ನಿತ್ಯಭವಿಷ್ಯ: ಈ ರಾಶಿಯವರು ರಾತ್ರಿ ವೇಳೆ ಒಂಟಿ ಆಗಿರಬಾರದು...

Nithya Bhavishya vvani
Published on

ಮೇಷ: ಕಾಯಕದ ಮೇಲಿನ ದೃಢವಾದ ನಿಷ್ಠೆ, ದೈಹಿಕ ಪರಿಶ್ರಮ ಇವೆಲ್ಲ ಸರಿ. ಆದರೆ ಖಂಡಿತವಾಗಿ ಆರೋಗ್ಯವನ್ನು ಕಡೆಗಣಿಸದಿರಿ. ಶುಭಸಂಖ್ಯೆ: 7

ವೃಷಭ: ಐಷಾರಾಮಿ ಜೀವನಕ್ಕಾಗಿನ ಅಭಿಲಾಷೆಗಳನ್ನು ಬಿಟ್ಟುಬಿಟ್ಟರೆ ಕ್ರಿಯಾಶೀಲತೆಯು ನಿಮಗೆ ಲಾಭವನ್ನು ತಂದುಕೊಡಲಿದೆ. ಶುಭಸಂಖ್ಯೆ: 5

ಮಿಥುನ: ನಿಮ್ಮ ನಿರ್ಲಕ್ಷ್ಯದಿಂದ ನಷ್ಟಕ್ಕೆ ದೊಡ್ಡ ದಾರಿ ಸೃಷ್ಟಿಯಾಗುತ್ತಿದೆ. ಈ ಸಮಸ್ಯೆಗೆ ನಿಮ್ಮಲ್ಲಿಯೇ ಯೋಗ್ಯ ಪರಿಹಾರವೂ ಇದೆ. ಶುಭಸಂಖ್ಯೆ: 3

ಕಟಕ: ವ್ಯಾವಹಾರಿಕ ವಿಚಾರ ಬೇರೆ. ಹೃದಯದ ಮಾತೇ ಬೇರೆ. ಆಯ್ಕೆ ಮಾಡುವಾಗ ಮಾತ್ರ ಎಚ್ಚರ ಇರಲೇಬೇಕು. ಶುಭಸಂಖ್ಯೆ: 1

ಸಿಂಹ: ಶ್ರದ್ಧೆಯಿಂದ ಗೆಲುವು ಹಾಗೂ ನೆಮ್ಮದಿ ಎರಡೂ ಸಿಗಲಿದೆ. ತಾಯಿ ಇಂದ್ರಾಣಿಯನ್ನು ನಂಬಿ ನಡೆದರೆ ಶುಭವಿದೆ. ಶುಭಸಂಖ್ಯೆ: 9

ಕನ್ಯಾ: ಸ್ನೇಹಿತರು ನೆರವು ನೀಡಲಾರರು ಎಂದಲ್ಲ. ಆದರೆ ಮುಂದೆ ದೊಡ್ಡ ಸಹಾಯವನ್ನೇ ನಿರೀಕ್ಷಿಸಿಯಾರು. ಎಚ್ಚರ. ಶುಭಸಂಖ್ಯೆ: 4

ತುಲಾ: ಪ್ರತಿಯೊಂದನ್ನೂ ಅಳೆದು ತೂಗಿ ನೋಡಿ ಸ್ವೀಕರಿಸುವ ಗುಣವೇ ನಿಮ್ಮನ್ನು ಕಾಪಾಡುವ ಸಂಜೀವಿನಿಯಾಗಲಿದೆ. ಶುಭಸಂಖ್ಯೆ: 2

ವೃಶ್ಚಿಕ: ಕೆಲಸದ ಸ್ಥಳದಲ್ಲಿ ಕಗ್ಗಂಟುಗಳು ನಿರ್ಮಾಣ ಆಗುವ ಸಂಭವವಿದೆ. ಆದಷ್ಟು ಜಾಣತನದಿಂದ ಸುರಕ್ಷಿತವಾಗಿರುವುದು ಉತ್ತಮ. ಶುಭಸಂಖ್ಯೆ: 6

ಧನುಸ್ಸು: ರಾತ್ರಿಯ ವೇಳೆ ಒಂಟಿಯಾಗಿರಬೇಡಿ. ಶ್ರೀ ಗುರು ದತ್ತಾತ್ರೇಯ ಸ್ತೋತ್ರವನ್ನು ಭಕ್ತಿಯಿಂದ ಪಠಿಸಿ. ಕ್ಷೇಮವಿದೆ. ಶುಭಸಂಖ್ಯೆ: 8

ಮಕರ: ಅರಿವಿಲ್ಲದೆ ನಿಮ್ಮಿಂದ ಕಾನೂನುವಿರೋಧಿ ಕಾರ್ಯ ಸಂಭವಿಸಬಹುದು. ಈ ಬಗ್ಗೆ ಕಾಳಜಿ ವಹಿಸಿದರೆ ಒಳಿತಾಗಲಿದೆ. ಶುಭಸಂಖ್ಯೆ: 7

ಕುಂಭ: ಅಪರಿಚಿತ ಅತಿಥಿಗಳನ್ನು ಸಂಧಿಸುವ ಸಾಧ್ಯತೆ ಇದೆ. ರ್ತಾಕವಾಗಿ ಯೋಚಿಸಿ ವರ್ತಿಸಿದರೆ ಲಾಭವನ್ನೇ ಪಡೆಯುವಿರಿ. ಶುಭಸಂಖ್ಯೆ: 5

ಮೀನ: ಸರಿಪಡಿಸಲಾಗದ ವಿರೋಧಿಗಳನ್ನು ನಿರ್ಲಕ್ಷಿಸಿಬಿಡಿ. ಇಲ್ಲವಾದರೆ ನಿಮಗೇ ಮುಂದೆ ಚಿಂತೆ ಸೃಷ್ಟಿಯಾಗಬಹುದು. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net