ಈ ರಾಶಿಯವರಿಗೆ ಇಂದು ನಂಬಿದವರಿಂದಲೇ ಮೋಸ: ನಿತ್ಯಭವಿಷ್ಯ

Nithya Bhavishya vvani
Published on

ಮೇಷ: ಆತ್ಮೀಯರ ಭೇಟಿ. ವೃಥಾ ತಿರುಗಾಟ. ಕಾರ್ಯಸಿದ್ಧಿ ಇಲ್ಲ. ಕಚೇರಿಯಲ್ಲಿ ಪ್ರಶಂಸೆ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 4

ವೃಷಭ: ದೂರದಿಂದ ಬಂಧುಗಳ ಆಗಮನ. ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಕುಟುಂಬದಲ್ಲಿ ಮನಸ್ತಾಪ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 9

ಮಿಥುನ: ಸಹೋದರರೊಂದಿಗೆ ಮನಸ್ತಾಪ. ಕೋರ್ಟ್ ತೀರ್ಪಿನ ಪರಾಮರ್ಶೆ. ಪತ್ನಿಯಿಂದ ಸಹಕಾರ. ಮಕ್ಕಳಿಂದ ಚಿಂತೆ. ಶುಭಸಂಖ್ಯೆ: 6

ಕಟಕ: ಹಳೆ ರೋಗ ಉಲ್ಬಣಿಸಬಹುದು ಎಚ್ಚರವಿರಲಿ. ಹಿರಿಯರ ಮಾರ್ಗದರ್ಶನ. ಕುಟುಂಬದಲ್ಲಿ ಸಡಗರದ ವಾತಾವರಣ. ಶುಭಸಂಖ್ಯೆ: 4

ಸಿಂಹ: ಮಾತಿನಿಂದ ಶತ್ರುಗಳು ಸೃಷ್ಟಿಯಾಗುತ್ತಾರೆ. ನಂಬಿದವರಿಂದಲೇ ಮೋಸ. ಅನವಶ್ಯಕ ತಿರುಗಾಟ. ದಿನಾಂತ್ಯಕ್ಕೆ ಲಾಭ. ಶುಭಸಂಖ್ಯೆ: 2

ಕನ್ಯಾ: ವಿವಾಹದ ನಿರೀಕ್ಷೆಯಲ್ಲಿರುವವರಿಗೆ ಶುಭ. ಉನ್ನತ ವಿದ್ಯಾಭ್ಯಾಸಕ್ಕೆ ಸಂಕಲ್ಪ. ಸ್ನೇಹಿತನ ಆಗಮನ. ಶುಭಕಾರ್ಯ. ಶುಭಸಂಖ್ಯೆ: 3

ತುಲಾ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಮೂಗಿನ ನೇರಕ್ಕೆ ಯೋಚಿಸುವುದನ್ನು ಬಿಡಿ. ಗುರು-ಹಿರಿಯರನ್ನು ಆರಾಧಿಸಿ. ಶುಭಸಂಖ್ಯೆ: 2

ವೃಶ್ಚಿಕ:  ಅಕ್ಕತಂಗಿಯರ ಮನೆಯಲ್ಲಿ ಊಟ. ತಾಯಿಯ ಆರೋಗ್ಯದ ಬಗ್ಗೆ ನಿಗಾ ಇರಲಿ. ಕೃಷಿಕರಿಗೆ ವಿಶೇಷ ಧನಲಾಭ. ಶುಭಸಂಖ್ಯೆ: 4

ಧನುಸ್ಸು: ಆರ್ಥಿಕ ಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಕಿರಿಕಿರಿ. ಪತ್ನಿಯ ಸಮಾಧಾನ. ಶುಭಸಂಖ್ಯೆ: 6

ಮಕರ: ಹೊಸ ಉದ್ಯೋಗವನ್ನು ಪ್ರಾರಂಭ ಮಾಡಿದ್ದರಿಂದ ಧನ ನಷ್ಟ. ಮನೆ ನಿರ್ವಣದಲ್ಲಿ ನಷ್ಟ. ಭೂಮಿ ಖರೀದಿಗೆ ಸಕಾಲ. ಶುಭಸಂಖ್ಯೆ: 4

ಕುಂಭ: ಮಕ್ಕಳಿಂದ ಹೆಮ್ಮೆ. ರಾಜಕೀಯ ವ್ಯಕ್ತಿಗಳಿಗೆ ಅವಮಾನ. ತಾಳ್ಮೆಯಿರಲಿ. ಆರೋಗ್ಯದಲ್ಲಿ ಏರುಪೇರು. ಧನಲಾಭ. ಶುಭಸಂಖ್ಯೆ: 7

ಮೀನ: ಹೊಸ ವ್ಯಾಪಾರಕ್ಕೆ ಚಾಲನೆ. ವಿಶೇಷ ಅತಿಥಿಯ ಆಗಮನ. ಮಗನ ಸಾಧನೆಗೆ ತಕ್ಕ ಪ್ರತಿಫಲ ದೊರೆಯಲಿದೆ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net