ಈ ರಾಶಿಯವರಿಗೆ ಇಂದು ವ್ಯವಹಾರದಲ್ಲಿ ಅನಿರೀಕ್ಷಿತ ತಿರುವುಗಳು: ನಿತ್ಯಭವಿಷ್ಯ

Nithya Bhavishya
Published on

ಮೇಷ: ತೊಂದರೆ ದೂರವಾಗಿ ನೆಮ್ಮದಿ. ಗೆಳೆಯರೊಂದಿಗೆ ಸಂತೋಷವನ್ನು ಹಂಚಿಕೊಳ್ಳಿ. ಆರ್ಥಿಕವಾಗಿ ಋಣಮುಕ್ತರಾಗಲಿದ್ದೀರಿ. ಶುಭಸಂಖ್ಯೆ: 6

ವೃಷಭ: ಹಿತಮಿತ ಮಾತಿನಿಂದ ಜನಮನವನ್ನು ಗೆಲ್ಲುತ್ತೀರಿ. ಜನಪ್ರತಿನಿಧಿಗಳಿಗೆ, ಮುಂದಾಳುಗಳಿಗೆ ಸಹನೆಯೇ ಭೂಷಣ. ನೆನಪಿರಲಿ. ಶುಭಸಂಖ್ಯೆ: 5

ಮಿಥುನ: ನಿಮ್ಮ ಬಹುದಿನದ ಕನಸಿನ ಸಾಕಾರ. ವ್ಯಾಪಾರವನ್ನು ಪ್ರಾರಂಭಿಸಲು ದೃಢ ನಿರ್ಧಾರ ತೆಗೆದುಕೊಳ್ಳಲು ಇದು ಸೂಕ್ತ ಸಮಯ. ಶುಭಸಂಖ್ಯೆ: 1

ಕಟಕ: ನಕಾರಾತ್ಮಕ ಯೋಚನೆಗಳಿಂದ ದೂರವಿದ್ದಷ್ಟು ಒಳ್ಳೆಯದು. ಹಳೇ ಯೋಜನೆಯನ್ನು ಕಾರ್ಯ ಗತಗೊಳಿಸಿ. ಸ್ನೇಹಿತನ ಭೇಟಿ. ಶುಭಸಂಖ್ಯೆ: 3

ಸಿಂಹ: ಪ್ರತಿಭೆ, ಜಾಣತನಕ್ಕೆ ವೇದಿಕೆ ಪ್ರಾಪ್ತಿ. ಮಿತಿಮೀರಿದ ಉತ್ಸಾಹದಿಂದ ತೊಂದರೆಯಾಗ ಬಹುದು. ಯೋಚಿಸಿ ಮುಂದುವರಿಯಿರಿ. ಶುಭಸಂಖ್ಯೆ: 3

ಕನ್ಯಾ: ಆತ್ಮವಿಶ್ವಾಸದಿಂದ ವರ್ತಿಸಿ, ಫಲಿತಾಂಶದ ಬಗ್ಗೆ ಚಿಂತಿಸಬೇಡಿ. ಪ್ರಭಾವಿಗಳ ಸಂಪರ್ಕ. ಮಿತಿಗಳನ್ನು ಅರಿತು ಕೆಲಸ ಮಾಡಿ. ಶುಭಸಂಖ್ಯೆ: 7

ತುಲಾ: ಉದ್ದಿಮೆಗೆ ಸಂಬಂಧಿಸಿದಂತೆ ವಿಶೇಷ ವ್ಯಕ್ತಿಯ ಭೆೇಟಿ. ಅನಿರೀಕ್ಷಿತ ತಿರುವು. ಹಿರಿಯರ ಆರೋಗ್ಯದ ಕಡೆ ಗಮನ ವಹಿಸಿ. ಶುಭಸಂಖ್ಯೆ: 6

ವೃಶ್ಚಿಕ: ಹಣಕಾಸಿನ ವಿಚಾರದಲ್ಲಿ ಹಿಡಿತ ಇರಲಿ. ಅತ್ಯಂತ ಗಮನಾರ್ಹವಾದ ಸಾಧನೆ ನಿಮ್ಮದಾಗಲಿದೆ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 9

ಧನುಸ್ಸು: ಮನೆಯವರಿಗೆ ಭರವಸೆ ಮೂಡಿಸುವಂತೆ ವರ್ತಿಸಿ. ಚಿತ್ರ ನಟರಿಗೆ ಅನಾರೋಗ್ಯದ ಸಾಧ್ಯತೆ. ಸಂಗೀತಗಾರರಿಗೆ ವಿಶೇಷ ದಿನ. ಶುಭಸಂಖ್ಯೆ: 7

ಮಕರ: ವ್ಯವಹಾರದಲ್ಲಿ ಅನಿರೀಕ್ಷಿತ ತಿರುವುಗಳು. ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಹಣಕಾಸಿನ ವಿಚಾರದಲ್ಲಿ ಅಡಚಣೆ. ಶುಭಸಂಖ್ಯೆ: 4

ಕುಂಭ: ವಿದ್ಯಾಭ್ಯಾಸಿಗಳಿಗೆ ವಿಶೇಷ ಪ್ರಗತಿ. ಯೋಜಿತ ಕಾರ್ಯಗಳಲ್ಲಿ ಆತಂಕ ದೂರ. ಹೃದಯ ಸಂಬಂಧಿ ತೊಂದರೆ ಬರಬಹುದು. ಶುಭಸಂಖ್ಯೆ: 6

ಮೀನ: ಯಾವುದೇ ವಿಷಯದ ಬಗ್ಗೆ ಯೋಚಿಸಿ ಮುಂದುವರಿಯಿರಿ. ಹೊಸ ವ್ಯಾಪಾರದಲ್ಲಿ ಧನಲಾಭ. ದಿನಾಂತ್ಯದಲ್ಲಿ ಅನಾರೋಗ್ಯ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net