ನಿತ್ಯಭವಿಷ್ಯ| ಈ ರಾಶಿಯ ವ್ಯಾಪಾರಸ್ಥರಿಗೆ ಇಂದು ಅಧಿಕ ಧನಲಾಭ

nity
Published on

ಮೇಷ: ಯಶಸ್ಸು ಸಿಗುವಾಗ ಎಡವಬೇಡಿ, ಎಚ್ಚರವಾಗಿರಿ. ಆತ್ಮಾಭಿಮಾನವನ್ನು ಬೆಳೆಸಿಕೊಳ್ಳಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 5

ವೃಷಭ: ಉದ್ಯೋಗದಲ್ಲಿ ತೃಪ್ತಿ. ದುಂದು ವೆಚ್ಚ ಮಾಡಬೇಡಿ. ಭವಿಷ್ಯದ ಚಿಂತೆ ಇರಲಿ. ಸಹೋದ್ಯೋಗಿಗಳಿಂದ ಪ್ರಶಂಸೆ. ಶುಭಸಂಖ್ಯೆ: 1

ಮಿಥುನ: ಹಿರಿಯರ ಸಲಹೆಯ ಮೇಲೆ ವಿಶೇಷ ಯಶಸ್ಸು. ಪತ್ನಿಯೊಂದಿಗೆ ವಿರಸ ತಲೆದೋರೀತು. ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 7

ಕಟಕ: ನಿಮ್ಮ ಶಿಫಾರಸಿನಿಂದ ದುರ್ಬಲರಿಗೆ ಸಹಾಯ. ಉಪಯುಕ್ತವಾದ ಕೆಲಸ ಮಾಡಿ. ದೂರದ ನೆಂಟರ ಆಗಮನ. ಶುಭಸಂಖ್ಯೆ: 4

ಸಿಂಹ: ಬಂಧುಗಳಲ್ಲಿ ಅಸಮಾಧಾನ. ಸಾರ್ವಜನಿಕವಾಗಿ ಸೌಜನ್ಯದಿಂದ ವರ್ತಿಸಿ. ಕುಟುಂಬದಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ. ಶುಭಸಂಖ್ಯೆ: 5

ಕನ್ಯಾ: ನಿಮ್ಮ ಹಿರಿತನದ ಬಗ್ಗೆ ಗರ್ವ. ವಿದ್ಯಾರ್ಥಿಗಳಿಗೆ ಶುಭದಿನ. ವಿವಾಹ ಅಪೇಕ್ಷಿತರಿಗೆ ಕಾರ್ಯಸಿದ್ದಿಯಾಗಿ ಸಮಾಧಾನ. ಶುಭಸಂಖ್ಯೆ: 3

ತುಲಾ: ಕುಟುಂಬದಲ್ಲಿ ಮದುವೆಯ ಸಂಭ್ರಮ.ಆತ್ಮೀಯ ಸ್ನೇಹಿತನ ಭೆೇಟಿ. ಧಾರ್ಮಿಕ ಕ್ಷೇತ್ರಕ್ಕೆ ಪ್ರವಾಸ ತೆರಳುವ ಸಾಧ್ಯತೆ. ಶುಭಸಂಖ್ಯೆ: 4

ವೃಶ್ಚಿಕ: ಪ್ರಯತ್ನಕ್ಕೆ ಹಲವು ಅವಕಾಶಗಳಿವೆ. ದೃಢ ನಿರ್ಧಾರ ತೆಗೆದುಕೊಳ್ಳಿ. ಅನಿರೀಕ್ಷಿತ ಧನಾಗಮನ. ಪತ್ನಿಯ ಸಲಹೆ ತೆಗೆದುಕೊಳ್ಳಿ. ಶುಭಸಂಖ್ಯೆ: 5

ಧನಸ್ಸು: ನಿಮ್ಮ ಮಾತಿನಿಂದ ವಿಶೇಷ ಕಾರ್ಯಸಿದ್ಧಿ. ಬಂಧುಗಳ ಪ್ರಶಂಸೆ. ವಿಶೇಷ ಅಧಿಕಾರ-ಪ್ರಾಪ್ತಿ ಸಾಧ್ಯತೆ. ಮಕ್ಕಳಿಂದ ಚಿಂತೆ. ಶುಭಸಂಖ್ಯೆ: 9

ಮಕರ: ಆರ್ಥಿಕವಾಗಿ ಹಾನಿಯಾದೀತು. ಭೂ ವ್ಯವಹಾರದಲ್ಲಿ ಮೋಸವಾದೀತು ಜಾಗೃತೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಶುಭಸಂಖ್ಯೆ: 7

ಕುಂಭ: ನಿರೀಕ್ಷಿತ ಲಾಭ ನಿಮ್ಮ ಕೈಸೇರಲಿದೆ. ಗುರು ಸನ್ನಿಧಾನಕ್ಕೆ ಭೆೇಟಿ. ತಂದೆತಾಯಿಗಳ ಮಾತನ್ನು ತಪ್ಪದೆ ಪಾಲಿಸಿ. ಶುಭಸಂಖ್ಯೆ: 8

ಮೀನ : ವ್ಯಾಪಾರಸ್ಥರಿಗೆ ಅಧಿಕ ಧನಲಾಭ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಸಂಗೀತಗಾರರಿಗೆ ಪ್ರೋತ್ಸಾಹ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net