ಈ ರಾಶಿಯವರಿಂದು ಸಂಗಾತಿಯ ಆರೈಕೆ ಮಾಡುವುದು ಮುಖ್ಯ, ಅಲಕ್ಷಿಸಿದರೆ ನಿಮಗೇ ನೋವಾಗಲಿದೆ

Nitya-Bhavishya-vvani-1
Published on

ಮೇಷ: ಬೇಡವಾದ ವಸ್ತುಗಳನ್ನು ಕೊಂಡುಕೊಳ್ಳುವ ಮೂಲಕ ಹಣವನ್ನು ವ್ಯರ್ಥ ಮಾಡದಿರಿ. ಕಷ್ಟ ಎದá-ರಾಗುವ ಸಾಧ್ಯತೆ ಇದೆ. ಶುಭಸಂಖ್ಯೆ: 6

ವೃಷಭ: ಎಲ್ಲರಿಗೂ ನೂರಕ್ಕೆ ನೂರು ಪಾಲಿನಷ್ಟು ಯಶಸ್ಸು ಯಾವುದೇ ಸಂದರ್ಭದಲ್ಲಿ ಸಿಗದು. ಸಿಕ್ಕಿದ್ದರಲ್ಲೇ ತೃಪ್ತಿಪಟ್ಟುಕೊಳ್ಳಿ. ಶುಭಸಂಖ್ಯೆ: 2

ಮಿಥುನ: ದೂರದ ಆಪ್ತ ಸ್ನೇಹಿತರ ಆಗಮನದಿಂದ ಹರ್ಷವಿದೆ. ಅವರಿಗಾಗಿ ನಿಮ್ಮ ತಕ್ಷಣದ ಕೆಲಸವನ್ನು ಮುಂದೂಡದಿರಿ. ಶುಭಸಂಖ್ಯೆ: 4

ಕಟಕ: ಪರಿಣಾಮಕಾರಿ ಮಾತುಗಳಿಂದ ಸುತ್ತಲಿನವರ ಗಮನ ಸೆಳೆಯುವಿರಿ. ಇದರಿಂದ ವಿಜಯದ ದಾರಿಯೊಂದು ತೆರೆಯಲಿದೆ. ಶುಭಸಂಖ್ಯೆ: 1

ಸಿಂಹ: ಅಕ್ಕಪಕ್ಕದವರೆಲ್ಲ ನಿಮ್ಮನ್ನು ಅಭಿಮಾನದಿಂದ ನೋಡಬಹá-ದಾದ ಪವಾಡ ಜರುಗಲಿದೆ. ಜೋಪಾನವಾಗಿ ನಿಭಾಯಿಸಿ. ಶುಭಸಂಖ್ಯೆ: 7

ಕನ್ಯಾ: ಈ ಸಂದರ್ಭದಲ್ಲಿ ಸಂಗಾತಿಯ ಆರೈಕೆ ಮಾಡುವುದು ಮುಖ್ಯ. ಅದನ್ನು ಅಲಕ್ಷಿಸಿದರೆ ನಿಮಗೇ ನೋವಾಗಲಿದೆ. ಶುಭಸಂಖ್ಯೆ: 5

ತುಲಾ: ಕಾಳಿಕಾಂಬೆಯ ಧ್ಯಾನದಿಂದ ಮಾನಸಿಕ ಸಮಾಧಾನ ಸಿದ್ಧಿಸಲಿದೆ. ಸಂಜೆಯ ವೇಳೆ ಹೊರಗಡೆ ಎಲ್ಲೂ ಹೋಗದಿರಿ. ಶುಭಸಂಖ್ಯೆ: 3

ವೃಶ್ಚಿಕ: ನೀವು ಮಾಡುವ ಒಳ್ಳೆಯ ಕೆಲಸ ಕೂಡ ಕೆಟ್ಟ ಕೆಲಸದಂತೆ ಕಾಣಿಸಬಹá-ದು. ಕಾರ್ಯದಲ್ಲಿ ಆದಷ್ಟು ಪಾರದರ್ಶಕತೆ ಇರಲಿ. ಶುಭಸಂಖ್ಯೆ: 9

ಧನಸ್ಸು: ಆಹಾರೋದ್ಯಮಿಗಳು, ತಾಂತ್ರಿಕತೆಯನ್ನು ಬಲ್ಲವರಿಗೆ ಆದಾಯದಲ್ಲಿ ಏರಿಕೆಯಾಗಲಿದೆ. ಮಹಾಲಕ್ಷ್ಮಿಯನ್ನು ಸ್ತುತಿಸಿ. ಶುಭಸಂಖ್ಯೆ: 8

ಮಕರ: ಪರಿಶ್ರಮವಿರದೆ ಧನಲಾಭ ಸಾಧ್ಯವಿಲ್ಲ ಎಂಬ ಸತ್ಯ ತಿಳಿದುಬರಲಿದೆ. ಉತ್ಸಾಹದಿಂದ ಮುನ್ನುಗ್ಗಿದರೆ ಲಾಭವಿದೆ. ಶುಭಸಂಖ್ಯೆ: 6

ಕುಂಭ: ಆತ್ಮಪ್ರಶಂಸೆ ಖಂಡಿತವಾಗಿಯೂ ಒಳ್ಳೆಯದಲ್ಲ. ಇತರರಿಂದಲೂ ಪ್ರಶಂಸೆಯನ್ನು ನಿರೀಕ್ಷಿಸದಿರಿ. ಕಾಯಕವೇ ಕೈಲಾಸವಾಗಲಿ. ಶುಭಸಂಖ್ಯೆ: 4

ಮೀನ: ಗಣಪತಿಯನ್ನು ಶ್ರದ್ಧೆಯಿಂದ ಆರಾಧಿಸಿ. ಕೈಗೊಂಡ ಕಾರ್ಯಗಳು ಅಡೆತಡೆ ಇಲ್ಲದೆಯೇ ಬಹಳ ಬೇಗ ನೆರವೇರಲಿವೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net