

ಮೇಷ: ಏನೂ ಶ್ರಮಪಡದೆಯೇ ಹಣ ಗಳಿಸುವ ದುಸ್ಸಾಹಸವನ್ನು ಬಿಡಿ. ಪರಿಶ್ರಮದಿಂದಲೇ ನಿಮಗಿಂದು ಲಾಭವಿದೆ. ಶುಭಸಂಖ್ಯೆ: 9
ವೃಷಭ: ನೀವಷ್ಟೇ ಉದ್ವೇಗವನ್ನು ನಿರ್ವಹಿಸುವುದರ ಬದಲು ಸಂಗಾತಿಯೊಡನೆ ರ್ಚಚಿಸಿದರೆ ಹೆಚ್ಚಿನ ನೆಮ್ಮದಿ ಸಿಗಲಿದೆ. ಶುಭಸಂಖ್ಯೆ: 7
ಮಿಥುನ: ತಪ್ಪುಗಳನ್ನು ಮಾಡುವುದು ಸಹಜ. ಅದನ್ನು ಅರಿತು ಮರಳಿ ಕಾರ್ಯದ ಪ್ರಯತ್ನ ಮಾಡಿ. ಯಶಸ್ವಿಯಾಗಲಿದೆ. ಶುಭಸಂಖ್ಯೆ: 8
ಕಟಕ: ಆರೋಗ್ಯದ ವಿಚಾರದಲ್ಲಿ ಹೆಚ್ಚಿನದಾಗಿ ಚಿಂತಿಸುವ ಅಗತ್ಯವಿಲ್ಲ. ಸತ್ಯನಾರಾಯಣನನ್ನು ಧ್ಯಾನಿಸಿದರೆ ಸಮಾಧಾನವಿದೆ. ಶುಭಸಂಖ್ಯೆ: 6
ಸಿಂಹ: ಕೆಲಸದ ಸ್ಥಳದಲ್ಲಿ ಗೊಂದಲಗಳೇ ತುಂಬಿದ್ದರೂ ಅವುಗಳನ್ನು ತಾಳ್ಮೆಯಿಂದಲೇ ಸ್ವೀಕಾರ ಮಾಡಿ. ಸಫಲತೆ ಉಂಟಾಗಲಿದೆ. ಶುಭಸಂಖ್ಯೆ: 4
ಕನ್ಯಾ: ಅನಗತ್ಯ ಅಪವಾದ ಬಂದರೂ ಹೆದರದೆಯೇ ನಿಮ್ಮ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ. ಅಪವಾದ ಬೇಗ ತೊಲಗಲಿದೆ. ಶುಭಸಂಖ್ಯೆ: 5
ತುಲಾ: ಎಲ್ಲ ಬಗೆಯ ಸ್ವಭಾವಗಳ ಜನರೊಡನೆಯೂ ಇದ್ದು ಜಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ. ಇದರಿಂದ ಲಾಭಕ್ಕೆ ದಾರಿ ಇದೆ. ಶುಭಸಂಖ್ಯೆ: 1
ವೃಶ್ಚಿಕ: ಪ್ರಯಾಣ ಮಾಡಬೇಕಾದ ಸಂದರ್ಭ ಬರಬಹುದು. ಅತೀ ಅನಿವಾರ್ಯವಾದರಷ್ಟೇ ಎಚ್ಚರಿಕೆಯಿಂದ ಹೋಗಿ. ಶುಭಸಂಖ್ಯೆ: 3
ಧನಸ್ಸು: ಪ್ರತಿಕೂಲತೆಗಳು ಎದುರಾದರೂ ಆತ್ಮವಿಶ್ವಾಸ ಕಳೆದುಕೊಳ್ಳದಿರಿ. ಗುರಿಯತ್ತ ಬೇಗನೆ ಸಾಗುವಂತಹ ಅವಕಾಶವಿದೆ. ಶುಭಸಂಖ್ಯೆ: 2
ಮಕರ: ಅಪರಿಚಿತರಿಂದ ಹೊಸ ಬಗೆಯ ಸಹಾಯ ದೊರೆಯಲಿದೆ. ಹೇರಳ ಅವಕಾಶಗಳು ಕೂಡ ಲಭ್ಯವಾಗಲಿವೆ. ಶುಭಸಂಖ್ಯೆ: 9
ಕುಂಭ: ತಾಳ್ಮೆಯೊಂದಿಗೆ ಇರಲು ಕಲಿಯಬೇಕು. ಆಗ ಹೊಸಬರೂ ಸ್ನೇಹಿತರಾಗಿ ಸಹಾಯ ನೀಡಲು ಒದಗಿಬರುತ್ತಾರೆ. ಶುಭಸಂಖ್ಯೆ: 6
ಮೀನ: ದೈನಂದಿನ ಕೆಲಸಗಳಿಂದ ಏಕತಾನತೆ, ಬೇಸರ ಉಂಟಾಗಬಹುದು. ಅದರಲ್ಲಿಯೇ ಒಳಿತನ್ನು ಕಾಣಲು ಪ್ರಯತ್ನಿಸಿ. ಶುಭಸಂಖ್ಯೆ: 7