ಈ ರಾಶಿಯವರಿಗೆ ಗೌರವ ಕೀರ್ತಿ ಅರಸಿ ಬಂದು ಎಲ್ಲವೂ ನಿರಾಳ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವ್ಯವಹಾರದಲ್ಲಿ ಅನುಕೂಲ. ಅಧಿಕ ಒತ್ತಡ. ಶತ್ರು ಬಾಧೆ ಮತ್ತು ಸಾಲಬಾಧೆ ಮನಸ್ಸಿಗೆ ಖೇದ ಉಂಟುಮಾಡಬಹುದು. ಶುಭಸಂಖ್ಯೆ: 6

ವೃಷಭ: ದಾಂಪತ್ಯದಲ್ಲಿ ಕಲಹ. ಮಕ್ಕಳಿಂದ ಅನುಕೂಲ. ಆರ್ಥಿಕ ಅಭಿವೃದ್ಧಿಯಾಗಲಿದೆ. ಕುಲದೇವರನ್ನು ಭಕ್ತಿಯಿಂದ ಸ್ಮರಣೆ ಮಾಡಿ. ಶುಭಸಂಖ್ಯೆ: 2

ಮಿಥುನ: ಅನಾರೋಗ್ಯ ಸಮಸ್ಯೆ ಕಾಡಬಹುದು. ಸ್ಥಿರಾಸ್ತಿಯಿಂದ ಅಧಿಕ ಲಾಭವಿದೆ. ಸಾಲಗಾರರೊಂದಿಗೆ ಮನಸ್ತಾಪ ಉಂಟಾದೀತು. ಶುಭಸಂಖ್ಯೆ: 8

ಕಟಕ: ಉದ್ಯೋಗದಲ್ಲಿ ಪ್ರಗತಿ ಸಾಧಿಸುವಿರಿ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಬುದ್ಧಿ ಚಂಚಲತೆಯಿಂದ ಗೊಂದಲ. ಶುಭಸಂಖ್ಯೆ: 9

ಸಿಂಹ: ತಾಯಿಯೊಂದಿಗೆ ಮನಸ್ತಾಪ. ಅನಿರೀಕ್ಷಿತ ಆಪತ್ತು. ಸ್ನೇಹಿತರೊಂದಿಗೆ ಕಲಹ ಮಾಡಿಕೊಳ್ಳಬೇಡಿ. ಸಮಾಧಾನದಿಂದಿರಿ. ಶುಭಸಂಖ್ಯೆ: 4

ಕನ್ಯಾ: ಕೋರ್ಟ್ ವ್ಯವಹಾರದ ಚಿಂತೆ. ಮನಸ್ಸಿಗೆ ಅಧಿಕ ಬೇಸರದ ಅನುಭವ. ಅಪರಿಚಿತ ವ್ಯಕ್ತಿಗಳಿಂದ ಆಪತ್ತು ಎದುರಾಗಬಹುದು. ಶುಭಸಂಖ್ಯೆ: 6

ತುಲಾ: ಅಧಿಕ ಕೋಪತಾಪಗಳು ಮನಸ್ಸನ್ನು ಹದಗೆಡಿಸೀತು. ಸಂಗಾತಿಯೊಂದಿಗೆ ಮುನಿಸು ಬೇಡ. ಮಾತಿನಿಂದ ಕುಟುಂಬದಲ್ಲಿ ಕಲಹ. ಶುಭಸಂಖ್ಯೆ: 3

ವೃಶ್ಚಿಕ: ಸ್ವಂತ ಉದ್ಯಮ ವ್ಯಾಪಾರ ಕೈಗೊಳ್ಳುವ ಆಲೋಚನೆ. ನೆರೆಹೊರೆಯವರಿಂದ ಕಿರಿಕಿರಿ. ಪ್ರಯಾಣದಲ್ಲಿ ಹಿನ್ನಡೆಯಾಗುವುದು. ಶುಭಸಂಖ್ಯೆ: 7

ಧನುಸ್ಸು: ದಾಂಪತ್ಯದಲ್ಲಿ ವಿರಸ ತಲೆದೋರಿದರೂ ಗೌರವ ಕೀರ್ತಿ ನಿಮ್ಮನ್ನು ಅರಸಿ ಬಂದು ಎಲ್ಲವೂ ನಿರಾಳ. ಶುಭಕಾರ್ಯದ ಚಿಂತೆ. ಶುಭಸಂಖ್ಯೆ: 5

ಮಕರ: ವ್ಯವಹಾರದಲ್ಲಿ ಲಾಭ. ಬಂಧು ಬಾಂಧವರಿಂದ ತೊಂದರೆ ಉಂಟಾಗಬಹುದು. ದೂರ ಪ್ರಯಾಣ ಮಾಡುವ ಸಂಭವ. ಶುಭಸಂಖ್ಯೆ: 1

ಕುಂಭ: ಸ್ನೇಹಿತರಿಂದ ಆರ್ಥಿಕ ಸಹಾಯ ದೊರೆತು ಯತ್ನ ಕಾರ್ಯದಲ್ಲಿ ಜಯ ನಿಮ್ಮದಾಗಲಿದೆ. ಮೋಜು-ಮಸ್ತಿಯಿಂದ ತೊಂದರೆ. ಶುಭಸಂಖ್ಯೆ: 9

ಮೀನ: ಸ್ನೇಹಿತರಿಂದ ನೋವು, ಸಂಕಟದ ಅನುಭವ. ಭೂಮಿಯಿಂದ ಶುಭಯೋಗ. ತಾಯಿಯಿಂದ ಸಹಕಾರ. ದೇವರ ದರ್ಶನ ಮಾಡಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net