾಪ್ತಿ. ಭೂಮಿ ಖರೀದಿಯಲ್ಲಿ ಯಶಸ್ಸು ಸಿಗಲಿದೆ. ಶುಭಸಂಖ್ಯೆ: 2

ಧನುಸ್ಸು: ಆಸ್ತಿ ಲಾಭ ಆಗುತ್ತದೆ. ಅಣ್ಣ-ತಮ್ಮಂದಿರ ಮೇಲೆ ಪ್ರೇಮ ಮೂಡಲಿದೆ ನಿರೀಕ್ಷಿಸಿದಷ್ಟು ಲಾಭವಾಗುವುದಿಲ್ಲ. ಶುಭಸಂಖ್ಯೆ: 3

ಮಕರ: ಕೆಲಸಗಳು ಯಶಸ್ವಿಯಾಗುತ್ತದೆ. ವಿವಾಹಭಾಗ್ಯ ಕೂಡಿ ಬರಲಿದೆ. ಸ್ನೇಹಿತೆಯಿಂದ ತೊಂದರೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 3

ಕುಂಭ: ಆರ್ಥಿಕ ಪ್ರಗತಿ ಅಷ್ಟಕ್ಕಷ್ಟೆ. ಪ್ರಗತಿ ಸಾಧಿಸುವಲ್ಲಿ ಪ್ರಯತ್ನಶೀಲರಾಗಿ. ಹೃದಯ ಸಮಸ್ಯೆ ಬರಬಹುದು. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 2

ಮೀನ: ಉದ್ಯೋಗದಲ್ಲಿ ಚೇತರಿಕೆ ಕಾಣಲಿದೆ. ಸಾರ್ವಜನಿಕ ರಂಗದಲ್ಲಿ ವಿಶೇಷ ಪೋ›ತ್ಸಾಹ ಸಹೋದರರೊಂದಿಗೆ ವಾದವಿವಾದ ಬೇಡ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net