ಈ ರಾಶಿಯವರಿಗೆ ಇಂದು ಹಲವು ದಿನಗಳ ಕನಸು ನನಸು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಾರ್ವಜನಿಕ ಕ್ಷೇತ್ರದಲ್ಲಿ ವಿಶೇಷ ಮನ್ನಣೆ. ಹೊಸ ಯೋಜನೆಗಳು ಕಾರ್ಯಗತ. ಅನವಶ್ಯಕ ಖರ್ಚುಗಳು ಆಗಬಹುದು. ಶುಭಸಂಖ್ಯೆ: 9

ವೃಷಭ: ವೃತ್ತಿ ಕ್ಷೇತ್ರದಲ್ಲಿ ಹಿಂಬಡ್ತಿ ಸಾಧ್ಯತೆ. ಕಲಾವಿದರಿಗೆ ಕಳೆದುಕೊಂಡ ಅವಕಾಶ ಪ್ರಾಪ್ತಿ. ಸ್ಥಳ ಬದಲಾವಣೆಯ ಸಂಕಲ್ಪ. ಶುಭಸಂಖ್ಯೆ: 1

ಮಿಥುನ: ಕಷ್ಟಪಟ್ಟು ಗಳಿಸಿದ ಹಣದ ದುರುಪಯೋಗ. ಬಂಧುಗಳ ಆಗಮನ. ಸಂಗಾತಿಯ ಸಲಹೆ ಪಾಲಿಸಿ. ಧರ್ಮ ಕಾರ್ಯಾಸಕ್ತಿ. ಶುಭಸಂಖ್ಯೆ: 7

ಕಟಕ: ಸಾಲಗಾರರಿಂದ ತೊಂದರೆ. ಕುಟುಂಬದಲ್ಲಿ ಶುಭಕಾರ್ಯದ ಸಡಗರ. ಸಂಗೀತಗಾರರಿಗೆ ಕಲಾವಿದರಿಗೆ ಆರ್ಥಿಕ ಲಾಭ. ಶುಭಸಂಖ್ಯೆ: 1

ಸಿಂಹ: ನನೆಗುದಿಗೆ ಬಿದ್ದ ಕಾರ್ಯಕ್ಕೆ ಪುನರ್​ಚಾಲನೆ. ಕೃಷಿ ಭೂಮಿ ಖರೀದಿಗೆ ನಿರ್ಧಾರ. ಕಚೇರಿಯಲ್ಲಿ ಹೊಸ ಜವಾಬ್ದಾರಿ. ಶುಭಸಂಖ್ಯೆ: 2

ಕನ್ಯಾ: ಶತ್ರುಗಳ ಮುಂದೆ ಆತ್ಮಾಭಿಮಾನದಿಂದ ವರ್ತಿಸಿ. ಕೀಳರಿಮೆ ಸಲ್ಲ. ಉದ್ಯೋಗದ ನಿಮಿತ್ತ ದೂರಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 4

ತುಲಾ: ಆಸ್ತಿ ವಿಚಾರದಲ್ಲಿ ಹಿರಿಯರ ಸಹಾಯ ಅಗತ್ಯ. ಸೇವಾಕ್ಷೇತ್ರದಲ್ಲಿ ತೊಡಗಿಸಿಕೊಳ್ಳಿ. ಕೃಷಿಕರಿಗೆ ಲಾಭ. ಕಳೆದು ಹೋದ ವಸ್ತು ಲಭ್ಯ. ಶುಭಸಂಖ್ಯೆ:6

ವೃಶ್ಚಿಕ: ವ್ಯಾಪಾರದಲ್ಲಿ ಕೆಲಸಗಾರರ ಅಚಾತುರ್ಯದಿಂದ ಧನ ನಷ್ಟ. ಹಿತಶತ್ರುಗಳಿಂದ ದೂರವಿರಿ. ಸ್ತ್ರೀಯರಿಗೆ ಧನಲಾಭ ಸಾಧ್ಯತೆ. ಶುಭಸಂಖ್ಯೆ:1

ಧನುಸ್ಸು: ಹೃದಯ ಸಂಬಂಧಿ ಸಮಸ್ಯೆ. ಕಿರಿಯ ಸಹೋದ್ಯೋಗಿಗಳ ಅವಿಧೇಯತೆ. ಖರೀದಿಯಲ್ಲಿ ಮೋಸ ಸಾಧ್ಯತೆ. ಶುಭಸಂಖ್ಯೆ: 5

ಮಕರ: ವಿವಾಹ ಅಪೇಕ್ಷಿತರಿಗೆ ವಿವಾಹ ನಿಶ್ಚಯ. ಕುಟುಂಬದ ಪ್ರಮುಖ ನಿರ್ಧಾರದಲ್ಲಿ ಗೊಂದಲ. ಮಕ್ಕಳಿಂದ ಹಣದ ಖರ್ಚು. ಶುಭಸಂಖ್ಯೆ: 3

ಕುಂಭ: ಕುಟುಂಬದ ಸದಸ್ಯರಿಂದ ಮಾನಸಿಕ ಅಶಾಂತಿ. ಸಂಗಾತಿಯೊಂದಿಗೆ ವಿರಸ. ಹಿರಿಯರ ಮಾರ್ಗದರ್ಶನ ತೆಗೆದುಕೊಳ್ಳಿ. ಶುಭಸಂಖ್ಯೆ: 6

ಮೀನ: ತಾಯಿಯ ಪ್ರೀತಿ, ಬೆಂಬಲ ಪಡೆಯಲಿದ್ದೀರಿ. ಹಲವು ದಿನಗಳ ಕನಸು ನನಸು. ಹಿತಶತ್ರುಗಳಿಂದ ಕಿರಿಕಿರಿ. ಆರ್ಥಿಕ ಮುಗ್ಗಟ್ಟು. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net