

ಮೇಷ: ಹಿತ್ತಲ ಗಿಡ ಮದ್ದಲ್ಲ ಎಂದೆಲ್ಲ ಖಂಡಿತವಾಗಿಯೂ ಆಲೋಚನೆ ಮಾಡದಿರಿ. ರ್ತಾಕ ಮಾತುಗಳಿಂದ ಸಿದ್ಧಿಯ ಸವಿಯೇ ಲಭಿಸಲಿದೆ. ಶುಭಸಂಖ್ಯೆ: 7
ವೃಷಭ: ನಿಮ್ಮ ಪ್ರತಿಭಾಸಂಪನ್ನತೆ, ಶಕ್ತಿ, ಸಾಮರ್ಥ್ಯಗಳು ಯೋಗ್ಯವಾದಂತಹ ಮನೋಭಿಲಾಷೆಗಳನ್ನು ಸೂಕ್ತವಾಗಿ ಈಡೇರಿಸಿಕೊಡಲಿವೆ. ಶುಭಸಂಖ್ಯೆ: 4
ಮಿಥುನ: ಬೆಲೆಬಾಳುವ ವಸ್ತುಗಳ ಬಗ್ಗೆ ಸ್ವಲ್ಪ ಎಚ್ಚರ ವಹಿಸಿ. ರೆಪ್ಪೆ ಬಿಡಿಸುವುದರೊಳಗೆ ಕಾಣೆಯೇ ಆಗಬಹುದು. ಎಚ್ಚರದಿಂದಿರಿ. ಶುಭಸಂಖ್ಯೆ: 1
ಕಟಕ: ರಾಜಕಾರಣಿಗಳಿಗೆ ಚಾತುರ್ಯದಿಂದ ಕೂಡಿದ ಮಾತುಗಳ ಕಲಾತ್ಮಕ ಶಕ್ತಿಯಿಂದ ಯೋಗ್ಯ ಸ್ಥಾನಮಾನಗಳು ಒದಗಿಬರಲಿವೆ. ಶುಭಸಂಖ್ಯೆ: 9
ಸಿಂಹ: ಯಾರಿಗೂ ಸಾಲ ಕೊಡದಿರಿ. ವರ್ತಮಾನದ ಸಂದರ್ಭ ಸರಿಯಿಲ್ಲದ ಕಾರಣ ಮುಂದೆ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ. ಶುಭಸಂಖ್ಯೆ: 6
ಕನ್ಯಾ: ಮೌಲ್ಯಭರಿತವಾದ ಮಾತುಗಳನ್ನು ಆಡಲು ಮುಂದಾದರೂ ನಿಮ್ಮೊಡನೆ ಜಗಳ ಮಾಡುವ ಜನರಿದ್ದಾರೆ. ಸುಮ್ಮನಿದ್ದುಬಿಡಿ. ಶುಭಸಂಖ್ಯೆ: 3
ತುಲಾ: ಕೆಲಸಕ್ಕಾಗಿ ಪ್ರಯತ್ನಿಸುವುದು ಸರಿ. ಆದರೆ ಒಂದೇ ಒಂದು ಪ್ರಯತ್ನವನ್ನು ಮಾತ್ರ ನಂಬಿ ಕುಳಿತುಕೊಳ್ಳದಿದ್ದರೆ ಒಳಿತಿದೆ. ಶುಭಸಂಖ್ಯೆ: 8
ವೃಶ್ಚಿಕ: ವಿದೇಶದಲ್ಲಿಯೇ ಉನ್ನತವಾದ ವ್ಯಾಸಂಗ ಮಾಡುವ ಕನಸುಗಳನ್ನು ಬಿಡಿ. ಸ್ವದೇಶದಲ್ಲೂ ಅವಕಾಶ ಕೂಡಿಬರಲಿದೆ. ಶುಭಸಂಖ್ಯೆ: 5
ಧನಸ್ಸು: ಯಾರೇ ನಿಮ್ಮನ್ನು ಟೀಕಿಸಿದರೂ ಅವುಗಳನ್ನು ಧೈರ್ಯದಿಂದಲೇ ಎದುರಿಸಿ. ಖಂಡಿತವಾಗಿ ಮನಃಶಾಂತಿ ಕಳೆದುಕೊಳ್ಳದಿರಿ. ಶುಭಸಂಖ್ಯೆ: 2
ಮಕರ: ಪಾಂಡಿತ್ಯವನ್ನು ಸಂಪಾದಿಸಲು, ಹೆಸರು ಗಳಿಸಲು ಉತ್ತಮ ಅವಕಾಶಗಳಿವೆ. ಇಂದೇ ಶುಭಾರಂಭವನ್ನು ಮಾಡಿಬಿಡಿ. ಶುಭಸಂಖ್ಯೆ: 7
ಕುಂಭ: ಮೆಚ್ಚಿಕೊಳ್ಳುವಂತಹ ಆತ್ಮವಿಶ್ವಾಸ ನಿಮ್ಮದು. ಮತ್ತೊಮ್ಮೆ ಪರಿಪೂರ್ಣವಾಗಿ ಪ್ರಯತ್ನಿಸಿದರೆ ದೊಡ್ಡ ಮಟ್ಟದ ಗೆಲುವಾಗಲಿದೆ. ಶುಭಸಂಖ್ಯೆ: 1
ಮೀನ: ಬೌದ್ಧಿಕ ಕ್ರಿಯಾಶೀಲ ವ್ಯಕ್ತಿಗಳಿಗೆ ಉತ್ತಮ ಪ್ರಶಂಸೆ ಒದಗಿಬರಲಿದೆ. ಅತ್ಯುತ್ಸಾಹದಿಂದ ಸುಮ್ಮನೆ ಆಯಾಸಪಡದಿರಿ. ಶುಭಸಂಖ್ಯೆ: 4