ಈ ರಾಶಿಯವರಿಗಿಂದು ನೂತನ ಯೋಜನೆ ಬಗ್ಗೆ ಚರ್ಚೆ ನಡೆಸಲು ಸೂಕ್ತ ದಿನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಉದ್ಯೋಗದಲ್ಲಿ ಎದುರಾಗುವ ಸಮಸ್ಯೆಗೆ ಉತ್ತರ ಕಷ್ಟ. ಮಾರ್ಗದರ್ಶಕರ ಸಲಹೆ ಪಡೆಯಿರಿ. ಹಣಕ್ಕಿಂತ ಹೆಸರಿಗೆ ಆದ್ಯತೆ ನೀಡಿ. ಶುಭಸಂಖ್ಯೆ: 8

ವೃಷಭ: ಉಪಟಳ ಎದುರಿಸುವ ಸಾಮರ್ಥ್ಯವನ್ನು ನಿಮಗೆ ಭಗವಂತ ನೀಡಲಿದ್ದಾನೆ. ಒಳ್ಳೆಯ ಮಿತ್ರರಿಂದ ಮುಖ್ಯ ವ್ಯಕ್ತಿಯ ಪರಿಚಯ. ಶುಭಸಂಖ್ಯೆ: 4

ಮಿಥುನ: ಲೇವಾದೇವಿ ವ್ಯವಹಾರದಲ್ಲಿನ ಮಧ್ಯಸ್ಥಿಕೆಯಿಂದ ನಿಮ್ಮ ಸಂಪತ್ತು ಕ್ಷೀಣಿಸಲಿದೆ. ಬ್ಯಾಂಕ್ ನೌಕರರಿಗೆ ಸ್ಥಳ ಬದಲಾವಣೆ ಸಂಭವ. ಶುಭಸಂಖ್ಯೆ: 9

ಕಟಕ: ಕೋರ್ಟು ಕಚೇರಿಗಳ ವ್ಯವಹಾರದಲ್ಲಿ ವಿಳಂಬ ವಾದರೂ ಯಶಸ್ಸು ನಿಮ್ಮದೇ. ಕಫ ಪ್ರಕೃತಿಯವರಿಗೆ ಆರೋಗ್ಯದಲ್ಲಿ ಏರು-ಪೇರು. ಶುಭಸಂಖ್ಯೆ: 5

ಸಿಂಹ: ನೆಮ್ಮದಿಯ ಸನ್ನಿವೇಶ ಸೃಷ್ಟಿ. ಮೂರು, ನಾಲ್ಕು ಕಾರ್ಯ ಅಥವಾ ವಿಚಾರದಿಂದಾಗಿ ಹಿಡಿದ ಕೆಲಸ ಮುಂದೆ ಸಾಗದು. ಶುಭಸಂಖ್ಯೆ:1

ಕನ್ಯಾ: ವೃತ್ತಿ ತರಬೇತಿ ಪಡೆದುಕೊಳ್ಳುವ ಅವಕಾಶ. ವ್ಯಾವಹಾರಿಕವಾಗಿ ನಿಮ್ಮ ಮೃದು ಧೋರಣೆಗೆ ಕೆಲವರಿಂದ ವಿರೋಧ ಸಾಧ್ಯತೆ. ಶುಭಸಂಖ್ಯೆ: 6

ತುಲಾ: ಊರಿನ ಜನರ ಚಿಂತೆಗಳಿಗೆ ನೀವೇ ಆಶ್ರಯ ಕೊಟ್ಟಂತೆ ಕಾಣುವುದು. ನೂತನ ಯೋಜನೆ ಬಗ್ಗೆ ಚರ್ಚೆ ನಡೆಸಲು ಸೂಕ್ತ ದಿನ. ಶುಭಸಂಖ್ಯೆ: 8

ವೃಶ್ಚಿಕ: ಕನಸು ಸಾಕಾರಗೊಳ್ಳುವುದು. ನಿಮ್ಮ ಪ್ರಾಮಾಣಿಕತೆ, ಬುದ್ಧಿವಂತಿಕೆ, ಶಿಸ್ತು ಗೌರವಯುತ ಹುದ್ದೆ ಅಲಂಕರಿಸಲು ಸಹಕಾರಿ. ಶುಭಸಂಖ್ಯೆ: 3

ಧನುಸ್ಸು: ನಿಮ್ಮ ಪ್ರಿಯವಾದ ಮಾತು ಮತ್ತು ಸಕಾಲದ ಆರ್ಥಿಕ ನೆರವು ಸೋದರಿಯ ಸಂಸಾರ ನೆಲೆ ನಿಲ್ಲುವುದಕ್ಕೆ ಕಾರಣವಾಗಲಿದೆ. ಶುಭಸಂಖ್ಯೆ: 6

ಮಕರ: ಹರಾಜಿನಲ್ಲಿ ಆಸ್ತಿ ಖರೀದಿಸಿದಂತೆ ಸಂಪತ್ತು ಅಭಿವೃದ್ಧಿ. ಎಷ್ಟೇ ಕಷ್ಟ ಬಂದರೂ ಛಲ ಬಿಡದ ಮನೋಭಾವದಿಂದ ಗುರಿ ಸಾಧನೆ. ಶುಭಸಂಖ್ಯೆ: 7

ಕುಂಭ: ರಾಜಕೀಯ ವಿಚಾರದ ಚರ್ಚೆಗೆ ಗುರುವಿನ ಬಳಿ ತೆರಳುವ ಸಂಭವ. ನಿಮ್ಮ ಪೂರ್ವದ ಯೋಚನೆ ತಲೆಕೆಳಗಾಗಲಿದೆ. ಶುಭಸಂಖ್ಯೆ: 6

ಮೀನ: ಆರಕ್ಷಕ ವರ್ಗದವರಿಗೆ ಅಥವಾ ರಕ್ಷಣಾ ಕಾರ್ವಿುಕರಿಗೆ ರಾತ್ರಿ ಪಾಳಿ ಆರಂಭ. ಬಹುದಿನದ ವ್ಯಾಜ್ಯ ಬಗೆಹರಿಸಿದ್ದರಿಂದ ಪ್ರಶಂಸೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net