ನಿತ್ಯ ಭವಿಷ್ಯ: ಈ ರಾಶಿಯವರ ಬಳಿ ಪರಿಚಿತರು ಹಣ ಕೇಳುವ ಸಾಧ್ಯತೆ ಇದೆ...

Nitya-Bhavishya-vvani-1-2-1
Published on

ಮೇಷ: ಮಕ್ಕಳ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅವಶ್ಯ. ಭೂಸಂಬಂಧಿ ವ್ಯವಹಾರಗಳ ಸಂದರ್ಭದಲ್ಲಿ ಎಚ್ಚರ ಇರಲಿ. ಅದೃಷ್ಟಸಂಖ್ಯೆ: 2

ವೃಷಭ: ಪರಿಚಿತರು ಹಣದ ಸಹಾಯ ಕೇಳುವ ಸಾಧ್ಯತೆ ಇದೆ. ನಿಜವಾಗಿಯೂ ಆವಶ್ಯಕತೆ ಇದೆಯೇ ಎಂದು ಪರೀಕ್ಷಿಸಿ. ಅದೃಷ್ಟಸಂಖ್ಯೆ: 4

ಮಿಥುನ: ಆಪ್ತರಿಗೆ ಕೆಲಸ ಕೊಡಿಸಲು ಯತ್ನಿಸುವಿರಿ. ರಜೆ ಇದ್ದರೂ ಸಂಭ್ರಮಿಸುವ ಅವಕಾಶಗಳು ಮಾತ್ರ ಕಡಿಮೆ ಇರುತ್ತದೆ. ಅದೃಷ್ಟಸಂಖ್ಯೆ: 6

ಕಟಕ: ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಲು ಹುಡುಕಾಡುವಿರಿ. ಜಿಪುಣಾಗ್ರೇಸರ ಎಂಬ ಬಿರುದೂ ಸಿಗಬಹುದು. ಅದೃಷ್ಟಸಂಖ್ಯೆ: 5

ಸಿಂಹ: ಕೈಲಾಗದವನು ಮೈ ಪರಚಿಕೊಂಡ ಗಾದೆ ನೆನಪಿಸಿಕೊಳ್ಳಿ. ಹಿಂದಿನ ಅಧಿಕಾರದ ಗತ್ತನ್ನು ಮರೆತರೆ ಸಮಸ್ಯೆ ಇಲ್ಲ. ಅದೃಷ್ಟಸಂಖ್ಯೆ: 7

ಕನ್ಯಾ: ಯಾರನ್ನು ದೂರವಿಟ್ಟಿದ್ದರೋ ಅವರೇ ಅನಿವಾರ್ಯವಾಗಬಹುದು. ಅಲಕ್ಷಿಸುವ ಮುನ್ನ ಒಮ್ಮೆ ಯೋಚಿಸಿ. ಅದೃಷ್ಟಸಂಖ್ಯೆ: 9

ತುಲಾ: ಇಬ್ಬಗೆಯ ಅಭಿಪ್ರಾಯಗಳು ಇಕ್ಕಟ್ಟಿಗೆ ಸಿಲುಕಿಸಬಹುದು. ಸ್ವಂತ ಬುದ್ಧಿಗೆ ಹೆಚ್ಚು ಒತ್ತು ಕೊಟ್ಟರೆ ಶುಭವಿದೆ. ಅದೃಷ್ಟಸಂಖ್ಯೆ: 6

ವೃಶ್ಚಿಕ: ಕೆಂಪು ವಸ್ತ್ರವನ್ನು ಧರಿಸಿ ದ್ವಿಚಕ್ರ ವಾಹನ ಓಡಿಸಬೇಡಿ. ಕೆಲಸಕ್ಕೆ ಹೋಗುವಾಗ ಕುಲದೇವರನ್ನು ಪ್ರಾರ್ಥಿಸಿ. ಅದೃಷ್ಟಸಂಖ್ಯೆ: 4

ಧನಸ್ಸು: ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅನೇಕ ಕೆಲಸಕಾರ್ಯಗಳು ಹೊಸ ಹೊಸ ರೂಪದಲ್ಲಿ ಬೆನ್ನಟ್ಟಿ ಬರುತ್ತದೆ. ಅದೃಷ್ಟಸಂಖ್ಯೆ: 1

ಮಕರ: ನೂರಾರು ಆಸೆಗಳಲ್ಲಿ ಹತ್ತಾರು ನೆರವೇರಿದರೂ ಸಾಕು ಎನ್ನುವ ಮನೋಭಾವ ನಿಮ್ಮದು. ಅದರಿಂದ ನೆಮ್ಮದಿ. ಅದೃಷ್ಟಸಂಖ್ಯೆ: 3

ಕುಂಭ: ಆಲಸ್ಯ ಕಾಡಬಹುದು. ಸುಳ್ಳು ಹೇಳಿದರೆ ಸಿಕ್ಕಿಬೀಳುವಿರಿ. ಧನಸಹಾಯ ಸ್ವೀಕರಿಸುವ ಸಂದರ್ಭ ಬರಬಹುದು. ಅದೃಷ್ಟಸಂಖ್ಯೆ: 5

ಮೀನ: ಅಹಂ ಹಾಗೂ ತಾತ್ಸಾರ ಮನೋಭಾವ ಹೆಚ್ಚಾಗುತ್ತದೆ. ಮಾತಾಡುವಾಗ ಮನಸ್ಸನ್ನು ಹತೋಟಿಯಲ್ಲಿರಲಿ. ಅದೃಷ್ಟಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net