ಈ ರಾಶಿಯವರು ಇಂದು ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಾರ್ವಜನಿಕ ರಂಗದ ಮಹಿಳೆಯರಿಗೆ ಅಧಿಕಾರ- ಪ್ರಾಪ್ತಿ ಸಾಧ್ಯತೆ. ಮುಂದಾಲೋಚನೆಯಿಂದ ಕಷ್ಟ ಪರಿಹಾರ. ಶುಭಸಂಖ್ಯೆ: 5

ವೃಷಭ: ಆರ್ಥಿಕ ಸಂಪನ್ಮೂಲಗಳ ಅಭಿವೃದ್ಧಿ. ಮಾತಿಗಿಂತಲೂ ಮೌನವಾಗಿರುವುದು ಲೇಸು. ಮಕ್ಕಳ ಆರೋಗ್ಯದ ಬಗ್ಗೆ ನಿಗಾ ಇರಲಿ. ಶುಭಸಂಖ್ಯೆ: 1

ಮಿಥುನ: ಹಿರಿಯರ ಮಾರ್ಗದರ್ಶನದಂತೆ ಸಮಸ್ಯೆ ಪರಿಹರಿಸಿಕೊಳ್ಳಿ. ಮಗಳಿಗೆ ವಿವಾಹ ಸಂಬಂಧಗಳು ಕೂಡಿ ಬರುವ ಸಾಧ್ಯತೆ. ಶುಭಸಂಖ್ಯೆ:1

ಕಟಕ: ಸಹೋದ್ಯೋಗಿಗಳೊಂದಿಗೆ ವ್ಯವಹಾರದಲ್ಲಿ ಜಾಗರೂಕರಾಗಿರಿ. ವಾಹನ ಚಾಲನೆಯಲ್ಲಿ ಎಚ್ಚರ. ಬಂಧುಗಳ ಜತೆ ಮನಸ್ತಾಪ. ಶುಭಸಂಖ್ಯೆ: 7

ಸಿಂಹ: ಬಂಧುಗಳಲ್ಲಿ ಹೆಚ್ಚಿನ ಪ್ರಶಂಸೆಗೆ ಭಾಜನರಾಗುವಿರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಬಂಧು ಮಿತ್ರರ ಸಮಾಗಮ. ಶುಭಸಂಖ್ಯೆ: 4

ಕನ್ಯಾ: ಮನೆಯಲ್ಲಿ ಹೊಂದಾಣಿಕೆಯಿಂದ ವರ್ತಿಸಿ. ಪತ್ನಿಯ ಸಹಕಾರದಿಂದ ಧನಾಗಮ. ಹಿರಿಯರ ಸಲಹೆ ಧಿಕ್ಕರಿಸದೆ ಪಾಲಿಸಿ. ಶುಭಸಂಖ್ಯೆ: 2

ತುಲಾ: ವೃತ್ತಿಯಲ್ಲಿ ಹೊಂದಾಣಿಕೆ ಇರುವುದು ಅವಶ್ಯಕ. ವಿಶೇಷ ವ್ಯಕ್ತಿಗಳ ಪರಿಚಯ. ಭೂವಿವಾದದಲ್ಲಿ ಸಂಧಾನ ಯಶಸ್ವಿ. ಶುಭಸಂಖ್ಯೆ: 4

ವೃಶ್ಚಿಕ: ವ್ಯಾಪಾರದಲ್ಲಿ ಏರುಪೇರು. ಕುಟುಂಬದಲ್ಲಿ ಉತ್ಸಾಹ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಹಿತಶತ್ರುಗಳೊಂದಿಗೆ ಜಾಗೃತರಾಗಿರಿ. ಶುಭಸಂಖ್ಯೆ: 6

ಧನುಸ್ಸು: ಚಿನ್ನಾಭರಣ ಖರೀದಿಸುವ ಸಾಧ್ಯತೆ. ಹಿರಿಯರ ಆರೋಗ್ಯದ ಬಗ್ಗೆ ನಿಗಾ ವಹಿಸಿ. ಪ್ರಮುಖ ವಿಷಯದಲ್ಲಿ ಸ್ನೇಹಿತರ ಸಹಕಾರ. ಶುಭಸಂಖ್ಯೆ: 2

ಮಕರ: ಚಿನ್ನಾಭರಣ ವ್ಯಾಪಾರಿಗಳು ಮೋಸ ಹೋಗ ಬಹುದು. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ. ತಾಳ್ಮೆ ಇರಲಿ. ಶುಭಸಂಖ್ಯೆ: 1

ಕುಂಭ: ವರ್ತನೆಯಲ್ಲಿ ಸಹಜತೆ ಇರಲಿ. ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ಆತ್ಮವಿಶ್ವಾಸಕ್ಕೆ ಆಘಾತ. ದಿನಾಂತ್ಯದಲ್ಲಿ ಸಿಹಿಸುದ್ದಿ. ಶುಭಸಂಖ್ಯೆ: 2

ಮೀನ: ಮನೆಯಲ್ಲಿ ಶುಭ ಸಮಾರಂಭದ ಸಡಗರ. ಇಷ್ಟಾರ್ಥ ಸಿದ್ಧಿಗಾಗಿ ಇಷ್ಟ ದೇವರನ್ನು ಪ್ರಾರ್ಥಿಸಿ. ಅವಿವಾಹಿತರಿಗೆ ಸಿಹಿಸುದ್ದಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net