ಈ ರಾಶಿಯವರಿಗಿಂದು ಪ್ರಿಯ ವ್ಯಕ್ತಿಯೊಂದಿಗೆ ವಿಚಾರ ವಿನಿಮಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ನಟರಿಗೆ ಅವಕಾಶಗಳು ಸಿಗಲಿವೆ. ತೋಟ ಮತ್ತು ಎಸ್ಟೇಟ್ ಕೆಲಸಗಾರರಿಗೆ ಸಂಪಾದನೆ ಹೆಚ್ಚಲಿದೆ. ಅನಾರೋಗ್ಯದ ಭೀತಿ. ಶುಭಸಂಖ್ಯೆ: 9

ವೃಷಭ: ವ್ಯವಹಾರ ಕ್ಷೇತ್ರವನ್ನು ವಿಸ್ತರಿಸಲು ಈ ದಿನ ಸೂಕ್ತ. ಬಂಧುಮಿತ್ರರೊಡನೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳಲಿದ್ದೀರಿ. ಶುಭಸಂಖ್ಯೆ: 1

ಮಿಥುನ: ಪ್ರಿಯ ವ್ಯಕ್ತಿಯೊಂದಿಗೆ ವಿಚಾರ ವಿನಿಮಯ ಸೂಕ್ತವಾಗಿ ಮಾಡಿಕೊಳ್ಳುವಿರಿ. ಪ್ರಭಾವಶಾಲಿ ವ್ಯಕ್ತಿಯ ಭೇಟಿ. ಸಂತರ ದರ್ಶನ. ಶುಭಸಂಖ್ಯೆ: 8

ಕಟಕ: ಬೆಳೆಗಳಿಗೆ ಉತ್ತಮ ಬೆಲೆ . ರಾಜಕೀಯ ವ್ಯವಹಾರಗಳ ಪ್ರಬಲಾಕಾಂಕ್ಷಿಯಾಗಿರುವ ನೀವು ಇನ್ನಷ್ಟು ಚುರುಕಾಗಬೇಕಾಗಿದೆ. ಶುಭಸಂಖ್ಯೆ: 6

ಸಿಂಹ: ಅನಿರೀಕ್ಷಿತ ಪ್ರಯಾಣ. ಖರ್ಚು-ವೆಚ್ಚ ಅಧಿಕವಾಗಲಿವೆ. ಶೀಘ್ರವಾಗಿ ನಿರ್ದಿಷ್ಟವಾದ ಕಾರ್ಯ ಪೂರೈಸುವ ಯೋಚನೆ ಈಡೇರದು. ಶುಭಸಂಖ್ಯೆ: 3

ಕನ್ಯಾ: ನಾಜೂಕಿನ ಕಾರ್ಯಗಳಿಂದಾಗಿ ಹೆಚ್ಚಿನ ವಿಶೇಷ ಮನ್ನಣೆ . ಜೊತೆಯಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಿಕೊಂಡು ಹೋಗಿ. ಶುಭಸಂಖ್ಯೆ: 7

ತುಲಾ: ಮಕ್ಕಳ ಹೆಸರಿನಲ್ಲಿ ಮಾಡಬೇಕಾದ ಧರ್ಮ ಕಾರ್ಯವನ್ನು ಶ್ರದ್ಧೆಯಿಂದ ಮಾಡುವಿರಿ. ಉದ್ಯಮಿಗಳಿಗೆ ಸರ್ಕಾರದಿಂದ ಪ್ರತಿಕೂಲ. ಶುಭಸಂಖ್ಯೆ:1

ವೃಶ್ಚಿಕ: ವ್ಯಾಪಾರ, ವೃತ್ತಿಯಲ್ಲಿ ಆರೋಗ್ಯಕರ ಪೈಪೋಟಿ. ಮಗನ ಕೆಲಸದ ವಿಚಾರದಲ್ಲಿ ವಿದೇಶದಲ್ಲಿರುವ ಸ್ನೇಹಿತ ನೆರವಿಗೆ ಬರಲಿದ್ದಾರೆ. ಶುಭಸಂಖ್ಯೆ: 4

ಧನುಸ್ಸು: ವಿವಾದವಿರುವ ಬಹುತೇಕ ವಿಷಯಗಳು ಇತ್ಯರ್ಥಗೊಂಡು ಮನಸ್ಸಿಗೆ ಹಿತ. ಬಾಕಿ ಇರುವ ಕೆಲಸ ಪೂರ್ಣಗೊಳಿಸುವಿರಿ. ಶುಭಸಂಖ್ಯೆ: 6

ಮಕರ: ಬಹು ವಿಧದ ಉದ್ಯೋಗಾವಕಾಶಗಳು ಬರಲಿವೆ. ಕೆಲವು ನಿಗೂಢ ಸಂಗತಿಗಳನ್ನು ಬಯಲಿಗೆ ತರುವ ಪ್ರಯತ್ನ ನಡೆಯಲಿದೆ. ಶುಭಸಂಖ್ಯೆ: 6

ಕುಂಭ: ಶುಭಕಾರ್ಯದ ಜವಾಬ್ದಾರಿ ನಿಮ್ಮದೇ. ಕಚೇರಿಯಲ್ಲೂ ಹೊಸ ಜವಾಬ್ದಾರಿ. ನಿರ್ವಿಘ್ನದಾಯಕ ವಿಘ್ನೕಶ್ವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 9

ಮೀನ: ಬಂಧುಗಳ ಅನಿರೀಕ್ಷಿತ ಆಗಮನ. ದೂರ ಪ್ರಯಾಣ ಸಾಧ್ಯತೆ. ಆಸ್ತಿ ವಿವಾದಗಳು ತಾರಕಕ್ಕೆ. ಅನಾರೋಗ್ಯ ಭೀತಿ ಕಾಡಬಹುದು. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net