ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಸಹೋದ್ಯೋಗಿಗಳಿಂದ ಕಿರುಕುಳ..

Nitya-Bhavishya-vvani-1-2-1
Published on

ಮೇಷ: ನೆರೆಹೊರೆಯ ಜನರಲ್ಲಿ ಹೆಚ್ಚಿನ ಮಾತುಕತೆ, ಗೆಳೆತನ ಎಲ್ಲವೂ ಇರಲಿ. ಆದರೆ ಎಲ್ಲರನ್ನೂ ಪೂರ್ತಿ ನಂಬಲು ಹೋಗದಿರಿ. ಶುಭಸಂಖ್ಯೆ: 5

ವೃಷಭ: ಕೆಲಸದ ಸ್ಥಳದಲ್ಲಿ ಅನಗತ್ಯವಾದ ಕಿರಿಕಿರಿಗಳು ಉಂಟಾಗಬಹುದು. ಆದರೂ ದಿನದ ಕೊನೆಗೆ ಮೇಲಧಿಕಾರಿಗಳ ಮೆಚ್ಚುಗೆ ಲಭ್ಯ. ಶುಭಸಂಖ್ಯೆ: 2

ಮಿಥುನ: ಹುಟ್ಟುಗುಣ ಸುಟ್ಟರೂ ಹೋಗಲಾರದು ಎಂಬ ಗಾದೆಮಾತಿದೆ. ಬದಲಾವಣೆಗೆ ಕೊಂಚ ಅವಕಾಶ ಮಾಡಿಕೊಂಡರೆ ಕ್ಷೇಮವಿದೆ. ಶುಭಸಂಖ್ಯೆ: 9

ಕಟಕ: ಹೊಸದಾದ ಮನೆಯನ್ನು ರೂಪಿಸುವಂತಹ ವಿಚಾರಕ್ಕೆ ಸಹಕಾರಿಯಾಗಿ ಪ್ರಮುಖವಾದೊಂದು ಬೆಳವಣಿಗೆ ಸದ್ಯವೇ ಜರುಗಲಿದೆ. ಶುಭಸಂಖ್ಯೆ: 4

ಸಿಂಹ: ಶ್ರೀ ಆದಿತ್ಯ ಹೃದಯ ಸ್ತೋತ್ರವನ್ನು ಪಠಣ ಮಾಡುವುದು ಆರೋಗ್ಯಲಾಭಕ್ಕೆ ಕಾರಣವಾಗುವ ಸಂಜೀವಿನಿಯಾಗಿ ರಕ್ಷಿಸಲಿದೆ. ಶುಭಸಂಖ್ಯೆ: 7

ಕನ್ಯಾ: ಭಿನ್ನಾಭಿಪ್ರಾಯಗಳಿದ್ದರೂ ಗೊಂದಲಕ್ಕೆ ಮಾತ್ರ ಅವಕಾಶ ಬೇಡ. ಆತ್ಮೀಯರಿಂದ ಒತ್ತಡಗಳಿಗೆ ಸ್ವಲ್ಪ ವಿರಾಮ ದೊರೆಯಲಿದೆ. ಶುಭಸಂಖ್ಯೆ: 3

ತುಲಾ: ಸಹೋದ್ಯೋಗಿಗಳು ಕಿರುಕುಳ ನೀಡಬಹುದಾದ ಸಾಧ್ಯತೆಯಿದೆ. ಆದರೆ ಒಮ್ಮೆಲೇ ರೇಗಬೇಡಿ. ಜಾಣ್ಮೆಯಿಂದಲೇ ವರ್ತಿಸಿ. ಶುಭಸಂಖ್ಯೆ: 8

ವೃಶ್ಚಿಕ: ಸಿಹಿ - ಕಹಿ ಸುದ್ದಿಗಳೆರಡನ್ನೂ ಕೇಳುವಂಥ ಸಂದರ್ಭ ಬರಲಿದೆ. ಆದರೆ ನಿರಾಶೆಪಡುವುದು ಬೇಡ. ಮುಂದೆ ಒಳಿತಾಗಲಿದೆ. ಶುಭಸಂಖ್ಯೆ: 1

ಧನುಸ್ಸು: ಅನಾರೋಗ್ಯದಿಂದ ಬಹಳ ಬೇಗನೆ ಚೇತರಿಕೆ ಹೊಂದುವಿರಿ. ಕುಲದೇವರಿಗೆ ಅರ್ಚನೆ, ಅಭಿಷೇಕ ಮಾಡಿಸುವುದು ಸೂಕ್ತ. ಶುಭಸಂಖ್ಯೆ: 6

ಮಕರ: ನವ ಉದ್ಯಮಿಗಳಿಗೆ ಹೆಚ್ಚಿನ ಲಾಭಕ್ಕಾಗಿನ ಸುದ್ದಿಯೊಂದು ಸಿಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣವಿರಲಿದೆ. ಶುಭಸಂಖ್ಯೆ: 2

ಕುಂಭ: ಮುಂದಿನ ದಿನಗಳಲ್ಲಿನ ಕೆಲವು ಪ್ರಮುಖವಾದ ಯೋಜನೆಗಳಿಗಾಗಿ ಪೂರ್ವಭಾವಿ ಮಾತುಕತೆಗೆ ಬೇಕಾದ ಚಾಲನೆ ದೊರೆಯಲಿದೆ. ಶುಭಸಂಖ್ಯೆ: 9

ಮೀನ: ಹಣಕಾಸಿನ ವಿಚಾರದಲ್ಲಿ ವಿಶೇಷ ಎಚ್ಚರ ಇರಲಿ. ಇಲ್ಲವಾದರೆ ಇಟ್ಟ ಹಣವೆಲ್ಲ ಮಾಯವೇ ಆದೀತು. ಮಹಾಲಕ್ಷ್ಮಿಯ ಧ್ಯಾನ ಮಾಡಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net