ಈ ರಾಶಿಯವರಿಗೆ ಇಂದು ಆರೋಗ್ಯ ಮತ್ತು ಧನವ್ಯಯದಲ್ಲಿ ಗಮನವಿರಲಿ: ನಿತ್ಯಭವಿಷ್ಯ

Nitya-Bhavishya-vvani-1-2-1-1
Published on

ಮೇಷ: ಆತುರದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ. ಸಂಸಾರ ನಿರ್ವಹಣೆಗಾಗಿ ಖರ್ಚು. ಮನೆಯವರ ಪರಿಶ್ರಮ ಸಾರ್ಥಕ. ಶುಭಸಂಖ್ಯೆ: 9

ವೃಷಭ: ಹಣಕಾಸಿನ ಸ್ಥಿತಿಯು ನಿಯಂತ್ರಣ ತಪ್ಪಿ ಹೋಗುವುದು. ಕೆಲಸ ಕಾರ್ಯಗಳಿಗೆ ಬೇಕಾದ ಸೂಕ್ತ ವ್ಯಕ್ತಿಯನ್ನು ಹುಡುಕುವಲ್ಲಿ ವಿಫಲ. ಶುಭಸಂಖ್ಯೆ: 2

ಮಿಥುನ: ಸಹೋದರರಲ್ಲಿ ಸಂಬಂಧಗಳು ಗಟ್ಟಿಗೊಂಡು ಸುರಕ್ಷತೆಯ ಭಾವ ಉಂಟಾಗುವುದು. ಉದ್ಯಮಿಗಳಿಗೆ ಅನುಕೂಲಕರ ಸನ್ನಿವೇಶ. ಶುಭಸಂಖ್ಯೆ: 9

ಕಟಕ: ರಫ್ತು ವ್ಯಾಪಾರಗಳಲ್ಲಿ ಹೇರಳ ಲಾಭ. ತಿಳಿಮನಸ್ಸಿನಿಂದ ಸಮಸ್ಯೆಗಳಿಗೆ ಉತ್ತರ ಸಿಗುವುದು. ಅನಿರೀಕ್ಷಿತ ಪ್ರಯಾಣ. ಶುಭಸಂಖ್ಯೆ: 7

ಸಿಂಹ: ಆತುರದ ನಿರ್ಧಾರಗಳಿಂದ ಪಶ್ಚಾತ್ತಾಪವಾದೀತು. ರಾಜಕೀಯ ಕಾರ್ಯಕರ್ತರಿಗೆ ಮುನ್ನಡೆಯುವ ಅವಕಾಶ ಕೈ ತಪ್ಪೀತು. ಶುಭಸಂಖ್ಯೆ:5

ಕನ್ಯಾ: ಮರಳಿ ಯತ್ನ ಮಾಡುವುದರಿಂದ ಜಯಶಾಲಿ ಯಾಗಬಹುದು. ಹೆಂಡತಿಯ ಆರೋಗ್ಯದಲ್ಲಿ ವ್ಯತ್ಯಾಸಗಳಾಗಬಹುದು. ಶುಭಸಂಖ್ಯೆ: 8

ತುಲಾ: ಕೊಟ್ಟ ಜವಾಬ್ದಾರಿಯನ್ನು ಸುಲಭವಾಗಿ ಪೂರೈಸುವಿರಿ. ತಂದೆಯ ಅಭಿಪ್ರಾಯಗಳಿಗೆ ಬೆಲೆ ಕೊಡಿ. ಆಂಜನೇಯನ ಸೇವೆ ಮಾಡಿ. ಶುಭಸಂಖ್ಯೆ:3

ವೃಶ್ಚಿಕ: ನಿಮಗೆ ಹೂಡಿಕೆಯಿಂದ ಅಧಿಕ ಲಾಭ. ಹವ್ಯಾಸಿ ಛಾಯಾಗ್ರಾಹಕರಿಗೆ ಪ್ರಶಸ್ತಿ . ವೈದ್ಯರು ನೀಡಿದ ಸಲಹೆಯನ್ನು ತಪ್ಪದೆ ಪಾಲಿಸಿ. ಶುಭಸಂಖ್ಯೆ: 9

ಧನುಸ್ಸು: ಅಪರಿಚಿತರಿಂದ ಸಹಾಯ. ಮಹಿಳೆಯರಿಗೆ ಋಣಾತ್ಮಕ ಚಿಂತನೆಯಿಂದ ಆರೋಗ್ಯ ಹಾಳು. ಖಾಸಗಿ ಉದ್ಯೋಗಿಗಳಿಗೆ ಬಡ್ತಿ. ಶುಭಸಂಖ್ಯೆ:3

ಮಕರ: ಅನಿರೀಕ್ಷಿತ ಸುದ್ದಿ. ರಾಸಾಯನಿಕ ಔಷಧಿಗಳ ವ್ಯಾಪಾರಿಗಳಿಗೆ ಲಾಭ. ಚಿನ್ನಾಭರಣ ವ್ಯಾಪಾರಿಗಳಿಗೆ ಸಾಧಾರಣ ಲಾಭ. ಶುಭಸಂಖ್ಯೆ: 4

ಕುಂಭ: ವೃತ್ತಿಯಲ್ಲಿ ಅನುಭವ ಹೊಂದಿದವರಿಂದ ಬೈಗುಳ. ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಅಧ್ಯಯನ ಅಗತ್ಯ. ಶುಭಸಂಖ್ಯೆ: 5

ಮೀನ: ರಸಗೊಬ್ಬರ, ಕೀಟನಾಶಕ ವ್ಯಾಪಾರ ಮಾಡುವವರಿಗೆ ಲಾಭ. ಆರೋಗ್ಯ ಮತ್ತು ಧನವ್ಯಯದಲ್ಲಿ ಗಮನವಿರಲಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net