

ಮೇಷ: ವಿಶೇಷ ಧನಲಾಭ. ಆತ್ಮೀಯರ ಭೇಟಿಯಿಂದ ಸಂತಸ ಹಲವು ಕಾಲದಿಂದ ಬಾಧಿಸುತ್ತಿದ್ದ ರೋಗ ಶಮನ. ಶುಭಸಂಖ್ಯೆ: 3
ವೃಷಭ: ಅನವಶ್ಯಕ ತಿರುಗಾಟ, ಸಂಗಾತಿಯೊಂದಿಗೆ ವಿರಸ. ದೃಢ ನಿರ್ಧಾರಕ್ಕೆ ಪರದಾಟ. ಮಕ್ಕಳಿಂದ ಕಿರಿಕಿರಿ. ಶುಭಸಂಖ್ಯೆ: 5
ಮಿಥುನ: ಆತ್ಮವಿಶ್ವಾಸಕ್ಕೆ ಪ್ರಬಲ ಪ್ರತಿರೋಧ. ಮನಸ್ಸಿನ ಚಂಚಲತೆಯೇ ನಿಮ್ಮ ಅವನತಿಗೆ ಕಾರಣವಾದೀತು. ಹುಷಾರಾಗಿರಿ. ಶುಭಸಂಖ್ಯೆ: 7
ಕಟಕ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಸಹೋದರರಿಂದ ಆರ್ಥಿಕ ಸಹಾಯ. ವಿಶೇಷ ವಸ್ತು ಲಾಭ ಸಾಧ್ಯತೆ. ಶುಭಸಂಖ್ಯೆ: 8
ಸಿಂಹ: ಮನಸ್ಸಿಗೆ ಕ್ಲೇಶ. ಉದ್ಯೋಗ ವಿಚಾರದಲ್ಲಿ ಅವಮಾನ. ಬಹಳ ದಿನಗಳಿಂದ ನಿರೀಕ್ಷಿಸಿದ ಕೆಲಸದಲ್ಲಿ ವಿಘ್ನ. ಶುಭಸಂಖ್ಯೆ: 2
ಕನ್ಯಾ: ಉತ್ತಮ ಭೋಜನದ ಸಂತಸ. ಅನಿರೀಕ್ಷಿತ ಸಂತಸದ ಸುದ್ದಿ. ದಿನದ ಅಂತ್ಯದಲ್ಲಿ ಆತ್ಮೀಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 1
ತುಲಾ: ಅನವಶ್ಯಕ ದುಂದುವೆಚ್ಚ. ಕುಟುಂಬದಲ್ಲಿ ವಿರಸ. ಮನಶ್ಶಾಂತಿಗೆ ನಿಮ್ಮವರಿಂದಲೇ ತೊಂದರೆಯಾದೀತು. ಶುಭಸಂಖ್ಯೆ: 9
ವೃಶ್ಚಿಕ: ಕೇತು ರಾಶಿಗತನಾದಾಗ ಎಲ್ಲ ಕೆಲಸಗಳಲ್ಲಿ ವಿಲಂಬವಾದರೂ ಕಾರ್ಯಸಿದ್ಧಿ. ಅಂತ್ಯದಲ್ಲಿ ಜಯ ನಿಮ್ಮದೆ ಆಗಲಿದೆ. ಶುಭಸಂಖ್ಯೆ: 7
ಧನಸ್ಸು: ಉದ್ಯೋಗದಲ್ಲಿ ಸಂತಸ, ಸಮಾಧಾನ. ಹಲವು ದಿನಗಳಿಂದ ನನೆಗುದಿಗೆ ಬಿದ್ದ ಕೆಲಸಗಳು ಮುಕ್ತಾಯವಾಗಿ ನೆಮ್ಮದಿ. ಶುಭಸಂಖ್ಯೆ: 6
ಮಕರ: ದೈಹಿಕ ಶ್ರಮ. ಫಲಿತಾಂಶದಲ್ಲಿ ನಿರಾಸೆ ಕಾಡೀತು. ಒತ್ತಡದ ಜೀವನ. ಹೊಟ್ಟೆಗೆ ಸಂಬಂಧಪಟ್ಟಂತೆ ತೊಂದರೆ ಸಾಧ್ಯತೆ. ಶುಭಸಂಖ್ಯೆ:7
ಕುಂಭ: ಶತ್ರುಗಳಿಂದ ತೊಂದರೆ. ಯಾವುದರಲ್ಲೂ ದೃಢತೆ ಇಲ್ಲ. ಆಹಾರ ಸೇವಿಸುವಾಗ ಎಚ್ಚರ, ಹಿತಮಿತ ಆಗಿರಲಿ. ಶುಭಸಂಖ್ಯೆ: 5
ಮೀನ : ಇಷ್ಟಪಟ್ಟ ಸ್ಥಳಕ್ಕೆ ಭೇಟಿ ನೀಡುವಿರಿ. ಉತ್ತಮ ಭೋಜನದಿಂದ ಖುಷಿ. ಮಾತ್ರವಲ್ಲ, ಧನಲಾಭವೂ ಆಗಲಿದೆ. ಶುಭಸಂಖ್ಯೆ: 2