ಯಾವುದೇ ಕೆಲಸ ಮಾಡುವಾಗ ಈ ರಾಶಿಯವರಿಂದು ತುಂಬಾ ಎಚ್ಚರದಿಂದಿರಿ...

Nitya-Bhavishya-vvani-1-2-1
Published on

ಮೇಷ: ಮನೆಯಲ್ಲಿ ಪಿತ್ರಾರ್ಜಿತ ಆಸ್ತಿಯ ಹಂಚಿಕೆಯ ಬಗ್ಗೆ ರ್ಚಚಿಸಬೇಡಿ. ಅದರಿಂದಾಗಿ ಜಗಳ ಉಂಟಾಗಬಹುದು. ಅದೃಷ್ಟಸಂಖ್ಯೆ: 3

ವೃಷಭ: ನಿರುದ್ಯೋಗಿಗಳು ಸಹೋದರರ ಸಹಾಯದಿಂದ ಹೊಸ ಕೆಲಸದ ಅವಕಾಶ ಪಡೆಯಬಹುದು. ಅದೃಷ್ಟಸಂಖ್ಯೆ: 5

ಮಿಥುನ: ವ್ಯಾಯಾಮ ಮಾಡುವಾಗ, ಭಾರ ಹೊರುವಾಗ, ಯಾವುದಾದರೂ ಕಷ್ಟದ ಕೆಲಸ ಮಾಡುವಾಗ ಎಚ್ಚರ. ಅದೃಷ್ಟಸಂಖ್ಯೆ: 1

ಕಟಕ: ಯಾರೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಬದಲಾಗಬೇಕೆನ್ನುವ ಒತ್ತಡ ನಿಮ್ಮ ಮೇಲೆ ಹೆಚ್ಚಾಗಲಿದೆ. ಅದೃಷ್ಟಸಂಖ್ಯೆ: 7

ಸಿಂಹ: ಪರಿಸ್ಥಿತಿಯ ಕಾರಣದಿಂದ ಸತ್ಯ ಕಣ್ಣಿಗೆ ಕಂಡರೂ ಕಾಣದಂತೆ ಇರುತ್ತೀರಿ. ನಿಮ್ಮಲ್ಲಿ ಆ ಮಟ್ಟಿಗಿನ ಒತ್ತಡ ಇದೆ. ಅದೃಷ್ಟಸಂಖ್ಯೆ: 9

ಕನ್ಯಾ: ಯಾರಿಗೋ ಸಹಾಯ ಮಾಡಬೇಕು ಎಂದು ಪೂತಪಿಸುತ್ತೀರಿ. ಸಾಯಂಕಾಲದ ಹೊತ್ತಿಗೆ ಸರಿಹೋಗುತ್ತೀರಿ. ಅದೃಷ್ಟಸಂಖ್ಯೆ: 4

ತುಲಾ: ನಿಮ್ಮ ಕೆಲಸದ ಬಗ್ಗೆ ಮೇಲಧಿಕಾರಿಗಳು ಅತೃಪ್ತಿ ತೋರುವ ಸಾಧ್ಯತೆ. ಆ ಸಂದರ್ಭದಿಂದ ತಪ್ಪಿಸಿಕೊಳ್ಳಲಾಗದು. ಅದೃಷ್ಟಸಂಖ್ಯೆ: 6

ವೃಶ್ಚಿಕ: ನಿಮ್ಮ ಶ್ರಮವನ್ನು ಹಗುರವಾಗಿ ತೆಗೆದುಕೊಳ್ಳುತ್ತಿರುವ ಕೆಲವರು ಇಂದು ನಿಮ್ಮ ಮುಂದೆಯೇ ಬರಲಿದ್ದಾರೆ. ಅದೃಷ್ಟಸಂಖ್ಯೆ: 1

ಧನುಸ್ಸು: ತಪ್ಪು ಮಾಡಿರುತ್ತೀರಿ ಎಂದಲ್ಲ. ಇದ್ದ ಇಬ್ಬರಲ್ಲಿ ಕದ್ದವರು ಯಾರು ಎಂಬಂತೆ ತಪ್ಪು ಮಾಡಿದವರ ಜತೆಗಿರುವಿರಿ. ಅದೃಷ್ಟಸಂಖ್ಯೆ: 2

ಮಕರ: ವಿಭಿನ್ನತೆಯ ಹುಡುಕಾಟದಿಂದ ಹಣ ವ್ಯರ್ಥ. ಚಿಕ್ಕ ವಿಚಾರಕ್ಕೆ ದೊಡ್ಡ ಮಟ್ಟದ ಹಣ ಖರ್ಚಾದ ಬಗ್ಗೆ ಬೇಸರ. ಅದೃಷ್ಟಸಂಖ್ಯೆ: 7

ಕುಂಭ: ಬಯಸಿದ ಬದಲಾವಣೆ ಇನ್ನೂ ಬಾರದ ಕಾರಣ ಸ್ನೇಹಿತರು ನಿಮ್ಮ ಮೇಲೆ ಕೋಪಿಸಿಕೊಳ್ಳಬಹುದು. ಅದೃಷ್ಟಸಂಖ್ಯೆ: 9

ಮೀನ: ಹಿಂದೆ ಎಂದೂ ದೂರಪ್ರಯಾಣವನ್ನು ತಪ್ಪಿಸಿಲ್ಲ. ಇದೇ ಮೊದಲ ಸಲ ಎಲ್ಲಿಗೂ ಹೋಗಲಾಗದೆ ಬೇಸರ. ಅದೃಷ್ಟಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net