ನಿತ್ಯ ಭವಿಷ್ಯ: ಈ ರಾಶಿಯವರಿಗೆ ಹೊಸ ಆಸ್ತಿ, ಜಮೀನು, ಒಡವೆ ಕೊಂಡುಕೊಳ್ಳಲು ಸುಸಂದರ್ಭ

NITYA BHAVISHYA
Published on

ಮೇಷ: ಉತ್ತಮವಾದ ಅನೇಕ ಅವಕಾಶಗಳನ್ನು ಪಡೆಯಲಿದ್ದೀರಿ. ನಿಮ್ಮ ಮನದ ಸಂಕಲ್ಪಗಳು ನೆರವೇರಲು ಸಾಧ್ಯವಿದೆ. ಶುಭಸಂಖ್ಯೆ: 1

ವೃಷಭ: ಇಚ್ಛಿಸಿದಷ್ಟು ವೇಗವಾಗಿ ಕೆಲಸವನ್ನು ಮುಂದುವರಿಸಲು ಕಷ್ಟ ಆದೀತು. ಆದರೂ ಆಶಾದಾಯಕ ದಿನವಾಗಿದೆ. ಶುಭಸಂಖ್ಯೆ: 7

ಮಿಥುನ: ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು ಎಂಬ ಮಾತನ್ನು ಕೇಳಿರುತ್ತೀರಿ. ಅದನ್ನು ಪರಿಪಾಲಿಸಿದರೆ ಕ್ಷೇಮವಿದೆ. ಶುಭಸಂಖ್ಯೆ: 4

ಕಟಕ: ಆಸ್ತಿಯ ವಿಚಾರದಲ್ಲಿ ಎದುರಾಳಿಗಳು ತೊಂದರೆ ಕೊಡಬಹುದು. ಅವರನ್ನು ಉಪಾಯದಿಂದಲೇ ಎದುರಿಸಿ. ಶುಭಸಂಖ್ಯೆ: 9

ಸಿಂಹ: ಮೋಸಗಾರರು ನಿಮ್ಮ ಬಳಿ ಹಣ ವಸೂಲಿ ಮಾಡುವ ಸಾಧ್ಯತೆ ಇದೆ. ನಿಮ್ಮ ಎಚ್ಚರದಲ್ಲಿ ನೀವು ಇರುವುದು ಉತ್ತಮ. ಶುಭಸಂಖ್ಯೆ: 3

ಕನ್ಯಾ: ಮಿತ್ರರು ಯಾರು, ಹಿತಶತ್ರುಗಳು ಯಾರು ಎಂಬ ಗೊಂದಲ ಮೂಡೀತು. ಯಾರಲ್ಲೂ ನಿಮ್ಮ ಗುಟ್ಟುಗಳನ್ನು ಹೇಳದಿರಿ. ಶುಭಸಂಖ್ಯೆ: 8

ತುಲಾ: ಬಿಳಿಯ ಪುಡಿಯೆಲ್ಲ ಸಕ್ಕರೆ ಎಂದು ನಂಬಿ ಮೋಸ ಹೋದೀರಿ. ಎಚ್ಚರಿಕೆಯಿಂದ ಇದ್ದು ಕಷ್ಟಗಳಿಂದ ತಪ್ಪಿಸಿಕೊಳ್ಳಿ. ಶುಭಸಂಖ್ಯೆ: 6

ವೃಶ್ಚಿಕ: ಧೂರ್ತ ಜನರು ನಿಮ್ಮನ್ನು ಹಿಂಬಾಲಿಸುತ್ತಲೇ ಇರುತ್ತಾರೆ. ನಗುನಗುತ್ತ ಅವರನ್ನು ದೂರ ಕಳಿಸಿದರೆ ನಿಮಗೂ ನೆಮ್ಮದಿ. ಶುಭಸಂಖ್ಯೆ: 2

ಧನುಸ್ಸು: ಆತ್ಮೀಯರಾದವರೂ ನೆರವನ್ನು ನೀಡಲು ಹಿಂಜರಿಯಬಹುದು. ಉತ್ಸಾಹ ಕಳೆದುಕೊಳ್ಳದೆ ಕೆಲಸಗಳನ್ನು ಮುಂದುವರಿಸಿ. ಶುಭಸಂಖ್ಯೆ: 5

ಮಕರ: ಭಿನ್ನಾಭಿಪ್ರಾಯದಿಂದ ನಿಮ್ಮ ಆಪ್ತರಾದವರು ದೂರವಾಗಬಹುದು. ಶ್ರದ್ಧಾಭಕ್ತಿಗಳಿಂದ ಆಂಜನೇಯ ಸ್ತೋತ್ರ ಪಠಿಸಿ. ಶುಭಸಂಖ್ಯೆ: 1

ಕುಂಭ: ಮಕ್ಕಳಿಂದ ಸ್ವಲ್ಪ ಕಿರಿಕಿರಿ ಉಂಟಾಗುವ ಸಾಧ್ಯತೆಗಳಿವೆ. ಸಮಾಧಾನದಿಂದ ಅವರನ್ನು ನಿಯಂತ್ರಿಸುವುದು ಯುಕ್ತ. ಶುಭಸಂಖ್ಯೆ: 4

ಮೀನ: ಹೊಸ ಆಸ್ತಿ, ಜಮೀನು, ಒಡವೆ ಇತ್ಯಾದಿಗಳನ್ನು ಕೊಂಡುಕೊಳ್ಳಲು ತಕ್ಕ ಸಂದರ್ಭವಾಗಿದೆ. ಮಹಾಲಕ್ಷ್ಮಿಯನ್ನು ಧ್ಯಾನಿಸಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net