ನಿತ್ಯ ಭವಿಷ್ಯ: ಈ ರಾಶಿಯವರು ಗಡಿಬಿಡಿ ಮಾಡುವುದು ಬೇಡ. ಒಳ್ಳೆಯ ಕಾರ್ಯಯೋಜನೆಗಳನ್ನು ಸಾಕಾರ ರೂಪಕ್ಕೆ ತನ್ನಿ

Nitya-Bhavishya-vvani-1-2
Published on

ಮೇಷ: ಯಾವುದೋ ಸ್ವಾರ್ಥಕ್ಕಾಗಿ ಪ್ರಶಂಸಿಸುವ ಜನರೇ ನಿಮ್ಮ ಸುತ್ತಮುತ್ತಲೂ ತುಂಬಿಕೊಂಡಾರು. ಎಚ್ಚರಿಕೆ. ಶುಭಸಂಖ್ಯೆ: 7

ವೃಷಭ: ಯಾರನ್ನು ನಂಬುವುದು, ಯಾರನ್ನು ಬಿಡುವುದು ಎಂಬ ವಿಚಾರ ಕ್ಲಿಷ್ಟವೇ ಆದೀತು. ಆದರೆ ತಾಳ್ಮೆ ಇರಲಿ. ಶುಭಸಂಖ್ಯೆ: 9

ಮಿಥುನ: ಏನೋ ಒಂದು ರೀತಿಯ ತಲ್ಲಣ, ಭೀತ ಸ್ಥಿತಿಗತಿಯ ಮನಸ್ಸನ್ನು ನಿಯಂತ್ರಿಸಿ. ಭಯ ಬೇಡ, ಧೈರ್ಯ ಇರಲಿ. ಶುಭಸಂಖ್ಯೆ: 6

ಕಟಕ: ನಿಮ್ಮ ಹಿತವನ್ನು ಕಾಯುವ ಗೆಳೆಯರನ್ನು ಆದರದಿಂದ ಕಾಣುತ್ತಿರುವ ಮನೋಭಾವ ಮುಂದುವರಿಯಲಿ. ಒಳಿತಿದೆ. ಶುಭಸಂಖ್ಯೆ: 4

ಸಿಂಹ: ನಿಮ್ಮ ಬಳಿ ಆಸ್ತಿ, ಚಿನ್ನಾಭರಣಗಳು ಇರಬಹುದು. ಆದರೆ ದಿನದ ವೆಚ್ಚಕ್ಕಾಗಿ ಹಣದ ಕೊರತೆ ಎದುರಾದೀತು. ಶುಭಸಂಖ್ಯೆ: 8

ಕನ್ಯಾ: ನಿಮ್ಮದೇ ಆದ ಕಲ್ಪನಾವಿಲಾಸ ಸುಂದರವೇ ಆಗಿರುತ್ತದೆ. ಆದರೆ ವಾಸ್ತವವನ್ನು ಖಂಡಿತವಾಗಿ ಮರೆಯದಿರಿ. ಶುಭಸಂಖ್ಯೆ: 5

ತುಲಾ: ಶಕ್ತಿ ಹಾಗೂ ಧೈರ್ಯವನ್ನು ಸಂಪಾದಿಸಿಕೊಳ್ಳಲು ಕಾಲಭೈರವೇಶ್ವರನನ್ನು ಭಕ್ತಿಯಿಂದ ಆರಾಧಿಸಿ. ಕ್ಷೇಮವಿದೆ. ಶುಭಸಂಖ್ಯೆ: 3

ವೃಶ್ಚಿಕ: ವಾಮನನ ಆಕೃತಿಯಲ್ಲಿ ಬರುವ ಸಮಸ್ಯೆ ನಂತರ ನಿಮ್ಮನ್ನು ಕುಬ್ಜಗೊಳಿಸಲು ಅವಕಾಶ ನೀಡದಿರಿ. ಶುಭಸಂಖ್ಯೆ: 9

ಧನಸ್ಸು: ಗಡಿಬಿಡಿ ಮಾಡುವುದು ಬೇಡ. ಒಳ್ಳೆಯ ಕಾರ್ಯಯೋಜನೆಗಳನ್ನು ಸಾಕಾರ ರೂಪಕ್ಕೆ ತನ್ನಿ. ಹರ್ಷವಿದೆ. ಶುಭಸಂಖ್ಯೆ: 2

ಮಕರ: ಹಣ ಬರುತ್ತಿದೆ ಎಂಬುದು ಹೌದಾದರೂ ನೀರಿನಂತೆ ಹೊರಕ್ಕೆ ಹರಿದುಹೋಗುವ ಭಯವೂ ಇದೆ. ಎಚ್ಚರ. ಶುಭಸಂಖ್ಯೆ: 5

ಕುಂಭ: ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ನಾಣ್ಣುಡಿಯನ್ನು ಖಂಡಿತ ನೆನಪಿಸಿಕೊಳ್ಳುತ್ತೀರಿ. ಮೋಹಕ್ಕೆ ವಶರಾಗದಿರಿ. ಶುಭಸಂಖ್ಯೆ: 7

ಮೀನ: ಶಾರದೆಯನ್ನು ಶ್ರದ್ಧಾಭಕ್ತಿಗಳಿಂದ ಸ್ತುತಿಸಿ. ಭವಿಷ್ಯದ ಜ್ಞಾನ-ಜಾಣ್ಮೆಗಳು ಸಂವರ್ಧಿಸಲಿ ಎಂದು ಪ್ರಾರ್ಥಿಸಿಕೊಳ್ಳಿ. ಶುಭಸಂಖ್ಯೆ: 1 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net