ಈ ರಾಶಿಯವರಿಗೆ ಇಂದು ಸಂಗಾತಿಯೊಂದಿಗೆ ವಿರಸ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಈ ದಿನ ಖರ್ಚು ವೆಚ್ಚಗಳು ಎದುರಾಗಬಹುದು. ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ. ವಾದ - ವಿವಾದ ತಪ್ಪಿಸಿ. ಮಕ್ಕಳ ವೃತ್ತಿಜೀವನದ ಚಿಂತೆ. ಶುಭಸಂಖ್ಯೆ: 9

ವೃಷಭ: ಕಾರ್ಯ ಕ್ಷೇತ್ರದಲ್ಲಿನ ಚಿಂತೆ ಬಿಟ್ಟುಬಿಡಿ. ಒಳ್ಳೆಯ ಸುದ್ದಿ ಬರಲಿದೆ. ಯಾವುದೇ ಕಾಗದದ ಮೇಲೆ ಸಹಿ ಮಾಡುವ ಮೊದಲು ಹಲವಾರು ಸಲ ಯೋಚಿಸಿ. ಶುಭಸಂಖ್ಯೆ:2

ಮಿಥುನ: ಅನೇಕ ಆಶ್ಚರ್ಯಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದಲ್ಲಿ ಎಲ್ಲ ರೀತಿಯ ಬೆಂಬಲ. ಇಂದು ಹೆಚ್ಚು ಸಂತೋಷವಿದೆ. ಸಂಪತ್ತು ವೃದ್ಧಿ. ಶುಭಸಂಖ್ಯೆ: 4

ಕಟಕ: ಮನೆಯ ಕಿರಿಯ ಸದಸ್ಯರ ವೃತ್ತಿಜೀವನದ ಕಾಳಜಿ ಕೊನೆಗೊಳ್ಳುತ್ತದೆ. ನಿತ್ಯ ಕೆಲಸದಲ್ಲಿ ಬದಲಾವಣೆ. ವ್ಯಾಪಾರಿಗಳಿಗೆ ಶುಭ. ಶುಭಸಂಖ್ಯೆ: 2

ಸಿಂಹ: ಗಳಿಕೆ ಹೆಚ್ಚಾಗುತ್ತದೆ. ವೆಚ್ಚವನ್ನು ನಿಯಂತ್ರಿಸಿದರೆ ಮಾತ್ರ ಸಂಪತ್ತು ಹೆಚ್ಚಾಗಬಹುದು. ನಿಮ್ಮ ಸಕಾರಾತ್ಮಕ ಮನಸ್ಥಿತಿಯು ಬದಲಾವಣೆಗೆ ಕಾರಣ. ಶುಭಸಂಖ್ಯೆ:6

ಕನ್ಯಾ: ನಿಮ್ಮ ಸಹೋದ್ಯೋಗಿಗಳು ಇಂದು ಸ್ವಲ್ಪ ಶಾಂತ ಮನಸ್ಥಿತಿಯಲ್ಲಿರುತ್ತಾರೆ. ನಿಮ್ಮೊಳಗಿನ ಪ್ರತಿಭೆಯನ್ನು ಪ್ರದರ್ಶಿಸಿ. ಆರ್ಥಿಕವಾಗಿ ಚೇತರಿಕೆ. ಶುಭಸಂಖ್ಯೆ: 1

ತುಲಾ: ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಸ್ಥಗಿತಗೊಂಡ ಕಾರ್ಯಗಳಿಗೆ ಚಾಲನೆ. ವಿರೋಧಿಗಳಿಗೆ ಸೋಲು. ಖರ್ಚಿನತ್ತ ಹಿಡಿತವಿರಲಿ. ಶುಭಸಂಖ್ಯೆ: 8

ವೃಶ್ಚಿಕ: ಕಚೇರಿಯಲ್ಲಿ ಕಿರಿ ಕಿರಿ. ಮನೆಯಲ್ಲಿ ಕಿರಿಯರಿಂದ ಕೆಲವು ವಾದ-ವಿವಾದಗಳು ಎದುರಾಗಬಹುದು. ಸಂಗಾತಿಯಿಂದ ಬೆಂಬಲ. ಶುಭಸಂಖ್ಯೆ: 6

ಧನುಸ್ಸು: ಇಂದು ನಿಮ್ಮ ಕಠಿಣ ಪರಿಶ್ರಮದ ಫಲವನ್ನು ಪಡೆಯುತ್ತೀರಿ. ಸಹೋದ್ಯೋಗಿಗಳ ಜೊತೆ ಎಚ್ಚರ ವಹಿಸಿ, ಇಂದು ನಿಮಗೆ ಸವಾಲಿನ ದಿನ. ಶುಭಸಂಖ್ಯೆ: 4

ಮಕರ: ಈ ದಿನ, ನಿಮಗೆ ಹಣಕಾಸು ಲಭಿಸುವ ಯೋಗವಿದೆ. ವ್ಯವಹಾರದಲ್ಲಿ ಬಹಳ ಜಾಗರೂಕರಾಗಿ ಇರಬೇಕು. ಕುಟುಂಬ ವರ್ಗದಲ್ಲಿ ತಳಮಳ. ಶುಭಸಂಖ್ಯೆ: 6

ಕುಂಭ: ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಉತ್ತಮ ದಿನ. ಸಂಚಾರ ಯೋಗ. ಕೆಲಸದಲ್ಲಿ ಉದಾಸೀನ. ಆರೋಗ್ಯದ ಬಗ್ಗೆ ಜಾಗ್ರತೆ. ಚಾಲನೆಯಲ್ಲಿ ಎಚ್ಚರ. ಶುಭಸಂಖ್ಯೆ: 9

ಮೀನ: ಒತ್ತಡಕ್ಕೆ ಒಳಗಾಗಬಹುದು. ಖರ್ಚನ್ನು ನಿಯಂತ್ರಿಸಲು ಕಷ್ಟ. ಸ್ನೇಹಿತರ ಬೆಂಬಲದೊಂದಿಗೆ ಕಾರ್ಯಸಿದ್ದಿ. ಸಂಗಾತಿಯೊಂದಿಗೆ ವಿರಸ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net