ನಿತ್ಯಭವಿಷ್ಯ| ಈ ರಾಶಿಯವರಿಗೆ ಖರೀದಿಯಲ್ಲಿ ಮೋಸ ಆಗಲಿದೆ.. ಎಚ್ಚರ!

Nitya-Bhavishya-vvani-1-2-1-1
Published on

ಮೇಷ: ಆಸ್ತಿ ವಿವಾದವನ್ನು ಸೌಹಾರ್ದದಿಂದ ಬಗೆಹರಿಸಿ. ಹಿತಶತ್ರುಗಳ ಬಗ್ಗೆ ಜಾಗ್ರತೆ. ಸುಬ್ರಹ್ಮಣ್ಯನನ್ನು ಆರಾಧಿಸಿ. ಶುಭಸಂಖ್ಯೆ: 3

ವೃಷಭ: ಮಕ್ಕಳ ಯಶಸ್ಸಿನಿಂದ ಉತ್ಸಾಹ. ಮನೆಯಲ್ಲಿ ಶುಭಕಾರ್ಯದ ಮುನ್ಸೂಚನೆ. ಭೂವಿವಾದಕ್ಕೆ ಪರಿಹಾರ. ಶುಭಸಂಖ್ಯೆ: 5

ಮಿಥುನ: ತಾಯಿಯಿಂದ ಸಾಂತ್ವನ, ಆಶೀರ್ವಾದ. ಹೊಸ ವಸ್ತು ಖರೀದಿ. ದಿನದಾಂತ್ಯದಲ್ಲಿ ಬೇಸರ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 2

ಕಟಕ: ಸಹೋದರಿಯ ಭೇಟಿ. ಉತ್ತಮ ಭೋಜನ. ಆಸ್ತಿಗೆ ಸಂಬಂಧಿಸಿ ಸಕಾರಾತ್ಮಕ ಫಲಿತಾಂಶ ಲಭ್ಯ. ಶಿವನನ್ನು ಪೂಜಿಸಿ. ಶುಭಸಂಖ್ಯೆ: 4

ಸಿಂಹ: ವಿದ್ಯಾರ್ಥಿಗಳಿಗೆ ಯಶಸ್ಸು. ಉನ್ನತ ವಿದ್ಯಾಭ್ಯಾಸದ ಅವಕಾಶ. ಕುಟುಂಬದಲ್ಲಿ ಸಡಗರ. ಮಾತಿಗೆ ಮಿತಿ ಇರಲಿ. ಶುಭಸಂಖ್ಯೆ: 2

ಕನ್ಯಾ: ಬಂಧುಗಳೊಂದಿಗೆ ತಾಳ್ಮೆಯಿರಲಿ. ವೃಥಾ ತಿರುಗಾಟ. ಖರೀದಿಯಲ್ಲಿ ಮೋಸ. ದಿನದ ಅಂತ್ಯದಲ್ಲಿ ಉತ್ತಮ ನಿರ್ಧಾರ. ಶುಭಸಂಖ್ಯೆ: 6

ತುಲಾ: ಅನವಶ್ಯಕ ಖರ್ಚುಗಳಿಗೆ ಕಡಿವಾಣವಿರಲಿ. ನಿರ್ಧಾರ ಕೈಗೊಳ್ಳುವಾಗ ಸರಿಯಾಗಿ ಯೋಚಿಸಿ. ಸ್ನೇಹಿತನ ಸಹಾಯ. ಶುಭಸಂಖ್ಯೆ: 5

ವೃಶ್ಚಿಕ: ಹಳೆಯ ಸ್ನೇಹಿತರ ಭೇಟಿ. ಉತ್ತಮ ಕಾಲಕ್ಷೇಪ. ಅನಿರೀಕ್ಷಿತವಾಗಿ ಬಂಧುಗಳಿಂದ ಲಾಭ. ದಿನದ ಅಂತ್ಯದಲ್ಲಿ ಸಮಸ್ಯೆ. ಶುಭಸಂಖ್ಯೆ: 9

ಧನಸ್ಸು: ಸಂಶೋಧಕರಿಗೆ ಯಶಸ್ಸು. ಕಲಾವಿದರಿಗೆ ಅವಕಾಶ. ಸರ್ಕಾರಿ ಕೆಲಸದಲ್ಲಿ ನಿರಾಸೆ. ಮರಳಿ ಯತ್ನಿಸಿ. ದುರ್ಗೆಯನ್ನು ಪೂಜಿಸಿ. ಶುಭಸಂಖ್ಯೆ: 1

ಮಕರ: ಗುರು ಪ್ರಾರ್ಥನೆಯೊಂದಿಗೆ ದಿನ ಆರಂಭಿಸಿ. ಜಯ ಸಿಗುತ್ತದೆ. ಮನೆ ನಿರ್ವಣಕ್ಕೆ ನಿರ್ಧಾರ. ಕೃಷಿಭೂಮಿ ಖರೀದಿ. ಶುಭಸಂಖ್ಯೆ: 8

ಕುಂಭ: ಸತ್ಕಾರ್ಯಗಳಿಗೆ ಸಹಾಯ ಮಾಡಿ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಅನವಶ್ಯಕ ಖರ್ಚು. ಗಣೆೇಶನನ್ನು ಆರಾಧಿಸಿ. ಶುಭಸಂಖ್ಯೆ: 6

ಮೀನ : ರಾಜಕಾರಣಿಗಳಿಗೆ ಜನ ಮನ್ನಣೆ. ಅಧಿಕಾರದ ದುರುಪಯೋಗ. ಮಾನಸಿಕ ವ್ಯಾಕುಲತೆ. ಕಾಲಭೈರವನನ್ನು ಪೂಜಿಸಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net