ಮೇಷ: ಸರಳ ವ್ಯಕ್ತಿಯಾದ ನಿಮಗೆ ಕೆಲವರು ಮೋಸ ಮಾಡುವ ಸಿದ್ಧತೆಯಲ್ಲಿದ್ದಾರೆ. ಬೋಳೆತನ ಪ್ರದರ್ಶಿಸದಿರಿ. ಶುಭಸಂಖ್ಯೆ: 9
ವೃಷಭ: ಒಂದೇ ದಿನದಲ್ಲಿ ಯಾವ ಬದಲಾವಣೆಯೂ ಆಗದು. ಆದಾರೂ ಬೆಳಗಿನ ಹೊತ್ತು ಇದ್ದ ಭಯ ಸಂಜೆ ಕರಗಲಿದೆ. ಶುಭಸಂಖ್ಯೆ: 7
ಮಿಥುನ: ಕೈಯಲ್ಲಿ ಯಥೇಚ್ಛ ಹಣ ಇದೆ ಎಂದು ಹಳೆಯ ದಾರಿ ಹಿಡಿಯಬೇಡಿ. ಉತ್ತಮ ಸ್ನೇಹಿತರ ಸಹವಾಸ ಮಾಡಿ. ಶುಭಸಂಖ್ಯೆ: 5
ಕಟಕ: ಮನಸ್ಸಿನ ದುಗುಡ ಇದ್ದದ್ದೇ. ಆದರೆ ಇಂದು ಆತ್ಮೀಯರ ಸಹಕಾರದಿಂದ ಅಂಥ ಕಷ್ಟದಿಂದ ಪಾರಾಗುವಿರಿ. ಶುಭಸಂಖ್ಯೆ: 3
ಸಿಂಹ: ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮಾಡುವಿರಿ. ವಿರೋಧಿಗಳೂ ನಿಮ್ಮ ಸ್ನೇಹ ಸಂಪಾದಿಸಲು ಹಾತೊರೆಯುತ್ತಾರೆ. ಶುಭಸಂಖ್ಯೆ: 1
ಕನ್ಯಾ: ಹಿರಿಯರ ಕಿವಿಮಾತುಗಳನ್ನು ಕೇಳಿ. ಅವರ ಮಾರ್ಗದರ್ಶನದಂತೆ ನಡೆದಲ್ಲಿ ಸಮಾಜದ ಗೌರವಕ್ಕೆ ಪಾತ್ರರಾಗುವಿರಿ. ಶುಭಸಂಖ್ಯೆ: 2
ತುಲಾ: ಪ್ರಯತ್ನಿಸಿದ ಕಾರ್ಯಗಳಲ್ಲಿ ವಿಘ್ನಗಳು ಎದುರಾಗಬಹುದು. ದುಷ್ಟರಿಂದ ತೊಂದರೆ. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 4
ವೃಶ್ಚಿಕ: ಹಳೆಯ ಆದರ್ಶಗಳು ಈ ಬದಲಾದ ಕಾಲದಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ಕಾಲಕ್ಕೆ ತಕ್ಕಂತೆ ನಡೆಯಿರಿ. ಶುಭಸಂಖ್ಯೆ: 6
ಧನಸ್ಸು: ನಿಮ್ಮ ಕೆಲಸವನ್ನು ಇತರರ ವೃತ್ತಿಗೆ ಹೋಲಿಸಿ ಕೀಳರಿಮೆ ಬೆಳೆಸಿಕೊಳ್ಳದಿರಿ. ನಿಮಗೆ ದೇವರ ಕೃಪೆಯಿದೆ. ಶುಭಸಂಖ್ಯೆ: 8
ಮಕರ: ಹಿಂದೆ ದೂರವಾಗಿದ್ದ ಬಂಧುಗಳು ನಿಮ್ಮ ನಂಟು ಬೆಳೆಸಲು ಬರುವರು. ಜೀವನದಲ್ಲಿ ಉತ್ಸಾಹ ಮೂಡುವುದು. ಶುಭಸಂಖ್ಯೆ: 7
ಕುಂಭ: ಬಹು ನಿರೀಕ್ಷಿತವಾದ ಆಶಾದಾಯಕ ವಾರ್ತೆಯನ್ನು ಕೇಳಲಿದ್ದೀರಿ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಶುಭಸಂಖ್ಯೆ: 9
ಮೀನ: ನಿಮಗೆ ಇಷ್ಟವಿಲ್ಲದಿದ್ದರೆ ಪಾಲುದಾರಿಕೆ ವ್ಯವಹಾರದಿಂದ ಹೊರಬನ್ನಿ. ಶ್ರದ್ಧೆಯಿಂದ ವಿಷ್ಣು ಸಹಸ್ರನಾಮ ಪಠಿಸಿ. ಶುಭಸಂಖ್ಯೆ: 1