ಈ ರಾಶಿಯವರ ಪ್ರಯತ್ನಕ್ಕೆ ಇಂದು ಸೂಕ್ತ ಫಲ ಸಿಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಹೋದ್ಯೋಗಿಗಳೊಂದಿಗೆ ಮನಸ್ತಾಪ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಭವಿಷ್ಯದ ಚಿಂತೆ. ಸಾಲಗಾರರಿಂದ ಕಿರುಕುಳ. ಶುಭಸಂಖ್ಯೆ: 1

ವೃಷಭ: ಕಷ್ಟ ಪಟ್ಟರೂ ಪ್ರತಿಫಲ ಶೂನ್ಯ. ನಿವೇಶನ ಖರೀದಿ ಸಾಧ್ಯತೆಯಿದೆೆ. ಸಗಟು ವ್ಯಾಪಾರಿಗಳಿಗೆ ಧನ ನಷ್ಟವಾಗಿ ಮಾನಸಿಕ ಬೇಸರ. ಶುಭಸಂಖ್ಯೆ: 8

ಮಿಥುನ: ಸಾರ್ವಜನಿಕ ಕ್ಷೇತ್ರದಲ್ಲಿ ಅವಮಾನ ಎದುರಿಸಬೇಕಾದೀತು. ಮಾಡದ ತಪ್ಪಿಗೆ ಮನಸ್ತಾಪ ಸಾಧ್ಯತೆ. ಸಂಗಾತಿಯೊಂದಿಗೆ ವಿರಸ. ಶುಭಸಂಖ್ಯೆ: 5

ಕಟಕ: ಅಪರಿಚಿತರಿಂದ ಮೋಸ. ವಿದೇಶ ಪ್ರಯಾಣ ಸಾಧ್ಯತೆ. ಕೃಷಿ ಉಪಕರಣಗಳ ಖರೀದಿ. ಅನಾರೋಗ್ಯ ಸಮಸ್ಯೆ ಕಾಡಬಹುದು. ಶುಭಸಂಖ್ಯೆ: 4

ಸಿಂಹ: ಹಣಕಾಸಿನ ಮುಗ್ಗಟ್ಟು. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ಅನಿರೀಕ್ಷಿತ ಅತಿಥಿಯ ಆಗಮನ. ಸಮಾಧಾನ. ಮಕ್ಕಳಿಂದ ಚಿಂತೆ. ಶುಭಸಂಖ್ಯೆ: 6

ಕನ್ಯಾ: ಹಿರಿಯರ ಸೂಚನೆಗಳನ್ನು ಅನುಸರಿಸಿ. ಕಚೇರಿಯಲ್ಲಿ ಹೆಚ್ಚಿದ ಒತ್ತಡ. ಮಹಿಳೆಯರಿಗೆ ಆಭರಣ ಲಾಭ. ಅನಾವಶ್ಯಕ ಖರ್ಚು. ಶುಭಸಂಖ್ಯೆ: 2

ತುಲಾ: ರಿಯಲ್ ಎಸ್ಟೇಟ್ ಉದ್ದಿಮೆದಾರರಿಗೆ ನಷ್ಟ. ಸ್ವಗ್ರಾಮಕ್ಕೆ ಪ್ರಯಾಣ. ಉನ್ನತ ವಿದ್ಯಾಭ್ಯಾಸದ ಕನಸಿನ ಸಾಕಾರ. ಸಾಲ ಸಮಸ್ಯೆ. ಶುಭಸಂಖ್ಯೆ: 4

ವೃಶ್ಚಿಕ: ಉದ್ಯೋಗಸ್ಥ ಮಹಿಳೆಯರಿಗೆ ಅನಿರೀಕ್ಷಿತ ಬದಲಾವಣೆ. ಸಾರ್ವಜನಿಕವಾಗಿ ತಾಳ್ಮೆ ಇರಲಿ. ಮಕ್ಕಳ ಬೇಡಿಕೆ ನಿರ್ಲಕ್ಷಿಸಬೇಡಿ. ಶುಭಸಂಖ್ಯೆ: 7

ಧನುಸ್ಸು: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ಮನೆಯಲ್ಲಿ ಸಡಗರ. ಬಂಧು ವರ್ಗದಲ್ಲಿ ಕೀರ್ತಿ. ಶತ್ರುಗಳಿಂದ ನಷ್ಟ. ಶುಭಸಂಖ್ಯೆ: 6

ಮಕರ: ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ. ನ್ಯಾಯಾಲಯದ ವಿವಾದ ವಿಳಂಬ. ಸಾಲಗಾರರಿಂದ ತೊಂದರೆ. ದಿನದ ಅಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 1

ಕುಂಭ: ನಿಮ್ಮ ಪ್ರಯತ್ನಕ್ಕೆ ಸೂಕ್ತ ಫಲ ಸಿಗಲಿದೆ. ಕೃಷಿಕರಿಗೆ ನಷ್ಟ ಉಂಟಾಗಬಹುದು. ವಿದೇಶ ಪ್ರವಾಸಕ್ಕೆ ತೆರಳುವ ಸಾಧ್ಯತೆ. ಶುಭಸಂಖ್ಯೆ: 5

ಮೀನ: ಮಹಿಳಾ ಉದ್ದಿಮೆದಾರರಿಗೆ ಬದಲಾವಣೆ. ಅಪರಿಚಿತರಿಂದ ಮೋಸ ಹೋಗುವ ಸಾಧ್ಯತೆ. ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net