ನಿತ್ಯಭವಿಷ್ಯ: ಈ ರಾಶಿಯವರಿಂದು ಹಣಕಾಸಿನ ವ್ಯವಹಾರದಲ್ಲಿ ಜಾಗರೂಕರಾಗಿರಿ

Nitya-Bhavishya-vvani-1-2
Published on

ಮೇಷ: ವಾಹನ ಚಲಾಯಿಸುವಲ್ಲಿ ಎಚ್ಚರವಿರಲಿ. ವಿವಾಹ ಯೋಗವಿದೆ. ಖಾಸಗಿ ಉದ್ಯೋಗಿಗಳಿಗೆ ನಿರಾಸಕ್ತಿ ಮೂಡಬಹುದು. ಶುಭಸಂಖ್ಯೆ: 9

ವೃಷಭ: ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಶುಭದಿನ. ಮಹಿಳೆಯರಿಗೆ ಯಶಸ್ಸು. ವಿದೇಶಿ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 1

ಮಿಥುನ: ಸರ್ಕಾರಿ ಕೆಲಸದಲ್ಲಿ ಯಶಸ್ಸು. ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಆರ್ಥಿಕವಾಗಿ ಪ್ರಗತಿ ಹೊಂದುವ ಸೂಚನೆಗಳಿವೆ. ಶುಭಸಂಖ್ಯೆ: 2

ಕಟಕ: ಸಾರ್ವಜನಿಕ ಕ್ಷೇತ್ರದಲ್ಲಿ ಜನಪ್ರಿಯತೆ. ಮಕ್ಕಳ ಆರೋಗ್ಯದಲ್ಲಿ ಎಚ್ಚರ. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕರಾಗಿರಿ. ಶುಭಸಂಖ್ಯೆ: 6

ಸಿಂಹ: ಚರ್ಮವ್ಯಾಧಿ ಬಾಧಿಸಬಹುದು. ಹಾಡುಗಾರರಿಗೆ ಉತ್ತಮ ಅವಕಾಶ. ಆತ್ಮವಿಶ್ವಾಸದಿಂದ ಜಯ ನಿಮ್ಮ ಪಾಲಿಗೆ ಒದಗಲಿದೆ. ಶುಭಸಂಖ್ಯೆ: 1

ಕನ್ಯಾ: ಹೂವಿನ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ರೈತರ ಫಸಲಿಗೆ ಬೇಡಿಕೆ. ಪಾಲುದಾರಿಕೆ ವ್ಯವಹಾರದ ಆರ್ಥಿಕತೆಯಲ್ಲಿ ಚೇತರಿಕೆ. ಶುಭಸಂಖ್ಯೆ: 4

ತುಲಾ: ರಿಯಲ್​ ಎಸ್ಟೇಟ್​ ವ್ಯವಹಾರದಲ್ಲಿ ಆದಾಯ. ಬಟ್ಟೆ ಕಾರ್ಖಾನೆಯ ಕಾರ್ಮಿಕರು ಎಚ್ಚರದಿಂದಿರಿ. ವಸ್ತು ಸಂಗ್ರಹದಲ್ಲಿ ಆಸಕ್ತಿ. ಶುಭಸಂಖ್ಯೆ: 9

ವೃಶ್ಚಿಕ: ಆರೋಗ್ಯದಲ್ಲಿ ಅಸ್ವಸ್ಥತೆ ಕಾಡಬಹುದು. ಜಾಹೀರಾತು ಸಂಸ್ಥೆಗಳಿಗೆ ಲಾಭ. ವಿದೇಶಿವಸ್ತು ಉತ್ಪನ್ನಗಳಿಗೆ ಹೆಚ್ಚುವ ಬೇಡಿಕೆ. ಶುಭಸಂಖ್ಯೆ: 4

ಧನುಸ್ಸು: ಹೈನುಗಾರಿಕೆಗೆ ಬೇಡಿಕೆ. ಸಿನಿಮಾ ಕ್ಷೇತ್ರದಲ್ಲಿ ಅವಕಾಶ ದೊರೆಯಬಹುದು. ವಿದ್ಯಾರ್ಥಿಗಳಿಗೆ ಅನುಕೂಲ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 2

ಮಕರ: ಪಾಲುದಾರಿಕೆಯಲ್ಲಿ ಸಮಸ್ಯೆ. ಆತ್ಮವಿಶ್ವಾಸದಿಂದ ವರ್ತಿಸಿ. ಸಣ್ಣ ಕೈಗಾರಿಕೆಗಳಿಗೆ ಸುಸಮಯ. ವ್ಯಾಪಾರಸ್ಥರಿಗೆ ಧನಲಾಭ. ಶುಭಸಂಖ್ಯೆ: 8

ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ. ಧಾರ್ಮಿಕ ಕ್ಷೇತ್ರಗಳ ಭೇಟಿ. ಸ್ವಯಂ ಉದ್ಯೋಗಸ್ಥರಿಗೆ ಶುಭದಾಯಕ ದಿನ. ಶುಭಸಂಖ್ಯೆ: 3

ಮೀನ: ಕೃಷಿ ಉಪಕರಣಗಳ ಖರೀದಿಯಲ್ಲಿ ಮೋಸ. ನಿದ್ರಾಹಿನತೆ ಕಾಡಬಹುದು. ಕುಶಲಕಾರ್ಮಿಕರಿಗೆ ಬೇಡಿಕೆ. ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net