

ಮೇಷ: ನಿರೀಕ್ಷೆಗಳು ಹುಸಿಯಾಗಿ ನಿರಾಸೆಯಾಗಬಹುದು. ಕೆಲಸದ ಕ್ಷೇತ್ರದಲ್ಲಿ ಒತ್ತಡ ಸಾಧ್ಯತೆ. ಗುರುವನ್ನು ಆರಾಧಿಸಿ. ಶುಭಸಂಖ್ಯೆ: 2 ವೃಷಭ: ಜನ್ಮದ ರಾಹು ಆರೋಗ್ಯ ಸಮಸ್ಯೆಗೆ ಕಾರಣನಾಗುತ್ತಾನೆ. ಮಾನಸಿಕ ತಳಮಳ. ಅಶಾಂತಿ. ದೇವಿಯನ್ನು ಪೂಜಿಸಿ. ಶುಭಸಂಖ್ಯೆ: 8 ಮಿಥುನ: ಮಕ್ಕಳಿಂದ ಸಿಹಿ ಸುದ್ದಿ. ಹಲವು ದಿನಗಳಿಂದ ಬಾಕಿ ಇದ್ದ ಭೂ ವಿವಾದ ಸುಖಾಂತ್ಯವಾಗಿ ಸಮಾಧಾನ. ಶುಭಸಂಖ್ಯೆ: 3 ಕಟಕ: ಬಂಧುಗಳ ಆಗಮನ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ತಾಯಿಯ ಸಲಹೆ ತೆಗೆದುಕೊಳ್ಳಲು ಮರೆಯಬೇಡಿ. ಶುಭಸಂಖ್ಯೆ: 4 ಸಿಂಹ: ನಿಮ್ಮ ದುಶ್ಚಟಗಳಿಂದ ಮನೆಯಲ್ಲಿ ಅಸಮಾಧಾನ. ಸಹೋದ್ಯೋಗಿಗಳಿಂದ ಸಾಂತ್ವನ. ಸ್ಕಂದನನ್ನು ಪೂಜಿಸಿ. ಶುಭಸಂಖ್ಯೆ: 9 ಕನ್ಯಾ: ನಿಮ್ಮ ಧೋರಣೆ ಅವಮಾನಕ್ಕೆ ಕಾರಣ ಆಗಬಹುದು. ಸಮಾಧಾನದಿಂದ ಇರಿ. ಆರೋಗ್ಯದ ಕಡೆ ಗಮನ ಇರಲಿ. ಶುಭಸಂಖ್ಯೆ: 6 ತುಲಾ: ಸ್ನೇಹಿತರ ಸಹಕಾರದಿಂದಾಗಿ ಭವಿಷ್ಯದ ಉನ್ನತಿಯ ಸಾಕಾರ. ಸಂಜೆಯ ಹೊತ್ತಿಗೆ ಸ್ವಲ್ಪ ನಿರಾಸೆ ಕಾಡುತ್ತದೆ. ಶುಭಸಂಖ್ಯೆ: 3 ವೃಶ್ಚಿಕ: ಪರಿಶ್ರಮಕ್ಕೆ ತಕ್ಕ ಫಲವಿಲ್ಲ. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸಕ್ಕೆ ಮರು ಚಾಲನೆ. ಗಣೇಶನನ್ನು ಪ್ರಾರ್ಥಿಸಿ. ಶುಭಸಂಖ್ಯೆ: 7 ಧನುಸ್ಸು: ಸಾಮಾಜಿಕ ಜೀವನದಲ್ಲಿ ಸಹನೆ ಇರಲಿ. ದುಡುಕು ಸ್ವಭಾವ ನಿಮ್ಮ ಅವನತಿಗೆ ಕಾರಣವಾಗಬಹುದು. ಹುಷಾರು. ಶುಭಸಂಖ್ಯೆ: 1 ಮಕರ: ಉದ್ಯೋಗ ಅರಸುವವರಿಗೆ ಕಾರ್ಯ ಸಿದ್ದಿ. ವ್ಯಾಪಾರದಲ್ಲಿ ನಷ್ಟ. ದಿನದ ಕೊನೆಯಲ್ಲಿ ಶುಭಸುದ್ದಿ ಬರುವುದು. ಶುಭಸಂಖ್ಯೆ: 2 ಕುಂಭ: ಸಂಬಂಧವಿಲ್ಲದ ವಿಷಯಕ್ಕೆ ತಲೆ ಕೆಡಿಸಿಕೊಳ್ಳದೇ ಇದ್ದರೆ ಒಳ್ಳೆಯದು. ಅನವಶ್ಯಕ ದುಂದುವೆಚ್ಚ. ಈಶ್ವರನನ್ನು ಪೂಜಿಸಿ. ಶುಭಸಂಖ್ಯೆ: 6 ಮೀನ: ಮಕ್ಕಳ ಭವಿಷ್ಯದ ಚಿಂತೆ ಕಾಡಬಹುದು. ದೃಡ ನಿರ್ಧಾರ ತೆಗೆದುಕೊಳ್ಳಿ. ದಿನಾಂತ್ಯದಲ್ಲಿ ಸುಖ ಭೋಜನ. ಶುಭಸಂಖ್ಯೆ: 4
| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ