ಈ ರಾಶಿಯವರಿಗಿಂದು ಉತ್ತಮ ಧನಾಗಮನ, ಉದ್ಯೋಗದಲ್ಲಿ ಯಶಸ್ಸು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಹೋದರನ ಆರೋಗ್ಯದಲ್ಲಿ ಏರುಪೇರು. ಸಂಗಾತಿಯೊಂದಿಗೆ ತಾಳ್ಮೆಯಿಂದಿರಿ. ಪರಿಸ್ಥಿತಿಗಳು ಅನುಕೂಲಕರವಾಗುತ್ತವೆ. ಶುಭಸಂಖ್ಯೆ: 8

ವೃಷಭ: ಸಾಲದ ಸುಳಿಗೆ ಸಿಲುಕುವಿರಿ. ರೋಗಬಾಧೆ. ಸ್ವಯಂಕೃತ ಅಪರಾಧಗಳಿಂದ ನಷ್ಟ. ಆಕಸ್ಮಿಕ ದುರ್ಘಟನೆ. ನೆಮ್ಮದಿಗೆ ಭಂಗ. ಶುಭಸಂಖ್ಯೆ:1

ಮಿಥುನ: ಉತ್ತಮ ಧನಾಗಮನ. ಉದ್ಯೋಗದಲ್ಲಿ ಯಶಸ್ಸು ದೊರೆಯಲಿದೆ. ತಂದೆ ಮಕ್ಕಳಲ್ಲಿ ಕಿರಿಕಿರಿ ಉಂಟಾಗಬಹುದು. ಸಮಾಧಾನ. ಶುಭಸಂಖ್ಯೆ: 3

ಕಟಕ: ಸ್ವಂತ ಕೆಲಸ ಕಾರ್ಯಗಳಲ್ಲಿ ಮುನ್ನಡೆ ದೊರೆತು ಸಂತಸ. ಆದರೆ ಆಲಸ್ಯ- ಜಿಗುಪ್ಸೆಯಿಂದ ಸದವಕಾಶ ತಪ್ಪಬಹುದು, ಎಚ್ಚರ. ಶುಭಸಂಖ್ಯೆ: 1

ಸಿಂಹ: ಯಂತ್ರೋಪಕರಣ ಮಾರಾಟದಲ್ಲಿ ಉತ್ತಮ ಆದಾಯ. ಸಹೋದರರಿಂದ ಅನುಕೂಲವಿದೆ. ಪ್ರಯಾಣದಿಂದ ಧನಲಾಭ. ಶುಭಸಂಖ್ಯೆ: 7

ಕನ್ಯಾ: ಸಮಾಜದಲ್ಲಿ ಗೌರವ ಲಭ್ಯ. ಉದ್ಯೋಗಾಕಾಂಕ್ಷಿಗಳಿಗೆ ಶುಭದಾಯವಾದ ದಿನ, ದಂಪತಿಗಳಲ್ಲಿ ವೈಮನಸ್ಸು ತಲೆದೋರಬಹುದು. ಶುಭಸಂಖ್ಯೆ: 3

ತುಲಾ: ಉದ್ಯೋಗ ನಷ್ಟವಾಗುವ ಸಂಭವ. ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಆರ್ಥಿಕ ಸಂಕಷ್ಟ ಎದುರಾದೀತು. ಶುಭಸಂಖ್ಯೆ: 6

ವೃಶ್ಚಿಕ: ಮಹಿಳೆಯರಿಗೆ ಶುಭದಾಯಕ ಕ್ಷಣಗಳು. ಮಧುಮೇಹ ತಜ್ಞರಿಗೆ ಸುಸಮಯ. ವಿಡಿಯೋ ಗ್ರಾಫರ್​ಗಳಿಗೆ ಧನಲಾಭವಾಗಲಿದೆ. ಶುಭಸಂಖ್ಯೆ: 5

ಧನುಸ್ಸು: ತೀರ್ಮಾನಗಳನ್ನು ಬದಲಾಯಿಸದಿರಿ. ಹವ್ಯಾಸವಾದ ಕೆಲಸವೊಂದು ನೆರವಾಗುತ್ತದೆ. ಪತ್ನಿಗೆ ಆರೋಗ್ಯದ ತೊಂದರೆ. ಶುಭಸಂಖ್ಯೆ: 3

ಮಕರ: ದಿಟ್ಟನಿರ್ಧಾರಗಳಿಂದ ಶುಭಫಲ ದೊರೆಯಲಿದೆ. ಹಣಕ್ಕೆ ತೊಂದರೆ ಇರುವುದಿಲ್ಲ. ವಕೀಲರಿಗೆ ಉತ್ತಮ ಆದಾಯ ತರುವ ದಿನ. ಶುಭಸಂಖ್ಯೆ: 1

ಕುಂಭ: ಕೋಪ ಬಿಡಿ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಪ್ರಯತ್ನಗಳ ಅವಶ್ಯಕತೆ ತೀರ ಅಗತ್ಯವಿದೆ. ಶುಭಸಂಖ್ಯೆ: 7

ಮೀನ: ಸರ್ಕಾರಿ ನೌಕರರಿಗೆ ಪರ್ವಕಾಲ. ಮೆಕ್ಯಾನಿಕ್​ಗಳಿಗೆ ಏಕಾಗ್ರತೆಯ ಅವಶ್ಯಕತೆ ಇದೆ. ರಕ್ತದೊತ್ತಡ ಕಾಡಬಹುದು, ಹುಷಾರು. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net