ಈ ರಾಶಿಯ ಮಹಿಳೆಯರಿಗೆ ಇಂದು ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕಾರ್ಯಗಳಲ್ಲಿ ಜಯ. ವಿನಾಕಾರಣ ದ್ವೇಷ, ಅಧಿಕ ಕೋಪ. ಉನ್ನತ ಸ್ಥಾನಮಾನ, ಬೇರೆಯವರನ್ನ ನಿಷ್ಠುರವಾಗಿ ಕಾಣುವಿರಿ. ಶುಭಸಂಖ್ಯೆ: 9

ವೃಷಭ: ಚಂಚಲ ಮನಸ್ಸು. ಸ್ತ್ರೀಯರಿಂದ ತೊಂದರೆ, ಆೂೋಗ್ಯ ಸಮಸ್ಯೆ. ಶತ್ರು ಬಾಧೆ. ಹಿರಿಯರಲ್ಲಿ ಗೌರವ. ಭೂ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 7

ಮಿಥುನ: ಅನವಶ್ಯಕ ಮಾತು ಬೇಡ. ಶ್ರಮಕ್ಕೆ ತಕ್ಕ ಫಲ, ಪರರಿಂದ ಸಹಾಯ. ಮನೆಯಲ್ಲಿ ಸಂತೋಷ. ಶತ್ರುಗಳ ಮೇಲೆ ಜಯ. ಶುಭಸಂಖ್ಯೆ:1

ಕಟಕ: ಉನ್ನತ ಸ್ಥಾನ ಪ್ರಾಪ್ತಿ. ದೂರ ಪ್ರಯಾಣ. ಷೇರು ವ್ಯವಹಾರದಲ್ಲಿ ಲಾಭ. ಉದ್ಯೋಗದಲ್ಲಿ ವೃದ್ಧಿ. ನಂಬಿದ ಜನರಿಂದ ಮೋಸ. ಶುಭಸಂಖ್ಯೆ: 3

ಸಿಂಹ: ಮಾನಸಿಕ ಒತ್ತಡ. ಕಾರ್ಯದಲ್ಲಿ ತೊಂದರೆ. ಪಾಲುದಾರಿಕೆಯ ಮಾತುಕತೆ. ಅಧಿಕ ಖರ್ಚು, ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ. ಶುಭಸಂಖ್ಯೆ: 5

ಕನ್ಯಾ: ಗುರಿ ಸಾಧಿಸುವಿರಿ, ಮನಃಶಾಂತಿ. ಆರ್ಥಿಕ ಪರಿಸ್ಥಿತಿ ಗಣನೀಯವಾಗಿ ಸುಧಾರಿಸುತ್ತದೆ. ಮಿತ್ರರ ಭೇಟಿ. ದೂರ ಪ್ರಯಾಣ. ಶುಭಸಂಖ್ಯೆ: 7

ತುಲಾ: ಸ್ಥಗಿತ ಕೆಲಸಗಳಲ್ಲಿ ಮುನ್ನಡೆ. ಮಹಿಳೆಯರಿಗೆ ಲಾಭ. ವಿರೋಧಿಗಳಿಂದ ನಿಂದನೆ, ತೀರ್ಥಕ್ಷೇತ್ರ ಭೇಟಿ. ಶೀತ ಸಂಬಂಧೀ ರೋಗ. ಶುಭಸಂಖ್ಯೆ: 6

ವೃಶ್ಚಿಕ: ಮಾನಸಿಕ ಒತ್ತಡ. ದುಃಖಕ್ಕೆ ಗುರಿಯಾಗುವಿರಿ. ವಿವಾದಗಳಿಂದ ದೂರವಿರಿ. ಆರೋಗ್ಯದಲ್ಲಿ ಏರುಪೇರು. ಕೃಷಿಕರಿಗೆ ಲಾಭ. ಶುಭಸಂಖ್ಯೆ:3

ಧನುಸ್ಸು: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ನಾನಾ ವಿಚಾರಗಳಲ್ಲಿ ಆಸಕ್ತಿ. ಸ್ಥಳ ಬದಲಾವಣೆ. ವಿದ್ಯಾರ್ಥಿಗಳಿಗೆ ಸುಸಮಯ. ಶುಭಸಂಖ್ಯೆ: 6

ಮಕರ: ಕಾರ್ಯಗಳಲ್ಲಿ ವಿಳಂಬ. ವಾಹನದಿಂದ ತೊಂದರೆ. ದೈವಿಕ ಚಿಂತನೆ. ಪರರ ಧನ ಪ್ರಾಪ್ತಿ. ನಿರುದ್ಯೋಗಿಗಳಿಗೆ ಉದ್ಯೋಗ. ಶುಭಸಂಖ್ಯೆ: 8

ಕುಂಭ: ಸ್ಥಿರಾಸ್ತಿ ಸಂಪಾದನೆ. ವಿದೇಶದಿಂದ ಲಾಭ. ಸಲ್ಲದ ಅಪವಾದ. ಶುಭಕಾರ್ಯಕ್ಕೆ ಅಡೆತಡೆ. ಹಿತಶತ್ರುಗಳಿಂದ ದೂರವಿರಿ. ಶುಭಸಂಖ್ಯೆ: 9

ಮೀನ: ಹೊಸ ವ್ಯವಹಾರಗಳಲ್ಲಿ ಆಸಕ್ತಿ. ಉದ್ಯೋಗದಲ್ಲಿ ಸುಧಾರಣೆ. ವಿದ್ಯಾರ್ಥಿಗಳಲ್ಲಿ ಪ್ರಗತಿ. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net