

ಮೇಷ: ನಿಮ್ಮ ಶಾಂತಪ್ರವೃತ್ತಿಯನ್ನು ತೊರೆಯದಿರಿ. ನಿಮ್ಮದಾದ ಪ್ರಶಾಂತತೆಯಿಂದಲೇ ವಿಶೇಷ ಸಿದ್ಧಿಗೆ ದಾರಿ ದೊರೆಯಲಿದೆ. ಶುಭಸಂಖ್ಯೆ: 1
ವೃಷಭ: ಮೌನವಾಗಿದ್ದು ಬೇರೆಯವರ ಮಾತುಗಳನ್ನು ಕೇಳಿಸಿಕೊಳ್ಳಿ. ಚರ್ಚೆಗಳಿಗೆ ಮುಂದಾಗದೆ ಇರುವುದರಿಂದ ಲಾಭವಿದೆ. ಶುಭಸಂಖ್ಯೆ: 3
ಕಟಕ: ಪಾಲುದಾರಿಕೆ ವ್ಯವಹಾರಗಳಲ್ಲಿ ಮಾತಿನ ಮೂಲಕವೇ ನಿಮ್ಮ ನೈಜ ಚಾತುರ್ಯ ಸಾಕಾರ ಪಡೆಯಬೇಕಿದೆ. ಪ್ರಯತ್ನಿಸಿ. ಶುಭಸಂಖ್ಯೆ: 2
ಮಿಥುನ: ರಾಜಕಾರಣಿಗಳಿಗೆ ಸಮ್ಮಿಶ್ರ ಫಲಗಳಿವೆ. ಕೆಳಗೆ ಬಿದ್ದರೂ ಜಿಗಿದೇಳುವ ಚೆಂಡಿನ ಗುಣ ನಿಮಗೆ ಆದರ್ಶವಾಗಲಿ. ಶುಭಸಂಖ್ಯೆ: 4
ಸಿಂಹ: ನಿಮ್ಮನ್ನು ಟೀಕಿಸುವವರನ್ನು ನಿಯಂತ್ರಿಸದಿರಿ. ನಿಮ್ಮ ಕಾರ್ಯಸಾಧನೆಯಿಂದಲೇ ಸಿದ್ಧಿಯ ಸ್ವಪ್ನವು ಸಾಕಾರವಾಗಲಿದೆ. ಶುಭಸಂಖ್ಯೆ: 6
ಕನ್ಯಾ: ಇಷ್ಟಾರ್ಥ ಸಿದ್ಧಿಗಳಿಗೆ ಯಾವುದೇ ರೀತಿಯ ಅಡೆತಡೆಗಳು ಬರದಿರಲು ಭಕ್ತಿಯಿಂದ ಮಹಾವಿಷ್ಣುವನ್ನು ಪ್ರಾರ್ಥಿಸಿ. ಶುಭಸಂಖ್ಯೆ: 5
ತುಲಾ: ಹಳೆಯ ಮಿತ್ರರೊಬ್ಬರು ಹೊಸ ವಿಚಾರ ತಿಳಿಸಲಿದ್ದಾರೆ. ನಿಮ್ಮ ವಹಿವಾಟಿನ ಲಾಭಕ್ಕೆ ಇದು ದಾರಿ ತೋರಿಸಲಿದೆ. ಶುಭಸಂಖ್ಯೆ: 7
ವೃಶ್ಚಿಕ: ಹಣದ ವಿಚಾರದಲ್ಲಿ ಅಲಕ್ಷ್ಯ ಮಾಡಬೇಡಿ. ಈ ಬಗ್ಗೆ ಹೆಚ್ಚಿನ ಜಾಗೃತಿಯನ್ನು ವಹಿಸಲು ಪ್ರಯತ್ನ ಮಾಡಿದರೆ ಉತ್ತಮ. ಶುಭಸಂಖ್ಯೆ: 9
ಧನುಸ್ಸು: ಯಾವುದೋ ನೆಪವನ್ನೊಡ್ಡಿ ವೈರವನ್ನು ಸಾಧಿಸಬೇಡಿ. ಮೈತ್ರಿಯ ಹಸ್ತವನ್ನು ಚಾಚಿದರೆ ನಿಮಗೇ ಮುಂದೆ ಒಳಿತಾಗಲಿದೆ. ಶುಭಸಂಖ್ಯೆ: 8
ಕುಂಭ: ಮಾತಿನಲ್ಲಿ ಮನೆ ಕಟ್ಟುವವರನ್ನು ನಂಬಿ ಮೋಸಹೋಗುವಂಥ ಸಂದರ್ಭ ಬಂದೀತು. ಅದರಿಂದ ತಪ್ಪಿಸಿಕೊಳ್ಳಿ. ಶುಭಸಂಖ್ಯೆ: 3
ಮಕರ: ಸಂಗಾತಿಯ ಜತೆ ವಾದಿಸಲು ಹೋಗದಿರುವ ಸಂಕಲ್ಪವನ್ನು ಮಾಡಿಕೊಂಡರೆ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಲಿವೆ. ಶುಭಸಂಖ್ಯೆ: 2
ಮೀನ: ನಿಮ್ಮ ಸಮೃದ್ಧವಾದ ಸುದೀರ್ಘ ಅನುಭವಗಳೇ ಕೆಲಸದ ಸಂದರ್ಭದಲ್ಲಿ ಸಂಪನ್ನತೆಯನ್ನು ಒದಗಿಸಲು ನೆರವು ನೀಡಲಿವೆ. ಶುಭಸಂಖ್ಯೆ: 1