

ಮೇಷ: ಕುಟುಂಬದಲ್ಲಿ ಅಹಿತಕರ ವಾತಾವರಣ. ಸಮಾಧಾನ ಅತಿ ಮುಖ್ಯ. ಆರ್ಥಿಕ ಸ್ಥಿತಿಯಲ್ಲಿ ಏರುಪೇರು. ಅಲ್ಪ ಲಾಭವಷ್ಟೇ ಬರಲಿದೆ. ಶುಭಸಂಖ್ಯೆ: 1
ವೃಷಭ: ಕೆಲಸ ಕಾರ್ಯಗಳಲ್ಲಿ ಮಂದಗತಿ. ಮನೆಯ ಬಗ್ಗೆ ಹೆಚ್ಚು ಗಮನ ಹರಿಸುವಿರಿ. ವಿನಾಕಾರಣ ನಿಷ್ಠುರ ಮಾಡಿಕೊಳ್ಳಬೇಕಾಗುವುದು. ಶುಭಸಂಖ್ಯೆ: 5
ಮಿಥುನ: ಸಾಮಾಜಿಕ ಸೇವೆಗಳಲ್ಲಿ ಸಕ್ರಿಯರಾಗುವಿರಿ. ಕುಟುಂಬದಲ್ಲಿ ಸಂತೋಷವಿರುತ್ತದೆ. ಆಸ್ತಿ ವಿವಾದದಲ್ಲಿ ಜಯ ನಿಮ್ಮ ಪಾಲಿಗಿದೆ. ಶುಭಸಂಖ್ಯೆ: 2
ಕಟಕ: ಗೃಹನಿರ್ಮಾಣದಲ್ಲಿ ಯಶಸ್ಸು ದೊರೆಯುವುದು. ಮಿತ್ರರಿಂದ ಸಹಕಾರ ಸಿಗಲಿದೆ. ಮಕ್ಕಳಿಂದ ಶುಭವಾರ್ತೆ ಬಂದು ಸಂತಸ. ಶುಭಸಂಖ್ಯೆ: 8
ಸಿಂಹ: ಗುತ್ತಿಗೆ ಕೆಲಸಗಾರರಿಗೆ ಹೆಚ್ಚು ಅನುಕೂಲ. ಅವಕಾಶಗಳನ್ನ ಸದುಪಯೋಗ ಮಾಡಿಕೊಳ್ಳುವಿರಿ. ಆರೋಗ್ಯ ಸಮಸ್ಯೆ ಸಾಧ್ಯತೆ. ಶುಭಸಂಖ್ಯೆ: 3
ಕನ್ಯಾ: ಮಕ್ಕಳಿಂದ ತೃಪ್ತಿ. ಅನಿರೀಕ್ಷಿತ ಖರ್ಚು ಉಂಟಾಗಲಿದೆ. ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದು ಕ್ಷೇಮ. ಶುಭಸಂಖ್ಯೆ: 4
ತುಲಾ: ಉದ್ಯೋಗ ಪ್ರಾಪ್ತಿ. ನ್ಯಾಯಾಲಯದ ವ್ಯವಹಾರ ಗಳಲ್ಲಿ ಗೆಲುವು ನಿಮ್ಮ ಕಡೆಗಿದೆ. ದಾಂಪತ್ಯದಲ್ಲಿ ಕಿರಿಕಿರಿ. ಶಾಂತಚಿತ್ತರಾಗಿರಿ. ಶುಭಸಂಖ್ಯೆ: 6
ವೃಶ್ಚಿಕ: ಕೋರ್ಟ್ ಕೆಲಸಗಳಲ್ಲಿ ಚಿಂತೆಯಾಗುವುದು. ವಿದ್ಯಾಭ್ಯಾಸದಲ್ಲಿ ಮುನ್ನಡೆ ಸಾಧಿಸುವಿರಿ. ಇಷ್ಟ ದೇವರನ್ನು ನಂಬಿ ಮುನ್ನಡೆಯಿರಿ. ಶುಭಸಂಖ್ಯೆ: 1
ಧನುಸ್ಸು: ಮಿತ್ರರಿಂದ ಸಹಾಯ ದೊರೆತು ಕೆಲಸ ಕಾರ್ಯಗಳು ಯಶಸ್ವಿಯಾಗುವವು. ಅಧಿಕಾರ-ಪ್ರಾಪ್ತಿ. ಕುಲದೇವರಿಗೆ ಅರ್ಚನೆ ಮಾಡಿಸಿ. ಶುಭಸಂಖ್ಯೆ: 8
ಮಕರ: ಮಂಗಳ ಕಾರ್ಯಗಳಿಂದ ಶುಭ. ವಕೀಲರಿಗೆ ಯಶಸ್ಸು ದೊರೆಯಲಿದೆ. ಉದ್ಯೋಗಿಗಳಿಗೆ ಅಭಿವೃದ್ಧಿ. ಶ್ರದ್ಧೆಯಿಂದ ಕೆಲಸ ಮಾಡಿ. ಶುಭಸಂಖ್ಯೆ: 2
ಕುಂಭ: ಆತ್ಮೀಯರಿಂದ ಸಕಾಲದಲ್ಲಿ ಸಹಾಯ ದೊರೆತು ಸಮಾಧಾನ. ಮಹಿಳೆಯರಿಗೆ ಲಾಭದ ದಿನ. ಸ್ಥಿರಾಸ್ತಿ ಖರೀದಿ ಮಾಡುವಿರಿ. ಶುಭಸಂಖ್ಯೆ: 5
ಮೀನ: ಸಮಸ್ಯೆಗಳಿಗೆ ಅಂತ್ಯ ಕಾಣಬಹುದು. ಉದ್ದೇಶಿತ ಯೋಜನೆಗೆ ಅಗತ್ಯ ಗಮನ ಹರಿಸುವುದು ಅನಿವಾರ್ಯ. ಆರ್ಥಿಕ ಲಾಭ. ಶುಭಸಂಖ್ಯೆ: 9