ಈ ರಾಶಿಯವರಿಗೆ ಇಂದು ನಿರೀಕ್ಷಿಸಿದ ಕಾರ್ಯ ಸಾಧಿಸಿದ ತೃಪ್ತಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಪ್ರಾಮಾಣಿಕತೆಯಿಂದ ಜನಮನ್ನಣೆ. ಅನಿರೀಕ್ಷಿತ ಧನಾಗಮ. ನೂತನ ಮಿತ್ರರ ಭೇಟಿ. ಗೃಹೋಪಕರಣ ವಸ್ತುಗಳ ಸಂಗ್ರಹ. ಶುಭಸಂಖ್ಯೆ: 2

ವೃಷಭ: ಕೃಷಿಕರಿಗೆ, ಹೈನುಗಾರರಿಗೆ, ಪಶು ಪಕ್ಷಿ ಸಾಕಣೆಗಾರರಿಗೆ ಲಾಭಕರ. ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನ ಪಾಲಿಸಿ. ಶುಭಸಂಖ್ಯೆ: 9

ಮಿಥುನ: ದಾಕ್ಷಿಣ್ಯ ಕಠೋರತೆ ಪ್ರವೃತ್ತಿಯಿಂದ ವ್ಯವಹರಿಸದಿರಿ. ಪಾಲುದಾರರಿಗೆ ಸರಿಯಾದ ಮಾರ್ಗದರ್ಶನ ನೀಡಿ ಸಹಕರಿಸಿ. ಶುಭಸಂಖ್ಯೆ: 4

ಕಟಕ: ಜಲೋತ್ಪನ್ನ ವಸ್ತುಗಳಿಂದ ಲಾಭ. ಸಕಾರಾತ್ಮಕ ಚಿಂತನೆ, ತಂತ್ರಗಾರಿಕೆಯಿಂದ ಕಾರ್ಯಸಿದ್ಧಿ. ಧನಾರ್ಜನೆಗೆ ಕೊರತೆ ಇರದು. ಶುಭಸಂಖ್ಯೆ: 6

ಸಿಂಹ: ದಾಖಲಾತಿ ಒಡಂಬಡಿಕೆಯಲ್ಲಿ ಜಾಗ್ರತೆ ವಹಿಸುವುದರಿಂದ ಭೂಮಿ, ವಾಹನ, ಗೃಹ ಕ್ರಯ ವಿಕ್ರಯದಲ್ಲಿ ಯಶಸ್ಸು. ಶುಭಸಂಖ್ಯೆ: 2

ಕನ್ಯಾ: ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿದರೂ ದಾಕ್ಷಿಣ್ಯ ಪ್ರವೃತ್ತಿಯಿಂದ ಸಮೀಪದ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ. ಶುಭಸಂಖ್ಯೆ: 1

ತುಲಾ: ಆರೋಗ್ಯ ವೃದ್ಧಿ. ಆರ್ಥಿಕ ವಿಚಾರದಲ್ಲಿ ಅತಿಆಸೆ ಮಾಡದೆ ಅವಕಾಶ ಉಪಯೋಗಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸ್ಥಾನ. ಶುಭಸಂಖ್ಯೆ: 8

ವೃಶ್ಚಿಕ: ಉತ್ತಮ ಜನಮನ್ನಣೆ. ನಿರೀಕ್ಷೆಗಿಂತಲೂ ಹೆಚ್ಚಿನ ಧನಾಗಮ. ಪ್ರಯಾಣದಿಂದ ಲಾಭ. ನಿರೀಕ್ಷಿಸಿದ ಕಾರ್ಯ ಸಾಧಿಸಿದ ತೃಪ್ತಿ. ಶುಭಸಂಖ್ಯೆ: 5

ಧನುಸ್ಸು: ನೂತನ ವ್ಯವಹಾರಕ್ಕೆ ಅವಕಾಶ. ಸ್ಥಾನ ಮಾನಕ್ಕೆ ಧನಾರ್ಜನೆಗೆ ಕೊರತೆ ಇರದು. ಗುರುಹಿರಿಯರೊಂದಿಗೆ ವಾಗ್ವಾದ ಬೇಡ. ಶುಭಸಂಖ್ಯೆ: 6

ಮಕರ: ದೂರ ಪ್ರಯಾಣದಿಂದಲೂ ಪಾಲುದಾರಿಕಾ ವ್ಯವಹಾರದಿಂದಲೂ ಆರ್ಥಿಕ ಲಾಭ. ನಿರೀಕ್ಷಿತ ಸ್ಥಾನಮಾನದಿಂದ ಸಮಾಧಾನ. ಶುಭಸಂಖ್ಯೆ: 9

ಕುಂಭ: ಸ್ವಂತ ಪರಿಶ್ರಮದಿಂದ ಗುರಿ ಸಾಧಿಸಿದ ತೃಪ್ತಿ. ಉತ್ತಮ ಧನಾರ್ಜನೆ. ವಿದೇಶ ಮೂಲದ ಬಂಧು ಮಿತ್ರರಿಂದ ಸಂತಸದ ಸುದ್ದಿ. ಶುಭಸಂಖ್ಯೆ: 3

ಮೀನ: ಕಾರ್ಯನಿಮಿತ್ತ ದೀರ್ಘ ಪ್ರಯಾಣದಿಂದ ಲಾಭ. ಅಧ್ಯಯನಶೀಲರಿಗೆ ದೇಶ ವಿದೇಶದ ಸಂಸ್ಥೆಗಳಲ್ಲಿ ಪ್ರಯತ್ನಿಸಿದರೆ ಅವಕಾಶ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net