

ಮೇಷ: ಕುಟುಂಬದವರು ಕೈ ಕೊಡುವ ಸಾಧ್ಯತೆ. ಸಹೋದರರೊಂದಿಗೆ ಮನಸ್ತಾಪ. ಇಷ್ಟ ದೇವರ ಪ್ರಾರ್ಥನೆಯಿಂದ ಕಾರ್ಯಸಿದ್ದಿ. ಶುಭಸಂಖ್ಯೆ: 9
ವೃಷಭ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ದೊರೆಯಲಿದೆ. ಅನಿರೀಕ್ಷಿತ ಲಾಭವಾಗುವ ಸಾಧ್ಯತೆ. ಸಜ್ಜನರ ಸಹವಾಸದಿಂದ ಶುಭ. ಶುಭಸಂಖ್ಯೆ: 7
ಮಿಥುನ: ಮಕ್ಕಳಿಂದ ಕಿರಿಕಿರಿ. ಕುಟುಂಬದ ಬಿಗುವಿನ ವಾತಾವರಣವನ್ನು ತಿಳಿಯಾಗಿಸಿ. ಮಕ್ಕಳ ಭವಿಷ್ಯದ ಚಿಂತೆ ಕಾಡಲಿದೆ. ಶುಭಸಂಖ್ಯೆ: 5
ಕಟಕ: ಆಪ್ತ ಗೆಳೆಯನ ಭೇಟಿ. ಮಕ್ಕಳ ಭವಿಷ್ಯದ ಚಿಂತೆ. ತಿರುಗಾಟ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಹೆಚ್ಚಿನ ಜವಾಬ್ದಾರಿ. ಶುಭಸಂಖ್ಯೆ: 4
ಸಿಂಹ: ಫಲಿತಾಂಶದ ಬಗ್ಗೆ ಯೋಚಿಸಬೇಡಿ. ನಿಮ್ಮ ಶ್ರಮ ವ್ಯರ್ಥವಾಗುವುದಿಲ್ಲ. ಹಣದ ಅಪವ್ಯಯ ಆಗಬಹುದು, ಎಚ್ಚರ. ಶುಭಸಂಖ್ಯೆ: 6
ಕನ್ಯಾ: ಸ್ನೇಹಿತನ ಭೇಟಿ. ಈ ದಿನ ನಿಮ್ಮ ಸ್ನೇಹಿತನ ಅಂತರಾತ್ಮ ತಿಳಿಯುವಿರಿ. ಹಿತಶತ್ರುಗಳಿಂದ ದೂರವಿರಿ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 1
ತುಲಾ: ಅನಗತ್ಯ ವಿಷಯಗಳಲ್ಲಿ ತಲೆ ಹಾಕಬೇಡಿ. ಮಕ್ಕಳಿಂದ ಹಣ ನಷ್ಟ. ಕಚೇರಿಯಲ್ಲಿ ಸ್ನೇಹಿತರ ಸಲಹೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 6
ವೃಶ್ಚಿಕ: ಸಮಯ ಸಾಧಕರಿಂದ ದೂರ ಇರಿ. ನಿಮ್ಮ ಪ್ರತಿಭೆ ಪ್ರಯೋಜನಕ್ಕೆ ಬರುತ್ತದೆ. ಆತ್ಮೀಯರ ವಿಯೋಗ ಸಾಧ್ಯತೆ. ಶುಭಸಂಖ್ಯೆ: 4
ಧನುಸ್ಸು: ಕಠಿಣ ಪರಿಶ್ರಮಕ್ಕೆ ಸರಿಯಾದ ಫಲ ಸಿಗುತ್ತದೆ. ಸಹೋದ್ಯೋಗಿಗಳಿಂದ ವಿಶೇಷ ಸಲಹೆ. ಕುಟುಂಬದೊಂದಿಗೆ ವಿಹಾರ. ಶುಭಸಂಖ್ಯೆ: 6
ಮಕರ: ದೂರದ ಊರಿಗೆ ಪ್ರಯಾಣ ಬೇಡ. ಆರೋಗ್ಯದಲ್ಲಿ ವ್ಯತ್ಯಾಸ. ವೈದ್ಯರ ಸಲಹೆ ಪಾಲಿಸಿ. ಹಿರಿಯರಿಂದ ವಿಶೇಷ ಸಲಹೆ. ಶುಭಸಂಖ್ಯೆ: 5
ಕುಂಭ: ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಿ. ಅನವಶ್ಯಕ ವಿವಾದಗಳಿಂದ ದೂರವಿರಿ. ಕಚೇರಿಯಲ್ಲಿ ಹೆಚ್ಚಿನ ಶ್ರಮ, ಆಯಾಸ. ಶುಭಸಂಖ್ಯೆ: 8
ಮೀನ: ಆತ್ಮವಿಶ್ವಾಸದಿಂದ ಮುಂದುವರಿಯಿರಿ. ನನೆಗುದಿಗೆ ಬಿದ್ದ ಕಾರ್ಯಕ್ಕೆ ಚಾಲನೆ. ಹೊಸ ಭೂಮಿ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 6