ನಿತ್ಯ ಭವಿಷ್ಯ: ಈ ರಾಶಿಯವರಿಗೆ ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ ಕಾಡಲಿದೆ- ಜಾಗೃತೆ

Nitya-Bhavishya-vvani-1-2-1-1
Published on

ಮೇಷ: ಅಧಿಕ ಖರ್ಚು. ಮಿತ್ರರೊಂದಿಗೆ ಸಂತಸದ ಕ್ಷಣ. ಪತ್ರ ಮುಖೇನ ಕುದುರುವ ವ್ಯವಹಾರ. ನೆರೆಹೊರೆಯವರಿಂದ ಅನುಕೂಲ. ಶುಭಸಂಖ್ಯೆ: 3

ವೃಷಭ: ಕಚೇರಿಯಲ್ಲಿ ಹೆಚ್ಚಿದ ಜವಾಬ್ದಾರಿ. ಯಶಸ್ವಿ ನಿರ್ವಹಣೆ. ಅವಿವಾಹಿತರಿಗೆ ಶುಭ ಸುದ್ದಿ. ನಟರಿಗೆ, ಗಾಯಕರಿಗೆ ವಿಶೇಷ ದಿನ. ಶುಭಸಂಖ್ಯೆ:9

ಮಿಥುನ: ಆರ್ಥಿಕ ಸಮಸ್ಯೆಗೆ ಮುಕ್ತಿ ದೊರೆತು ಮಾನಸಿಕ ನೆಮ್ಮದಿ. ಸ್ವಂತ ವ್ಯವಹಾರದಲ್ಲಿ ಪ್ರಗತಿ. ಮಿತ್ರರಿಂದ ಉದ್ಯೋಗ ಲಾಭ. ಶುಭಸಂಖ್ಯೆ: 6

ಕಟಕ: ಅಧಿಕ ಖರ್ಚು ತಲೆದೋರಿ ಕಳವಳ. ಉದ್ಯೋಗ ನಷ್ಟವಾಗಿ ಆತಂಕ. ನಿದ್ರಾಭಂಗ. ಕುಲದೇವರ ಭಕ್ತಿಯಿಂದ ಸ್ಮರಣೆ ಮಾಡಿ. ಶುಭಸಂಖ್ಯೆ: 6

ಸಿಂಹ: ಪ್ರಯಾಣದಲ್ಲಿ ನಿಮ್ಮ ವಸ್ತುಗಳ ಬಗ್ಗೆ ನಿಗಾ ಇರಲಿ. ತಂದೆ -ಮಕ್ಕಳಲ್ಲಿ ಮನಸ್ತಾಪ, ಸಹನೆಯಿಂದ ನಿಭಾಯಿಸಿ. ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 7

ಕನ್ಯಾ: ಅನಿರೀಕ್ಷಿತ ಸ್ನೇಹಿತರ ಭೇಟಿ. ಉದ್ಯೋಗ ಸ್ಥಳದಲ್ಲಿ ವಿನಾಕಾರಣ ಕಿರಿಕಿರಿ, ಪಾಲುದಾರಿಕೆಯಲ್ಲಿ ಅನುಕೂಲ ಒದಗಿ ಬರಲಿದೆ. ಶುಭಸಂಖ್ಯೆ: 6

ತುಲಾ: ಮಹಿಳೆಯರಿಂದ ನೋವು ಅನುಭವಿಸುವಿರಿ. ದಾಂಪತ್ಯದಲ್ಲಿ ವೈಮನಸ್ಸು. ನಿದ್ದೆಗೆಡಬೇಕಾಗುವುದು. ಭವಿಷ್ಯದ ಚಿಂತೆ ಕಾಡಲಿದೆ. ಶುಭಸಂಖ್ಯೆ: 7

ವೃಶ್ಚಿಕ: ಋಣ ರೋಗ ಬಾಧೆಗಳಿಂದ ಮುಕ್ತಿ. ಉದ್ಯೋಗದಲ್ಲಿ ಒತ್ತಡ. ಸೌಂದರ್ಯವರ್ಧಕ ವಸ್ತುಗಳ ಖರೀದಿ. ಅಧಿಕ ನಷ್ಟ ಸಾಧ್ಯತೆ. ಶುಭಸಂಖ್ಯೆ: 7

ಧನು: ಸಾಲದ ಚಿಂತೆ. ಸ್ಥಿರಾಸ್ತಿ ಅಥವಾ ವಾಹನದ ಮೇಲೆ ಸಾಲ. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ತಂದೆಯಿಂದ ಲಾಭ. ಶುಭಸಂಖ್ಯೆ: 6

ಮಕರ: ಪಾಲುದಾರಿಕೆಯಲ್ಲಿ ಮನಸ್ತಾಪ ಉಂಟಾಗಬಹುದು. ಪ್ರಯಾಣದಲ್ಲಿ ಅನಗತ್ಯ ಅಡೆತಡೆ. ಉದ್ಯೋಗ ಮತ್ತು ಸ್ಥಳ ಬದಲಾವಣೆ. ಶುಭಸಂಖ್ಯೆ: 1

ಕುಂಭ: ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ. ದಾಂಪತ್ಯದಲ್ಲಿ ಅಹಂಭಾವ ಒಳ್ಳೆಯದಲ್ಲ. ಸೋತು ಗೆಲ್ಲಿ. ಸ್ನೇಹಿತರಿಂದ ನೆರವು. ಶುಭಸಂಖ್ಯೆ: 8

ಮೀನ: ಮಕ್ಕಳ ನಡವಳಿಕೆಯಲ್ಲಿ ಸಂಶಯ. ದರ್ಪದ ಮಾತಿನಿಂದ ಶತ್ರು ಜಾಸ್ತಿಯಾಗಬಹುದು. ವಾಹನಗಳಿಂದ ತೊಂದರೆ ಸಾಧ್ಯತೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net