

ಮೇಷ: ಈಜುವ ಆಸೆ ಇದ್ದರೆ ಇಂದು ಬೇಡ. ನೀರು ಕುಡಿಯುವಾಗಲೂ ಅದರ ಶುದ್ಧತೆಯನ್ನು ಪರೀಕ್ಷಿಸಬೇಕು ಎನಿಸುತ್ತದೆ. ಅದೃಷ್ಟ ಸಂಖ್ಯೆ: 3
ವೃಷಭ: ಕೆಲವರಿಗೆ ಕೆಲವು ವಿಚಾರ ಅದೃಷ್ಟವನ್ನು ತರುತ್ತವೆ. ನಿಮಗೆ ಸಹೋದರರಿಂದ ಬಹಳ ಸಹಾಯ ಲಭಿಸಲಿದೆ. ಅದೃಷ್ಟ ಸಂಖ್ಯೆ: 7
ಮಿಥುನ: ಮೇಲಧಿಕಾರಿಗಳು ಅಥವಾ ಆಪ್ತ ಸ್ನೇಹಿತರು ಅರ್ಥವಾಗದಂತೆ ಮಾತಾಡಿ ನಿಮ್ಮನ್ನು ಇಕ್ಕಟ್ಟಿಗೆ ನೂಕಬಹುದು. ಅದೃಷ್ಟ ಸಂಖ್ಯೆ: 4
ಕಟಕ: ಸತ್ಯಮಾರ್ಗದ ನಿಮಗೆ ಚಿಕ್ಕ ಸುಳ್ಳನ್ನೂ ಹೇಳಲಾಗದೆ ಒದ್ದಾಟ ಎನಿಸಬಹುದು. ಆದರೂ ಸತ್ಯವನ್ನು ಬಿಡದಿರಿ. ಅದೃಷ್ಟ ಸಂಖ್ಯೆ: 6
ಸಿಂಹ: ನೀವು ಕಷ್ಟದಲ್ಲಿರುವುದು ಕಂಡರೂ ಬಂಧುಗಳು ಸಹಾಯಕ್ಕೆ ಬರುವುದಿಲ್ಲ ಎನ್ನುವುದೇ ಚಿಂತೆಯಾದೀತು. ಅದೃಷ್ಟ ಸಂಖ್ಯೆ: 9
ಕನ್ಯಾ: ಇತರರೊಂದಿಗೆ ಮಾತನಾಡುವಾಗ ಎಚ್ಚರ ಇರಲಿ. ನಿಮ್ಮ ಮಾತುಗಳಿಂದ ನೊಂದು ಮನಸ್ತಾಪವಾದೀತು. ಅದೃಷ್ಟ ಸಂಖ್ಯೆ: 7
ತುಲಾ: ಯಾವಾಗಲೋ ಮಾಡಿದ ತಪ್ಪಿಗೆ ಶಿಕ್ಷೆ ಆಗಬಹುದು. ಎಲ್ಲೂ ಜಗಳ ಮಾಡಬೇಡಿ. ಹಸಿರು ಬಣ್ಣ ಶುಭಕರ. ಅದೃಷ್ಟ ಸಂಖ್ಯೆ: 3
ವೃಶ್ಚಿಕ: ನಿಮಗೆ ನೀವೇ ಬಹಳ ಪ್ರಶ್ನೆ ಮಾಡಿಕೊಳ್ಳುತ್ತೀರಿ. ಆದರೆ ಉತ್ತರ ಸಿಗುವುದಿಲ್ಲ. ಈ ಕುರಿತಾಗಿ ಬೇಸರ ಮಾಡಿಕೊಳ್ಳಬೇಡಿ. ಅದೃಷ್ಟ ಸಂಖ್ಯೆ: 2
ಧನಸ್ಸು: ಯಾರೋ ನೆರವಾಗುತ್ತಾರೆಂದು ತಿಳಿದಿದ್ದರೆ ಹುಸಿಯಾಗಬಹುದು. ಯಾರೂ ನಿಮ್ಮ ಸಹಾಯಕ್ಕೆ ಬರುವುದಿಲ್ಲ. ಅದೃಷ್ಟ ಸಂಖ್ಯೆ: 6
ಮಕರ: ಯಾರ ಮಾತಿನ ಮೇಲೂ ನಂಬಿಕೆ ಬರುವುದಿಲ್ಲ. ಯಾರೂ ಸರಿ ಇಲ್ಲ ಎನಿಸುತ್ತದೆ. ಅದರೆ ಅದು ಸತ್ಯವಲ್ಲ. ಅದೃಷ್ಟ ಸಂಖ್ಯೆ: 5
ಕುಂಭ: ಹಠದ ಸ್ವಭಾವ ಹೆಚ್ಚಾಗುತ್ತಿದೆ. ನಿಮ್ಮ ಮಾತು, ಅಭಿಪ್ರಾಯವೇ ಮುಖ್ಯವಾಗಬೇಕು ಎಂದು ಪ್ರಯತ್ನಪಡುತ್ತೀರಿ. ಅದೃಷ್ಟ ಸಂಖ್ಯೆ: 4
ಮೀನ: ಅನವಶ್ಯಕ ಚಿಂತೆ ಮಾಡುತ್ತೀರಿ. ಯಾವ ವಿಚಾರಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕು ಎಂದು ಅರಿತರೆ ಒಳಿತು. ಅದೃಷ್ಟ ಸಂಖ್ಯೆ: 9