ಈ ರಾಶಿಯ ರಾಜಕಾರಣಿಗಳಿಗೆ ಇಂದು ಉತ್ತಮ ಕಾಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಂಗಳ ಕಾರ್ಯದಲ್ಲಿ ಭಾಗಿಯಾಗುವಿರಿ. ಮಕ್ಕಳಿಂದ ಶುಭವಾರ್ತೆ ಬರಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಿ ಸಂತಸ. ಶುಭಸಂಖ್ಯೆ: 9

ವೃಷಭ: ಬ್ಯಾಂಕಿಂಗ್ ವ್ಯವಹಾರಸ್ಥರಿಗೆ ಆದಾಯ. ಬಂಧುಗಳಿಂದ ಸಹಕಾರ. ದೈಹಿಕವಾಗಿ ಬಳಲುವಿಕೆ. ಧ್ಯಾನದ ಮೊರೆ ಹೋಗಿ. ಶುಭಸಂಖ್ಯೆ: 1

ಮಿಥುನ: ಗುತ್ತಿಗೆ ವ್ಯಾಪಾರಸ್ಥರಿಗೆ ಅಭಿವೃದ್ಧಿ. ಉದ್ಯೋಗದಲ್ಲಿ ಪ್ರಗತಿ. ಅವಕಾಶಗಳ ಸದುಪಯೋಗ ಪಡೆದುಕೊಳ್ಳುವುದು ಜಾಣತನ. ಶುಭಸಂಖ್ಯೆ: 3

ಕಟಕ: ವಿವಾಹ ವಿಚಾರದಲ್ಲಿ ತೊಂದರೆ. ಲೋಹದ ವಸ್ತುಗಳಿಂದ ಹುಷಾರಾಗಿರಿ. ಲೇವಾದೇವಿಯ ವ್ಯವಹಾರದಿಂದ ದೂರವಿರಿ. ಶುಭಸಂಖ್ಯೆ: 8

ಸಿಂಹ: ಷೇರು ವ್ಯವಹಾರಗಳಲ್ಲಿ ಮಿಶ್ರಫಲ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಶುಭಸಂಖ್ಯೆ: 5

ಕನ್ಯಾ: ತೈಲ ಮಾರಾಟದಿಂದ ಲಾಭ. ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ. ಪ್ರಯಾಣದಲ್ಲಿ ಅಪಾಯವಿದೆ, ಜಾಗೃತರಾಗಿರಿ. ಶುಭಸಂಖ್ಯೆ: 6

ತುಲಾ: ಹಣಕಾಸಿನ ಮುಗ್ಗಟ್ಟು ತಲೆದೋರಲಿದೆ. ಪ್ರಯಾಣದಲ್ಲಿ ತೊಂದರೆಯಾದೀತು. ವ್ಯವಹಾರದಲ್ಲಿ ಎಚ್ಚರದಿಂದಿರುವುದು ಕ್ಷೇಮ. ಶುಭಸಂಖ್ಯೆ: 6

ವೃಶ್ಚಿಕ: ಪುಸ್ತಕ ವ್ಯಾಪಾರಸ್ಥರಿಗೆ ಶುಭದಾಯಕ ದಿನ. ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ತಾಳುವಿರಿ. ಆರೋಗ್ಯದಲ್ಲಿ ಸುಧಾರಣೆ ಸಾಧ್ಯವಾಗುವುದು. ಶುಭಸಂಖ್ಯೆ: 4

ಧನುಸ್ಸು: ಸಂಯಮದ ಅವಶ್ಯಕತೆ ತುಂಬ ಇದೆ. ಸಾಕುಪ್ರಾಣಿಗಳಿಂದ ತೊಂದರೆಯಾಗುವ ಸಾಧ್ಯತೆ. ರಾಸಾಯನಿಕ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 2

ಮಕರ: ವಿವಾಹ ವಿಚಾರದಲ್ಲಿ ಶುಭಸಮಾಚಾರ ಬರುವುದು. ವಿದ್ಯಾರ್ಥಿಗಳಿಗೆ ಪ್ರಗತಿಯಾಗಲಿದೆ. ಆರೋಗ್ಯಕ್ಕಾಗಿ ಆಹಾರ ಕ್ರಮದಲ್ಲಿ ಕಾಳಜಿ ವಹಿಸಿ. ಶುಭಸಂಖ್ಯೆ: 7

ಕುಂಭ: ರಾಜಕಾರಣಿಗಳಿಗೆ ಉತ್ತಮ ಕಾಲ. ಔಷಧ ವ್ಯಾಪಾರಸ್ಥರಿಗೆ ಅಧಿಕ ಲಾಭ. ಕೃಷಿಕರಿಗೆ ಬೆಳೆಗೆ ಉತ್ತಮ ಧಾರಣೆ ಸಿಕ್ಕು ಸಂತಸ. ಶುಭಸಂಖ್ಯೆ: 7

ಮೀನ: ಉದ್ಯೋಗಸ್ಥ ಮಹಿಳೆಯರಿಗೆ ಉತ್ತಮ ದಿನ. ಹಣ್ಣು ವ್ಯಾಪಾರಸ್ಥರಿಗೆ ಆದಾಯ. ಸಮಯ ಸಾಧಕರಿಂದ ಅಂತರ ಇಟ್ಟುಕೊಳ್ಳಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net