

ಮೇಷ: ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆ ನಿಜವಾದರೂ ಬೆಟ್ಟದತ್ತ ಹೋಗಬಹುದು. ಮುಳ್ಳಿನ ಬಗ್ಗೆ ಜಾಗ್ರತೆ ಇರಲಿ. ಶುಭಸಂಖ್ಯೆ: 1
ವೃಷಭ: ನಿಮ್ಮ ಯೋಜನೆಯ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳಬೇಡಿ. ಇಡೀ ಯೋಜನೆಯನ್ನು ಅವರು ಹಾಳುಮಾಡಿಯಾರು. ಶುಭಸಂಖ್ಯೆ: 3
ಕಟಕ: ಖರ್ಚಿನ ದಾರಿಯನ್ನು ಇನ್ನೂ ವಿಶಾಲ ಮಾಡುತ್ತಿದ್ದೀರಿ. ಕೆಲವು ಅನಗತ್ಯ ಖರ್ಚುಗಳಿಗೆ ಕತ್ತರಿ ಹಾಕಿದರೆ ಒಳಿತಿದೆ. ಶುಭಸಂಖ್ಯೆ: 5
ಮಿಥುನ: ಸ್ನೇಹಿತರ ಜತೆಗೆ ಮಾತುಕತೆ ನಡೆಸುವುದು, ಸಲಹೆ ಕೇಳುವುದು ತಪ್ಪಲ್ಲ. ಆದರೆ ತರ್ಕದ ಮನೋಭಾವ ಇದ್ದೇ ಇರಲಿ. ಶುಭಸಂಖ್ಯೆ: 2
ಸಿಂಹ: ಭಯ ನಿವಾರಕನಾದ ಲಕ್ಷ್ಮೀನರಸಿಂಹನನ್ನು ಧ್ಯಾನಿಸಿ. ಲಕ್ಷ್ಮೀಕಟಾಕ್ಷಕ್ಕೆ ಅನುಕೂಲಕರ ದಾರಿಯೊಂದು ಒದಗಲಿದೆ. ಶುಭಸಂಖ್ಯೆ: 4
ಕನ್ಯಾ: ಮನಸ್ಸಿಗೆ ತೋಚಿದ್ದೆಲ್ಲ ದೊರೆಯಲೇಬೇಕು ಎಂಬ ಹಠಮಾರಿತನ ಬೇಡ. ಅದರಿಂದ ಸಮಸ್ಯೆಯೇ ಎದುರಾದೀತು. ಶುಭಸಂಖ್ಯೆ: 7
ತುಲಾ: ನಿಮ್ಮ ಬದುಕಿಗೆ ಹೊಸ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಇದು ಸಕಾಲವಾಗಿದೆ. ಜಾಸ್ತಿ ವ್ಯಾಯಾಮ ಬೇಡ. ಶುಭಸಂಖ್ಯೆ: 9
ವೃಶ್ಚಿಕ: ಲೋಕದ ದಾರಿಗಳಿಗಿಂತ ನಿಮ್ಮ ಮಾರ್ಗಗಳು ವಿಭಿನ್ನವಾಗಿವೆ. ಆದರೆ ಲೋಕಕ್ಕೆ ವಿರುದ್ಧವಾಗಿ ನಡೆದುಕೊಳ್ಳಲು ಹೋಗದಿರಿ. ಶುಭಸಂಖ್ಯೆ: 6
ಧನುಸ್ಸು: ಎಲ್ಲ ಕಡೆಯ ಬಾಗಿಲುಗಳೂ ಮುಚ್ಚಿಹೋಗಿವೆ ಎಂಬ ಹತಾಶೆ ಬೇಡ. ಇನ್ನಷ್ಟು ಪ್ರಯತ್ನದಿಂದ ಸಿದ್ಧಿ ಸಾಕಾರಗೊಳ್ಳಲಿದೆ. ಶುಭಸಂಖ್ಯೆ: 8
ಕುಂಭ: ಆರೋಗ್ಯದ ವಿಷಯಕ್ಕೆ ಪ್ರಾಧಾನ್ಯತೆ ಕೊಡಿ. ಆರೋಗ್ಯವು ಅತ್ಯಂತ ಅವಶ್ಯವಾದುದು ಎಂಬುದನ್ನು ಅರಿತುಕೊಳ್ಳಿ. ಶುಭಸಂಖ್ಯೆ: 1
ಮಕರ: ಮಹಾಗಣಪತಿಯನ್ನು ಭಜಿಸಿ. ಪ್ರಯತ್ನಿಸಿದ ಕಾರ್ಯಗಳಲ್ಲಿ ಅಡೆತಡೆಗಳು ಇರದಂತಹ ಸಿದ್ಧಿಯೇ ನಿಮಗೆ ಲಭಿಸಲಿದೆ. ಶುಭಸಂಖ್ಯೆ: 5
ಮೀನ: ಯಾರ ಬಳಿಯೂ ಅತಿಯಾದ ಮಾತು ಬೇಡ. ಮೌನವೇ ಬಂಗಾರ ಎಂಬಂತೆ ನಡೆದರೆ ಲಾಭವಾಗಲಿದೆ. ಶುಭಸಂಖ್ಯೆ: 3