

ಮೇಷ: ಕುಟುಂಬಸ್ಥರೊಂದಿಗೆ ಒಡನಾಟ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆಯಾಗಲಿದೆ. ತಾಯಿಯಿಂದ ಸಹಾಯ ದೊರೆಯುವುದು. ಶುಭಸಂಖ್ಯೆ: 5
ವೃಷಭ: ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆಯಾಗಬಹುದು. ಬಂಧುಗಳಿಂದ ಸಹಾಯದ ನಿರೀಕ್ಷೆ. ಮಾನಸಿಕ ಗೊಂದಲಗಳ ಕಿರಿಕಿರಿ. ಶುಭಸಂಖ್ಯೆ: 9
ಮಿಥುನ: ಆರ್ಥಿಕ ನಷ್ಟಗಳು ಉಂಟಾಗಿ ಬೇಸರವಾಗುವುದು. ಧಾರ್ವಿುಕ ಕಾರ್ಯಗಳಿಗೆ ಖರ್ಚು ಮಾಡುವಿರಿ. ದುಶ್ಚಟಗಳಿಂದ ತೊಂದರೆ. ಶುಭಸಂಖ್ಯೆ:1
ಕಟಕ: ವ್ಯಾಪಾರ ವ್ಯವಹಾರಗಳಲ್ಲಿ ಲಾಭವಾಗುವುದು. ವಸ್ತ್ರಾಭರಣ ಖರೀದಿಗೆ ಮನಸ್ಸು ಮಾಡುವಿರಿ. ಮಾನಸಿಕ ಅಸ್ಥಿರತೆ. ಶುಭಸಂಖ್ಯೆ: 4
ಸಿಂಹ: ಮಕ್ಕಳಿಂದ ಖರ್ಚು ಮತ್ತು ನಷ್ಟಗಳು ಉಂಟಾಗಲಿವೆ. ಉದ್ಯೋಗದಲ್ಲಿ ವಿಘ್ನ ಎದುರಿಸುವಿರಿ. ವಿದ್ಯಾಭ್ಯಾಸದಲ್ಲಿ ಸಮಸ್ಯೆ. ಶುಭಸಂಖ್ಯೆ: 7
ಕನ್ಯಾ: ಪ್ರಯಾಣದಲ್ಲಿ ಅನುಕೂಲ ಮತ್ತು ಲಾಭ. ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗುವಿರಿ. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 3
ತುಲಾ: ಉದ್ಯೋಗದಲ್ಲಿ ಅಡೆತಡೆ ಉಂಟಾಗಬಹುದು. ದುಃಖ ಮತ್ತು ವ್ಯಾಕುಲತೆ ಕಾಡಲಿದೆ. ಪ್ರಯಾಣದಲ್ಲಿ ನಿರಾಸೆಯಾಗುವುದು. ಶುಭಸಂಖ್ಯೆ: 9
ವೃಶ್ಚಿಕ: ವೈವಾಹಿಕ ಜೀವನದ ಚಿಂತೆ. ಒಪ್ಪಂದ ವ್ಯವಹಾರದಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ಸಂಗಾತಿಯಿಂದ ಅನುಕೂಲ. ಶುಭಸಂಖ್ಯೆ:1
ಧನುಸ್ಸು: ಸಾಲಬಾಧೆ ತುಂಬ ಕಾಡಲಿದೆ. ಶತ್ರು ಕಾಟಗಳು ಮನಸ್ಸಿನ ನೆಮ್ಮದಿಗೆ ಭಂಗ ತರುವವು. ಕಿರಿಯರಿಂದ ನಿಂದನೆ ಕೇಳಬೇಕಾದೀತು. ಶುಭಸಂಖ್ಯೆ: 6
ಮಕರ: ಕಲಾಕ್ಷೇತ್ರದವರೆಗೆ ಹಿನ್ನಡೆ. ಉದ್ಯೋಗದ ಚಿಂತೆ ಕಾಡಲಿದೆ. ವಿದ್ಯಾಭ್ಯಾಸದಲ್ಲಿ ಸಮಸ್ಯೆ ತಲೊದೋರಿದರೂ ಬಗೆಹರಿಸಿಕೊಳ್ಳಿ. ಶುಭಸಂಖ್ಯೆ: 9
ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ. ಧಾರ್ವಿುಕ ಕ್ಷೇತ್ರಗಳ ಭೇಟಿ ನೀಡುವಿರಿ. ಸ್ವಯಂ ಉದ್ಯೋಗ ಮಾಡುವವರಿಗೆ ಶುಭ. ಶುಭಸಂಖ್ಯೆ:1
ಮೀನ: ಅಲಂಕಾರಿಕ ವಸ್ತು ವ್ಯಾಪಾರದ ಆಲೋಚನೆ. ಅಧಿಕಾರಿ ವರ್ಗದವರಿಂದ ಸಮಸ್ಯೆಯಾಗುವುದು. ಉದ್ಯೋಗದ ಹುಡುಕಾಟ. ಶುಭಸಂಖ್ಯೆ: 9